ಕೊವಿಡ್ -19 ಚಿಕಿತ್ಸೆಯಲ್ಲಿ ಪೆಜಿಲೇಟೆಡ್ ಇಂಟರ್ಫೆರಾನ್ ಆಲ್ಫಾ 2 ಬಿ ಬಳಕೆಗಾಗಿ ಡಿಸಿಜಿಐ ಜೊತೆ ಹೆಚ್ಚುವರಿ ಸೂಚನೆಯ ಅನುಮೋದನೆಗಾಗಿ ಅರ್ಜಿ ಸಲ್ಲಿಸಿದೆ ಎಂದು ಝೈಡಸ್ ಕ್ಯಾಡಿಲಾ ಸೋಮವಾರ ಪ್ರಕಟಿಸಿದೆ.
ಪೆಜಿಲೇಟೆಡ್ ಇಂಟರ್ಫೆರಾನ್ ಆಲ್ಫಾ 2 ಬಿ ಒಂದಿಗಿನ ತನ್ನ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳು ಕೊವಿಡ್-19 ಚಿಕಿತ್ಸೆಯಲ್ಲಿ ಭರವಸೆಯ ಫಲಿತಾಂಶಗಳನ್ನು ತೋರಿಸಿದೆ ಎಂದು ಝೈಡಸ್ ಕ್ಯಾಡಿಲಾ ಪ್ರಕಟಿಸಿದೆ.
ಕೊವಿಡ್-19 ರೋಗ ನಿರ್ವಹಣೆಯಲ್ಲಿ ಒಂದು ಪ್ರಗತಿಯಾಗಬಹುದು, ಮಧ್ಯಂತರ ಫಲಿತಾಂಶಗಳು ಪೆಗ್ಐಎಫ್ಎನ್ (PegIFN )ಅನ್ನು ಮೊದಲೇ ನಿರ್ವಹಿಸಿದಾಗ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ರೋಗದ ಮುಂದುವರಿದ ಹಂತಗಳಲ್ಲಿ ಕಂಡುಬರುವ ಹೆಚ್ಚಿನ ತೊಂದರೆಗಳನ್ನು ತಪ್ಪಿಸಬಹುದು ಎಂದು ಕಂಪನಿ ತಿಳಿಸಿದೆ.
ಮೂರನೇ ಹಂತದ ಪ್ರಯೋಗಗಳ ಮಧ್ಯಂತರ ಫಲಿತಾಂಶಗಳು ಹೆಚ್ಚಿನ ವೈದ್ಯಕೀಯ ಸುಧಾರಣೆಯನ್ನು ತೋರಿಸುತ್ತವೆ ಎಂದು ಕಂಪನಿ ತಿಳಿಸಿದ್ದು
ಚಿಕಿತ್ಸೆ ಪಡೆದ ದಿನದಿಂದ 91.15% ರೋಗಿಗಳ ಆರ್ಟಿ-ಪಿಸಿಆರ್ ಋಣಾತ್ಮಕವಾಗಿದೆ ಎಂದು ಹೇಳಿಕೊಂಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ