ಅಫ್ಘಾನಿಸ್ತಾನ ಸರ್ಕಾರ ರಚನೆ ಅಂತಿಮಗೊಳಿಸಿದ ತಾಲಿಬಾನ್, ಸಮಾರಂಭಕ್ಕೆ ಚೀನಾ, ರಷ್ಯಾ, ಪಾಕಿಸ್ತಾನಕ್ಕೆ ಆಹ್ವಾನ

ನವದೆಹಲಿ: ಪಂಜಶೀರ್ ಕಣಿವೆಯನ್ನು “ಸಂಪೂರ್ಣ ವಶಪಡಿಸಿಕೊಳ್ಳಲಾಗಿದೆ” ಎಂದು ಘೋಷಿಸಿದ ನಂತರ ತಾಲಿಬಾನ್‌ಗಳು ಅಫ್ಘಾನಿಸ್ತಾನದಲ್ಲಿ ಮುಂದಿನ ಸರ್ಕಾರವನ್ನು ರಚಿಸುವ ಅಂತಿಮ ಹಂತದಲ್ಲಿದೆ ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಅಂತಿಮ ಹಂತದಲ್ಲಿದೆ ಮತ್ತು ತಾಲಿಬಾನ್ ಪಾಕಿಸ್ತಾನ, ಟರ್ಕಿ, ಕತಾರ್, ರಷ್ಯಾ, ಚೀನಾ ಮತ್ತು ಇರಾನ್ ಅನ್ನು ಸಮಾರಂಭಕ್ಕೆ ಆಹ್ವಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಸೋಮವಾರ ಕಾಬೂಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ “ಯುದ್ಧ ಕೊನೆಗೊಂಡಿದೆ ಮತ್ತು ತಾವು ಸ್ಥಿರ ಅಫ್ಘಾನಿಸ್ತಾನ ಹೊಂದುವ ಭರವಸೆ ಹೊಂದಿದ್ದಾರೆ” ಎಂದು ಹೇಳಿದರು. “ಯಾರು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳುತ್ತಾರೋ ಅವರು ಜನರು ಮತ್ತು ದೇಶದ ಶತ್ರುಗಳು” ಎಂದು ಅವರು ಹೇಳಿದರು.
“ಆಕ್ರಮಣಕಾರರು ಎಂದಿಗೂ ನಮ್ಮ ದೇಶವನ್ನು ಪುನರ್ನಿರ್ಮಾಣ ಮಾಡುವುದಿಲ್ಲ ಎಂದು ಜನರು ತಿಳಿದಿರಬೇಕು ಮತ್ತು ಅದನ್ನು ಮಾಡುವುದು ನಮ್ಮ ಜನರ ಜವಾಬ್ದಾರಿಯಾಗಿದೆ” ಎಂದು ಅವರು ಹೇಳಿದರು.
ಕತಾರ್, ಟರ್ಕಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಕಂಪನಿಯ ತಾಂತ್ರಿಕ ತಂಡಗಳು “ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯನ್ನು ಪುನರಾರಂಭಿಸಲು ಕೆಲಸ ಮಾಡುತ್ತಿವೆ” ಎಂದು ತಾಲಿಬಾನ್ ಹೇಳಿದೆ.
ಪಂಜಶೀರ್ ಕಣಿವೆಯಲ್ಲಿ ವಿಜಯದ ಘೋಷಣೆ ಮಾಡಿದ್ದು ಸಶಸ್ತ್ರ ತಾಲಿಬಾನ್ ವಿರೋಧಿ ಪಡೆಗಳ ಗುಂಪಿನ ಕೊನೆಯ ಕೋಟೆಯಾಗಿದ್ದು, ಅಫ್ಘಾನಿಸ್ತಾನವನ್ನು ತಾಲಿಬಾನ್ ಸಂಪೂರ್ಣ ವಶಪಡಿಸಿಕೊಂಡಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement