ಜಾಹೀರಾತು ದುರುಪಯೋಗ, ಗೂಗಲ್​ಗೆ 1,948 ಕೋಟಿ ರೂ. ದಂಡ ಹಾಕಿದ ಫ್ರಾನ್ಸ್

ಪ್ಯಾರಿಸ್: ತಂತ್ರಜ್ಞಾನ ದೈತ್ಯ ಗೂಗಲ್, ಆನ್ಲೈನ್ನಲ್ಲಿ ತನ್ನ ಜಾಹೀರಾತುಗಳನ್ನು ಪ್ರಕಟಿಸುವುದಕ್ಕಾಗಿ ತನ್ನ ಪ್ರಬಲ ಮಾರುಕಟ್ಟೆ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಫ್ರೆಂಚ್ ಅಧಿಕಾರಿಗಳು 220 ಮಿಲಿಯನ್ ಫ್ರಾಂಕ್‌ (ಸುಮಾರು 1948 ಕೋಟಿ) ದಂಡ ವಿಧಿಸಿದೆ.
ಪ್ರತಿಸ್ಪರ್ಧಿಗಳಿಗೆ ಹಾನಿಯಾಗುವಂತೆ ಗೂಗಲ್ ತನ್ನ ಆನ್‌ಲೈನ್ ಜಾಹೀರಾತು ಸೇವೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಫ್ರಾನ್ಸ್‌ ಸ್ಪರ್ಧಾ ನಿಯಂತ್ರಕವು ತಿಳಿಸಿದೆ.
ಸದ್ಯ ಗೂಗಲ್ ತನ್ನ ಜಾಹೀರಾತು ವ್ಯವಹಾರದಲ್ಲಿ ಬದಲಾವಣೆ ಮಾಡಲಿದೆ ಎಂದು ತಿಳಿಸಿದೆ. ಅಮೆರಿಕ ಟೆಕ್ ಪ್ರಕಾಶಕರು ತನ್ನ ಡೇಟಾ ಮತ್ತು ಸಾಧನಗಳನ್ನು ಸುಲಭವಾಗಿ ಬಳಸಿಕೊಳ್ಳಲು ಒಪ್ಪಿಕೊಂಡಿದ್ದಾರೆ. “ಮುಂಬರುವ ತಿಂಗಳುಗಳಲ್ಲಿ ನಾವು ಜಾಗತಿಕವಾಗಿ ಹೆಚ್ಚು ವಿಸ್ತಾರ ಮಾಡುವ ಮೊದಲು ಅವುಗಳನ್ನು ಪರೀಕ್ಷಿಸುತ್ತೇವೆ ಮತ್ತು ಅಭಿವೃದ್ಧಿಪಡಿಸುತ್ತೇವೆ” ಎಂದು ಕಂಪನಿ ತಿಳಿಸಿದೆ.
ಯುರೋಪಿಯನ್ ಜಾಹೀರಾತು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಗೂಗಲ್‌ ಕಂಪನಿಗೆ ಭಾರಿ ದಂಡ ವಿಧಿಸುವುದು ಇದೇ ಮೊದಲಲ್ಲ. 2019 ರಲ್ಲಿ ಪ್ರತಿಸ್ಪರ್ಧಿ ಆನ್‌ಲೈನ್ ಹುಡುಕಾಟ ಜಾಹೀರಾತುದಾರರನ್ನು ನಿರ್ಬಂಧಿಸಿದ್ದಕ್ಕಾಗಿ ಗೂಗಲ್‌ಗೆ ಇಯು ದಂಡ ವಿಧಿಸಿತು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement