ಪಾಕ್‌ ಜೈಲಿನಲ್ಲಿದ್ದ ಇಬ್ಬರು ಭಾರತೀಯರು ಹಸ್ತಾಂತರ

ಲಾಹೋರ್: ಅಕ್ರಮ ಗಡಿ ಪ್ರವೇಶದ ಆರೋಪದ ಮೇಲೆ ಎಂಟು ವರ್ಷಗಳಿಂದ ಪಾಕಿಸ್ತಾನದ ಜೈಲಿನಲ್ಲಿದ್ದ ಇಬ್ಬರು ಭಾರತೀಯರನ್ನು ವಾಘಾ ಗಡಿಯಲ್ಲಿ ಗಡಿ ಭದ್ರತಾ ಪಡೆಯ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2013ರಲ್ಲಿ ಭಾರತೀಯ ಪ್ರಜೆಗಳಾದ ಶರ್ಮಾ ರಜಪೂತ್ ಮತ್ತು ರಾಮ್ ಬುಹಾದರ್ ಅವರನ್ನು ಕಾಶ್ಮೀರದಿಂದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಪ್ರದೇಶವನ್ನು ಪ್ರವೇಶಿಸಿದರು ಎಂದು ಪಾಕಿಸ್ತಾನದ ರೇಂಜರ್‍ಗಳು ಬಂಧಿಸಿದ್ದರು.
ನಂತರ, ಅವರು ಅಜಾಗರೂಕತೆಯಿಂದ ಗಡಿಯನ್ನು ದಾಟಿದ್ದಾರೆ ಎಂದು ಅವರ ಚಿತ್ರಗಳು ಮತ್ತು ಇತರ ದಾಖಲೆ ಗಳನ್ನು ಭಾರತದೊಂದಿಗೆ ಹಂಚಿಕೊಳ್ಳಲಾಯಿತು ಮತ್ತು ಅಂತಿಮವಾಗಿ ಅವರನ್ನು ತನ್ನ ನಾಗರಿಕರೆಂದು ಒಪ್ಪಿಕೊಂಡ ನಂತರ, ರೇಂಜರ್‍ಗಳು ಅವರನ್ನು ಬಿಎಸ್‍ಎಫ್‍ಗೆ ಹಸ್ತಾಂತರಿಸಿದರೆ.
ಪಾಕಿಸ್ತಾನದ ಅಧಿಕಾರಿಗಳು ಒಂದು ವರ್ಷದ ಹಿಂದೆ ಬೇಹುಗಾರಿಕೆ ಮತ್ತು ಅಕ್ರಮ ಗಡಿ ದಾಟಿದ ಆರೋಪಗಳಲ್ಲಿ ಬಂಧಿಸಿದ್ದ 19 ಭಾರತೀಯ ಪ್ರಜೆಗಳ ಪ್ರಕರಣಗಳು ಇನ್ನೂ ಫೆಡರಲ್ ರಿವ್ಯೂ ಬೋರ್ಡ್‍ನಲ್ಲಿ ಬಾಕಿ ಉಳಿದಿವೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement