2026ರ ಕರ್ನಾಟಕ ಬಜೆಟ್‌ ಹೈಲೈಟ್ಸ್‌

  ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ 2026-27ನೇ ಸಾಲಿನ ವಾರ್ಷಿಕ ಬಜೆಟ್ ಮಂಡಿಸಿದರು. ಬಜೆಟ್‌ ಗಾತ್ರ ಹೆಚ್ಚಾಗಿದ್ದರೂ, ಆರ್ಥಿಕವಾಗಿ ದೊಡ್ಡ ಮಟ್ಟದ ಸಾಲದ ಹೊರೆಯೂ ಬೀಳಲಿದೆ.  ಸಿದ್ದರಾಮಯ್ಯ ಅವರು 4,48,004 ಕೋಟಿ ರೂಪಾಯಿಗಳ ಬೃಹತ್ ಗಾತ್ರದ ಬಜೆಟ್ ಮಂಡಿಸಿದರೂ ಇದು 22,957 ಕೋಟಿ ರೂಪಾಯಿಗಳ ಕೊರತೆ ಬಜೆಟ್‌ ಆಗಿದೆ. ಇದೇ ವೇಳೆ 1,32,190 ಕೋಟಿ ರೂಪಾಯಿಗಳ ಸಾಲ ಪಡೆಯಲು ತೀರ್ಮಾನಿಸಿದ್ದಾರೆ.
ಎಲ್ಲಿಂದ ಸಾಲ ಪಡೆಯಲಾಗುತ್ತದೆ..?
 ಇದನ್ನು ಸರಿದೂಗಿಸಲು ಮತ್ತು ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರ ವಿವಿಧ ಮೂಲಗಳಿಂದ ಸಾಲ ಪಡೆಯುತ್ತಿದೆ. ಬಹಿರಂಗ ಮಾರುಕಟ್ಟೆಯಿಂದ 1,22,340 ಕೋಟಿ ರೂಪಾಯಿ ಸಾಲ ಪಡೆಯಲು ತೀರ್ಮಾನಿಸಲಾಗಿದೆ. ಕೇಂದ್ರ ಸರ್ಕಾರದಿಂದ 6,810 ಕೋಟಿ ರೂಪಾಯಿ ಸಾಲ ಪಡೆಯಲು ಯೋಜನೆ ಮಾಡಲಾಗಿದೆ. ಅದರೊಂದಿಗೆ ಎಲ್‌ಐಸಿ/ಎನ್‌ಎಸ್‌ಎಸ್‌ಎಫ್‌/ಎನ್‌ಸಿಡಿಸಿ/ಆರ್‌ಐಡಿಎಫ್ (LIC/NSSF/NCDC/ RIDF) ಸಂಸ್ಥೆಗಳಿಂದ 2,850 ಕೋಟಿ ರೂ, ಇತರೆ ಜಮೆ ಹಾಗೂ ವಸೂಲಿಯಿಂದ 190 ಕೋಟಿ ರೂಪಾಯಿ ಪಡೆಯಲು ತೀರ್ಮಾನಿಸಿದೆ.
 ಬಜೆಟ್‌ನ ಪ್ರಕಾರ, ಈ ಆರ್ಥಿಕ ವರ್ಷದ ಅಂತ್ಯಕ್ಕೆ ಕರ್ನಾಟಕದ ಒಟ್ಟು ಸಾಲವು 8,27,389 ಕೋಟಿ ರೂಪಾಯಿಗಳಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇದು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (GSDP) ಶೇ. 24.94 ರಷ್ಟಾಗಲಿದ್ದು, ಆರ್ಥಿಕ ಶಿಸ್ತಿನ ಮಿತಿಯಲ್ಲೇ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಸುಮಾರು 60,000 ಕೋಟಿ ರೂಪಾಯಿಗಳಿಗೂ ಅಧಿಕ ವೆಚ್ಚವಾಗುತ್ತಿದ್ದರೂ, ಬಂಡವಾಳ ವೆಚ್ಚಗಳಿಗೆ ತೊಂದರೆಯಾಗದಂತೆ  ಬೃಹತ್ ಸಾಲದ ಮೊರೆ ಹೋಗಲಾಗಿದೆ. ಈ ಬಾರಿ ತೆರಿಗೆ ಸಂಗ್ರಹದ ಗುರಿ ಹೆಚ್ಚಿಸಲಾಗಿದ್ದು, 2.20 ಲಕ್ಷ ಕೋಟಿ ರೂಪಾಯಿಗಳ ಸ್ವಂತ ತೆರಿಗೆ ಸಂಗ್ರಹದ ಗುರಿ ಹಾಕಿಕೊಳ್ಳಲಾಗಿದೆ. ಜಿಎಸ್‌ಡಿಪಿ ಬೆಳವಣಿಗೆಯ ದರವು ಆಶಾದಾಯಕವಾಗಿರುವುದರಿಂದ ಸಾಲದ ಪ್ರಮಾಣವು ನಿರ್ವಹಿಸಬಲ್ಲ ಮಟ್ಟದಲ್ಲಿದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.
ಈ ಇಲಾಖೆಗಳಿಗೆ ರೆವಿನ್ಯೂ ಗುರಿ
ವಾಣಿಜ್ಯ ಇಲಾಖೆ: 1,25,000 ಕೋಟಿ ರೂ.ಗುರಿ
ಸಾರಿಗೆ ಇಲಾಖೆ : 15.500 ಕೋಟಿ ರೂ.ಗುರಿ
ನೋಂದಣಿ ಮುದ್ರಾಂಕ: 29000 ಕೋಟಿ ರೂ.ಗುರಿ
ಅಬಕಾರಿ : 45000 ಕೋಟಿ ರೂ.ಗುರಿ
ಗಣಿ : 11000 ಕೋಟಿ ರೂ.ಗುರಿ
ಬಜೆಟ್‌ ಹೈಲೈಟ್ಸ್‌…
ಕರ್ನಾಟಕದಲ್ಲಿ 8.1ರಷ್ಟು ಜಿಡಿಪಿ ಬೆಳವಣಿಗೆ
 ಕೃಷ್ಣಾ ಮೇಲ್ದಂಡೆ ಯೋಜನೆಗೆ ಒತ್ತು, ಭೂಸ್ವಾಧೀನ ಪ್ರಕ್ರಿಯೆಗೆ ₹8-15 ಸಾವಿರ ಕೋಟಿ ರೂ. ಅಂದಾಜು.
ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ಹಣ ಮೀಸಲು
ಅನ್ನ ಭಾಗ್ಯ ಯೋಜನೆಗೆ 6,200 ಕೋಟಿ ಮೀಸಲು
ಗೃಹ ಜ್ಯೋತಿ ಯೋಜನೆಗೆ ಈ ವರ್ಷ 10,578 ಕೋಟಿ ಮೀಸಲು
ಶಕ್ತಿ ಯೋಜನೆಗೆ 5,300 ಕೋಟಿ ಹಣ ಮೀಸಲು
 38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹30000 ಕೋಟಿ ಸಾಲ
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆ ನಿಷೇಧ
ಶಾಲಾ, ಕಾಲೇಜುಗಳಲ್ಲಿ ಖಾಲಿ ಇರುವ 15 ಸಾವಿರ ಬೋಧಕ ಹುದ್ದೆಗಳ ಭರ್ತಿ
ಪದವಿ, ಇಂಜಿನಿಯರಿಂಗ್ ಕಾಲೇಜುಗಳಲ್ಲಿ 2 ಸಾವಿರ ಬೋಧಕ ಹುದ್ದೆಗಳ ಭರ್ತಿ
ಶೈಕ್ಷಣಿಕ & ಸಾಮಾಜಿಕ ದೌರ್ಜನ್ಯ ತಡೆಗೆ ರೋಹಿತ್ ವೇಮುಲ ಕಾಯ್ದೆ ಜಾರಿ
18 ವರ್ಷದ ಒಳಗಿನ ಮಕ್ಕಳ ಡಯಾಬಿಟಿಸ್ ಚಿಕಿತ್ಸೆಗೆ ಉಚಿತ ಇನ್ಸುಲಿನ್
ಆರೋಗ್ಯ ಇಲಾಖೆಯಯಲ್ಲಿ ಖಾಲಿ ಇರುವ 2500 ಹುದ್ದೆಗಳ ಭರ್ತಿ
ಕಾರವಾರ, ಯಾದಗಿರಿಯಲ್ಲಿ 100 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ವಿಕ್ಟೋರಿಯಾ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಮರುನಾಮಕರಣ
ಕುಕ್ಕೆ ಶ್ರೀ ಸುಬ್ರಮಣ್ಯ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಪ್ರತ್ಯೇಕ ಪ್ರಾಧಿಕಾರ ಸ್ಥಾಪನೆ
ಐಟಿಐ ಕೋರ್ಸ್ ಮಾಡೋರಿಗೆ ಪದವಿ ಪೂರ್ವ ಪ್ರಮಾಣ ಪತ್ರ ವಿತರಣೆ
ಬೆಂಗಳೂರಲ್ಲಿ 158 ಕಿ.ಮೀ. ಉದ್ದದ ರಸ್ತೆಗಳ ವೈಟ್ ಟಾಪಿಂಗ್
ಈ ವರ್ಷ 41 ಕಿ.ಮೀ. ಮೆಟ್ರೋ ಮಾರ್ಗ ಪೂರ್ಣಕ್ಕೆ ಯೋಜನೆ
ಬೆಂಗಳೂರಿನಲ್ಲಿ  40 ಕಿಮೀ ಉದ್ದದ ಸುರಂಗ ಮಾರ್ಗ ₹40,000 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಯೋಜನೆ
ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜನೆಕ್ಕೆ 1250 ಚಾರ್ಜಿಂಗ್ ಪಾಯಿಂಟ್
ಬೆಳಗಾವಿಯಲ್ಲಿ 1 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್ ಅಭಿವೃದ್ಧಿ
ರಾಮನಗರ, ಶಿಡ್ಲಘಟ್ಟ, ಹಾವೇರಿ, ತಾಂಡವಪುರ, ಕಲಬುರಗಿಯಲ್ಲಿ  ಸಿಲ್ಕ್​ ಪಾರ್ಕ್​ಗಳ ಸ್ಥಾಪನೆ
ಬೆಂಗಳೂರು, ಬೀದರ ವಿವಿಯ ಪಶು ಆಸ್ಪತ್ರೆಗಳಲ್ಲಿ ಸಿ.ಟಿ ಸ್ಕ್ಯಾನಿಂಗ್​ ಕೇಂದ್ರ
ಬೆಂಗಳೂರು, ಬೀದರಿ​ನಲ್ಲಿ ‘ಶ್ವಾನ ಸಂತಾನ ನಿಯಂತ್ರಣ ಕೇಂದ್ರ’ ಸ್ಥಾಪನೆ
ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ, ಚಿಕ್ಕಮಗಳೂರಲ್ಲಿ ಮತ್ಸ್ಯ ದರ್ಶಿನಿ ಸ್ಥಾಪನೆ
ಮೈಸೂರು, ಹುಬ್ಬಳ್ಳಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ
ಶ್ರೀ ಮಾತಾ ವೈಷ್ಣೋದೇವಿ ದೇವಾಲಯ ಯಾತ್ರೆ ಕೈಗೊಳ್ಳುವವರಿಗೆ 5000 ರೂ. ಸಹಾಯ ಧನ
ಸಂತ ಶಿಶುನಾಳ ಶರೀಫರ ಹೆಸರಲ್ಲಿ 10 ಹೊಸ ವಸತಿ ಶಾಲೆಗಳ ಸ್ಥಾಪನೆ
25 ಹೊಸ ಅಲ್ಪಸಂಖ್ಯಾತ ಮೆಟ್ರಿಕ್​​ ವಿದ್ಯಾರ್ಥಿ ನಿಲಯ ಸ್ಥಾಪನೆ
50 ಸರ್ಕಾರಿ ಕಾಲೇಜುಗಳಲ್ಲಿ ಆಧುನಿಕ 10 AI ಪ್ರಯೋಗಾಲಯ ಸ್ಥಾಪನೆ
ಸಾರಿಗೆ ನೌಕರರ ವೇತನ ಬಾಕಿ ಪಾವತಿಗಾಗಿ 1,271 ಕೋಟಿ ರೂ. ಮೀಸಲು
ಕೊರಟಗೆರೆ ತಾಲೂಕಿನ ವಡೇರಹಳ್ಳಿಯಲ್ಲಿ 12 ಟಿಎಂಸಿ ಸಾಮರ್ಥ್ಯದ ಡ್ಯಾಂ ನಿರ್ಮಾಣ
100 ಉರ್ದು ಶಾಲೆಗಳ ಹೈಟೆಕ್ ಉನ್ನತೀಕರಣಕ್ಕೆ 400 ಕೋಟಿ ರೂ.
ಅಲ್ಪಸಂಖ್ಯಾತ ಸಮುದಾಯದ ಬಡ ಪ್ರತಿಭಾವಂತ 5,000 ವಿದ್ಯಾರ್ಥಿಗಳಿಗೆ ತಲಾ 50,000 ರೂ. ಮೌಲ್ಯದ ಲ್ಯಾಪ್ಟಾಪ್
ಜೈನ, ಬೌದ್ಧ, ಸಿಖ್  ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 100 ಕೋಟಿ ರೂ. ಮೀಸಲು
ಬೆಂಗಲೂರಿನಲ್ಲಿ ಸ್ತನ, ಗರ್ಭಕೋಶ ಕ್ಯಾನ್ಸರ್​ಗೆ ಲಸಿಕಾ ಕೇಂದ್ರ
ರಾಯಚೂರು, ಬಾಗಲಕೋಟೆ, ವಿಜಯಪುರ, ಬೀದರ್‌, ಕೊಪ್ಪಳ ಚಿತ್ರದುರ್ಗ, ಮಂಡ್ಯ, ಭದ್ರಾವತಿ, ಕೆಜಿಎಫ್‌ನಲ್ಲಿ ಇಎಸ್‌ಐ (ESI) ಆಸ್ಪತ್ರೆ ಉನ್ನತೀಕರಣ
ಆಯುಷ್ಮಾನ್‌ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಆರೋಗ್ಯ ಸೌಲಭ್ಯಕ್ಕೆ 400 ಕೋಟಿ ರೂ.
ಬೆಂಗಳೂರಿನಲ್ಲಿ 2ನೇ ಏರ್ಪೋರ್ಟ್‌ ಯೋಜನೆ ಪ್ರಸ್ತಾಪ
9 ರೈಲ್ವೇ ಮಾರ್ಗಕ್ಕೆ 600 ಕೋಟಿ ರೂ ಘೋಷಣೆ
ಕುಂಬಾರ, ತಿಗಳ, ಗಾಣಿಗ, ಕೊಡವ, ಉಪ್ಪಾರ, ಈಡಿಗ, ಕಾಡುಗೊಲ್ಲ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮಗಳ ಸ್ಥಾಪನೆ
ಮೀನಾಗರರ ಪ್ರೋತ್ಸಾಹ ಧನ ₹20,000 ಗಳಿಗೆ ಏರಿಕೆ, ಮಂಗಳೂರು ವಿವಿಯಲ್ಲಿ ವಿಶೇಷ ಮೀನುಗಾರಿಕಾ ವಿಭಾಗ
ರೈತರಿಗೆ ‘ವಸುಧಾಮೃತ’ ಯೋಜನೆ ಮೂಲಕ ಮಣ್ಣಿನ ಗುಣಮಟ್ಟ ಸುಧಾರಣೆ, 7 ಲಕ್ಷ ರೈತರಿಗೆ ಹನಿ ನೀರಾವರಿ ಸೌಲಭ್ಯ ಮತ್ತು ಕೃಷಿ ಯಂತ್ರೋಪಕರಣ ವಿತರಣೆ
ಕರ್ನಾಟಕ ಲ್ಯಾಂಡ್‌ ಸ್ಟಾಕ್ (Land Stack) ಯೋಜನೆಯಡಿ ಭೂಮಿ, ಮೋಜಿಣಿ, ಕಾವೇರಿ, ಇ-ಸ್ವತ್ತು, ಇ-ಆಸ್ತಿಯಲ್ಲಿರುವ ಜಮೀನು/ಆಸ್ತಿಯ ದತ್ತಾಂಶಗಳನ್ನು GIS-ಆಧಾರಿತ ಡಿಜಿಟಲ್ ವೇದಿಕೆಯಲ್ಲಿ ಸಮಗ್ರವಾಗಿ ಕ್ರೋಢೀಕರಿಸಿ ಏಕರೂಪದಲ್ಲಿ ದಾಖಲೆಗಳನ್ನು ನಿರ್ವಹಣೆ
ʻಭೂಮಿ-8.0ʼ ಸಾಫ್ಟ್‌ವೇರ್‌  ಸುಮಾರು 50 ಕೋಟಿ ರೂ.ಗಳಲ್ಲಿ ಅಭಿವೃದ್ಧಿ
ಕಂದಾಯ ಇಲಾಖೆಯ 43 ಸೇವೆಗಳ ಪಾರದರ್ಶಕತೆ ಮತ್ತು ನಿಖರತೆಗೆ E-KYC ಮತ್ತು ಫೇಸ್‌ ರೆಕಗ್ನಿಶನ್‌ (Face Recognition) ಕಡ್ಡಾಯಕ್ಕೆ ಚಿಂತನೆ
ಉದ್ಯೋಗಿ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ಒಂದು ದಿನದ ವೇತನ ಸಹಿತ ರಜೆಗೆ ಅವಕಾಶ
2029 ರ ವೇಳೆಗೆ ರಾಜ್ಯದಲ್ಲಿ 500 ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ) ಸ್ಥಾಪನೆ, 3.5 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ
ಮದ್ಯ ಪ್ರಿಯರಿಗೆ ಸುಂಕದ ಶಾಕ್ : ಮದ್ಯದಲ್ಲಿನ ಆಲ್ಕೋಹಾಲ್ ಅಂಶ ಆಧರಿಸಿ ತೆರಿಗೆ, 45000 ಕೋಟಿ ರೂ. ಸಂಗ್ರಹದ ಗುರಿ
ಇದೇ ವರ್ಷ ರೊಬೊಟಿಕ್ಸ್ ಮತ್ತು AI ಕ್ಯಾಂಪಸ್ ಸ್ಥಾಪನೆ
ಉತ್ತಮ ಕಲಿಕಾ-ಉಜ್ವಲ ಭವಿಷ್ಯ’ ಯೋಜನೆ; 800 ಕೆಪಿಎಸ್‌ ಶಾಲೆ ಮೇಲ್ದರ್ಜೆಗೆ; ಗುಣಮಟ್ಟದ ಶಿಕ್ಷಣಕ್ಕೆ 3900 ಕೋಟಿ ರೂ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement