ಬೂಸ್ಟರ್ ಡೋಸ್‌ ಡ್ರೈವ್ ಆರಂಭವಾಗುವ ಒಂದು ದಿನದ ಮೊದಲು ಕೋವಿಡ್‌ ಲಸಿಕೆ ಪ್ರತಿ ಡೋಸ್‌ ಬೆಲೆ 225 ರೂ.ಗೆ ಇಳಿಸಿದ ಕೋವಿಶೀಲ್ಡ್, ಕೋವಾಕ್ಸಿನ್

ನವದೆಹಲಿ: ಕೋವಿಡ್ ಲಸಿಕೆ ಬೂಸ್ಟರ್ ಶಾಟ್‌ಗಳು ಎಲ್ಲ ಭಾರತೀಯ ವಯಸ್ಕರಿಗೆ ಲಭ್ಯವಾಗುವ ಒಂದು ದಿನದ ಮೊದಲು, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಬೆಲೆಗಳನ್ನು ಅರ್ಧಕ್ಕಿಂತ ಹೆಚ್ಚು ಕಡಿತಗೊಳಿಸಲಾಗಿದೆ.
ಎರಡೂ ಲಸಿಕೆ ಡೋಸ್‌ಗಳ ಬೆಲೆ ಈಗ 225 ರೂ.ಗಳಾಗಿರುತ್ತದೆ. ಕೋವಿಶೀಲ್ಡ್ ಅನ್ನು ₹ 600 ರಿಂದ ಕಡಿತಗೊಳಿಸಿದ್ದರೆ, ಕೋವಾಕ್ಸಿನ್ ಪ್ರತಿ ಡೋಸ್‌ಗೆ 1,200 ರೂ.ಗಳು ಕಡಿಮೆಯಾಗಿದೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದರ್ ಪೂನಾವಾಲಾ ಮತ್ತು ಭಾರತ್ ಬಯೋಟೆಕ್ ಸಹ ಸಂಸ್ಥಾಪಕಿ ಸುಚಿತ್ರಾ ಎಲಾ ಇಂದು,ಶನಿವಾರ ಟ್ವಿಟರ್‌ನಲ್ಲಿ ಘೋಷಣೆ ಮಾಡಿದ್ದಾರೆ. ಕೇಂದ್ರದ ಜತೆ ಚರ್ಚೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿದ ನಂತರ, ಖಾಸಗಿ ಆಸ್ಪತ್ರೆಗಳಿಗೆ ಕೋವಿಶೀಲ್ಡ್‌ ಲಸಿಕೆ ದರವನ್ನು ಪ್ರತಿ ಡೋಸ್‌ಗೆ 600 ರೂ.ಗಳಿಂದ ರಿಂದ 225 ರೂ.ಗಳಿಗೆ ಪರಿಷ್ಕರಿಸಲು SII ನಿರ್ಧರಿಸಿದೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ. ಎಲ್ಲಾ 18+ ಜನರಿಗೆ ಬೂಸ್ಟರ್‌ ಡೋಸ್ ತೆರೆಯಲು ಕೇಂದ್ರದ ಈ ನಿರ್ಧಾರವನ್ನು ನಾವು ಮತ್ತೊಮ್ಮೆ ಶ್ಲಾಘಿಸುತ್ತೇವೆ ಎಂದು ಪೂನಾವಾಲಾ ಟ್ವೀಟ್ ಮಾಡಿದ್ದಾರೆ.
ಮುನ್ನೆಚ್ಚರಿಕೆ ಡೋಸ್ ಲಭ್ಯವಾಗುವಂತೆ ಮಾಡುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ,

ಕೋವಾಕ್ಸಿನ್‌ ಬೆಲೆಯನ್ನು ಪ್ರತಿ ಡೋಸ್‌ಗೆ ₹ 1200 ರಿಂದ ₹ 225 ರೂ.ಗಳಿಗೆ ಖಾಸಗಿ ಆಸ್ಪತ್ರೆಗಳಿಗೆ ಪರಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಶ್ರೀಮತಿ ಎಲಾ ಕೂಡಲೇ ಟ್ವೀಟ್ ಮಾಡಿದ್ದಾರೆ.
ದೇಶದ 15 ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯ ಸುಮಾರು 96 ಪ್ರತಿಶತದಷ್ಟು ಜನರು ಕನಿಷ್ಠ ಒಂದು ಕೋವಿಡ್‌-19 ಲಸಿಕೆ ಡೋಸ್ ಪಡೆದಿದ್ದಾರೆ ಮತ್ತು ಸುಮಾರು 83 ಪ್ರತಿಶತದಷ್ಟು ಜನರು ಎರಡೂ ಡೋಸ್‌ಗಳನ್ನು ಸ್ವೀಕರಿಸಿದ್ದಾರೆ ಎಂದು ಸರ್ಕಾರ ಹೇಳಿದೆ.

ಪ್ರಮುಖ ಸುದ್ದಿ :-   ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ, ಸುಳ್ಳು ಪ್ರಕರಣ ದಾಖಲು : ಬಂಧನದ ನಂತರ ರೇವಣ್ಣ ಮೊದಲ ಪ್ರತಿಕ್ರಿಯೆ

ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೆಲಸಗಾರರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ 2.4 ಕೋಟಿಗೂ ಹೆಚ್ಚು ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಲಾಗಿದೆ. ಅಲ್ಲದೆ, 12-14 ವರ್ಷ ವಯಸ್ಸಿನ 45 ಪ್ರತಿಶತ ಫಲಾನುಭವಿಗಳು ಮೊದಲ ಡೋಸ್ ಅನ್ನು ಸ್ವೀಕರಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಎರಡನೇ ಡೋಸ್ ನೀಡಿದ ಒಂಬತ್ತು ತಿಂಗಳ ನಂತರ 18 ವರ್ಷಕ್ಕಿಂತ ಮೇಲ್ಪಟ್ಟವರು ಮುನ್ನೆಚ್ಚರಿಕೆ ಡೋಸ್‌ಗೆ ಅರ್ಹರಾಗಿರುತ್ತಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ.
ಪ್ರಥಮ ಮತ್ತು ಎರಡನೇ ಡೋಸ್‌ಗಾಗಿ ಸರ್ಕಾರಿ ಲಸಿಕೆ ಕೇಂದ್ರಗಳ ಮೂಲಕ ನಡೆಯುತ್ತಿರುವ ಉಚಿತ ಲಸಿಕೆ ಕಾರ್ಯಕ್ರಮ ಮತ್ತು ಆರೋಗ್ಯ ಕಾರ್ಯಕರ್ತರು, ಮುಂಚೂಣಿಯ ಕಾರ್ಯಕರ್ತರು ಮತ್ತು 60+ ಜನಸಂಖ್ಯೆಗೆ ಮುನ್ನೆಚ್ಚರಿಕೆ ಡೋಸ್ ಮುಂದುವರಿಯುತ್ತದೆ ಮತ್ತು ಅದನ್ನು ವೇಗಗೊಳಿಸಲಾಗುತ್ತದೆ ಎಂದು ಶುಕ್ರವಾರ ಸರ್ಕಾರದ ಹೇಳಿಕೆ ತಿಳಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಹೆಗಲ ಮೇಲೆ ಕೈಹಾಕಿದ ಕಾಂಗ್ರೆಸ್​ ಮುಖಂಡನಿಗೆ ಕಪಾಳಕ್ಕೆ ಹೊಡೆದ ಡಿಸಿಎಂ ಡಿ.ಕೆ.ಶಿವಕುಮಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement