ಬೆಂಗಳೂರಿನ ಐಐಎಸ್‌ಸಿ ಮೇಲಿನ ದಾಳಿ ರೂವಾರಿ, ಲಷ್ಕರ್-ಎ-ತೊಯ್ಬಾದ ನೊಟೋರಿಯಸ್‌ ಭಯೋತ್ಪಾದಕ ಸೈಫುಲ್ಲಾ ಖಾಲಿದ್‌ ಹತ್ಯೆ

ಇಸ್ಲಾಮಾಬಾದ್: ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (ಎಲ್‌ಇಟಿ) ನ ಉನ್ನತ ಕಮಾಂಡರ್ ಸೈಫುಲ್ಲಾ ಅವರನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅಪರಿಚಿತ ದಾಳಿಕೋರರು ಕೊಂದಿದ್ದಾರೆ ಎಂದು ವರದಿಯಾಗಿದೆ.
ಈತ ಪಾಕಿಸ್ತಾನದ ಸಿಂಧ್‌ನ ಬಾಡಿನ್ ಜಿಲ್ಲೆಯಲ್ಲಿ ಕೊಲ್ಲಲ್ಪಟ್ಟ. ಮೂಲಗಳ ಪ್ರಕಾರ, ಭಾನುವಾರ ಸಿಂಧ್‌ನ ಬಾಡಿನ್ ಜಿಲ್ಲೆಯ ಮಟ್ಲಿ ತಾಲೂಕಿನಲ್ಲಿ ಸೈಫುಲ್ಲಾ ಕೊಲ್ಲಲ್ಪಟ್ಟ. ಈತನ ಸಾವು ಈ ಪ್ರದೇಶದಲ್ಲಿ ಎಲ್‌ಇಟಿಯ ಕಾರ್ಯಾಚರಣೆಗಳಿಗೆ ಗಮನಾರ್ಹ ಹೊಡೆತ ಎಂದು ಹೇಳಲಾಗಿದೆ.
ಮೊಹಮ್ಮದ್ ಸಲೀಮ್, ವಿನೋದಕುಮಾರ, ಖಾಲಿದ್, ವನಿಯಾಲ್, ವಾಜಿದ್ ಮತ್ತು ಸಲೀಂ ಭಾಯ್ ಸೇರಿದಂತೆ ಬಹು ಹೆಸರುಗಳಿಂದ ಕರೆಯಲ್ಪಡುತ್ತಿದ್ದ ಸೈಫುಲ್ಲಾ, ಎಲ್‌ಇಟಿಯ ಕಾರ್ಯಾಚರಣೆಗಳು, ನೇಮಕಾತಿ, ನಿಧಿಸಂಗ್ರಹಣೆ ಮತ್ತು ಗಡಿಯಾಚೆಗಿನ ಒಳನುಸುಳುವಿಕೆಯಲ್ಲಿ ಪ್ರಮುಖವಾಗಿ ಭಾಗಿಯಾಗಿದ್ದ.

ಸೈಫುಲ್ಲಾ ಭಾರತದಲ್ಲಿ ಹಲವಾರು ಉನ್ನತ ಮಟ್ಟದ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ ಹಾಗೂ ಮಾಸ್ಟರ್‌ಮೈಂಡ್‌ ಆಗಿದ್ದ ಎಂದು ಹೇಳಲಾಗಿದೆ. 2001 ರಲ್ಲಿ ಉತ್ತರ ಪ್ರದೇಶದ ರಾಂಪುರದಲ್ಲಿರುವ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಶಿಬಿರದ ಮೇಲೆ ದಾಳಿಯಲ್ಲಿ ಭಾಗಿಯಾಗಿದ್ದ. 2001ರ ಉತ್ತರ ಪ್ರದೇಶದ ರಾಂಪುರ ಸಿಆರ್‌ಪಿಎಫ್ ಶಿಬಿರದ ಮೇಲಿನ ದಾಳಿ, 2005ರ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ (IISC) ಮೇಲಿನ ದಾಳಿ ಮತ್ತು 2006ರ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಪ್ರಧಾನ ಕಚೇರಿಯ ಮೇಲಿನ ದಾಳಿಯನ್ನು ಈತನೇ ನಡೆಸಿದ್ದ ಎನ್ನಲಾಗಿದೆ.

ನೇಪಾಳ ಮೂಲದ ಕಾರ್ಯಾಚರಣೆಗಳು
ಸೈಫುಲ್ಲಾ ನೇಪಾಳದಲ್ಲಿ ಪ್ರಮುಖ ಎಲ್‌ಇಟಿ ಮಾಡ್ಯೂಲ್ ಅನ್ನು ನಿರ್ವಹಿಸುತ್ತಿದ್ದನೆಂದು ತಿಳಿದುಬಂದಿದೆ, ಇದು ಇಂಡೋ-ನೇಪಾಳ ಗಡಿಯ ಮೂಲಕ ಭಯೋತ್ಪಾದಕರು ಭಾರತಕ್ಕೆ ನುಸುಳಲು ಅನುಕೂಲ ಮಾಡಿಕೊಟ್ಟಿತ್ತು. ಲಷ್ಕರ್-ಎ-ತೈಬಾ ಮತ್ತು ಅದರ ರಾಜಕೀಯ ಪಕ್ಷವಾದ ಜಮಾತ್-ಉದ್-ದವಾ (ಜೆಯುಡಿ) ಎರಡಕ್ಕೂ ಮೂಲಭೂತೀಕರಣ ಮತ್ತು ನಿಧಿಸಂಗ್ರಹಣೆಯಲ್ಲಿಯೂ ಈತ ಭಾಗಿಯಾಗಿದ್ದ.
ಸೈಫುಲ್ಲಾ ನೇಪಾಳದ ನಾಗರಿಕಳಾದ ನಗ್ಮಾ ಬಾನು ಅವರನ್ನು ವಿವಾಹವಾಗಿದ್ದ ಎಂದು ವರದಿಯಾಗಿದೆ, ಇದು ಈ ಪ್ರದೇಶದಲ್ಲಿ ಆತನ ಕಾರ್ಯಾಚರಣೆಯ ನೆಲೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಅನುಕೂಲವಾಯಿತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement