ಸೂರ್ಯನ ಸುತ್ತ ಉಂಗುರ.. ವಿಸ್ಮಯ ನೋಡಿ ಬೆರಗಾದರು..!

ಬೆಂಗಳೂರು: ಸೂರ್ಯನ ಸುತ್ತ ಕಾಮನಬಿಲ್ಲು ಮಾದರಿಯ ಉಂಗುರ ಸೃಷ್ಟಿಯಾಗಿ ಸೃಷ್ಟಿಯ ಕೌತುಕ ಅಚ್ಚರಿಗೆ ಕಅರಣವಾಗಿದ. ಸೋಮವಾರ ಆಗಸದಲ್ಲಿ ಕಂಡುಬಂದ ಸೂರ್ಯನ ಸುತ್ತ ಉಂಗುರ ವೃತ್ತಾಕಾರದ ಉಂಗುರದ ಆಕೃತಿ ಜನರ ಆಕರ್ಷಣೆ ಕೇಂದ್ರಬಿಂದುವಾಗಿದೆ.
ಈ ಚಮತ್ಕಾರ ಸೂರ್ಯನಿಗೆ ಮಾತ್ರವಲ್ಲ. ರಾತ್ರಿ ಕಾಣುವ ಚಂದ್ರನ ಸುತ್ತಲೂ ಇದೇ ರೀತಿಯ ಆಕೃತಿ ಇರಲಿದೆ ಎಂದು ತಿಳಿದುಬಂದಿದೆ. ಸೂರ್ಯ, ಚಂದ್ರನ ಸುತ್ತ ಈ ರೀತಿಯ ಆಕೃತಿ ಕಂಡಬಂದರೆ ಭಾರಿ ಮಳೆಯ ಮುನ್ಸೂಚನೆಯಾಗಿರಲಿದೆ ಎಂಬುದು ಜಾನಪದ ವಾಡಿಕೆಯಂತೆ.
ಮಳೆಗಾಲದಲ್ಲಿ ಮಳೆ ಹನಿಯ ಕಣಗಳನ್ನು ಮೋಡಗಳು ತುಂಬಿಕೊಂಡಾಗ ಸೂರ್ಯನ ಕಿರಣಗಳು ಮಳೆ ಹನಿಯ ಕ್ರಿಸ್ಟಲ್ ಕಣಗಳ ಮೇಲೆ ಬಿದ್ದು ಉಂಟಾಗುವ ವಕ್ರೀಭವನ ಕ್ರಿಯೆಯಿಂದ ಇಂತಹ ಸುಂದರ ದೃಶ್ಯ ಕಂಡುಬರುತ್ತದೆ.
ಹಿಮಾಲಯ ಪ್ರದೇಶದಲ್ಲಿ ಇಂತಹ ದೃಶ್ಯ ಸಾಮಾನ್ಯ. ಮಳೆಗಾಲದ ಆರಂಭದ ದಿನಗಳಲ್ಲಿ ಈ ರೀತಿಯ ಪ್ರಕೃತಿ ವೈಭವ ಕೆಲವೆಡೆ ಕಂಡು ಬರುತ್ತದೆ ಎನ್ನುತ್ತಾರೆ ತಜ್ಞರು.
26 ರಂದು ಯಾಸ್ ಚಂಡಮಾರುತ ಒಡಿಸ್ಸಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ತೀರಗಳಿಗೆ ಅಪ್ಪಳಿಸಿ ಭಾರಿ ಅನಾಹುತ ಸಂಭವಿಸಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಸೂರ್ಯನ ಈ ಉಂಗಾರಕೃತಿ ಕಾಣಿಸಿಕೊಂಡಿದೆ.

ಪ್ರಮುಖ ಸುದ್ದಿ :-   ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ ನೇಮಕ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement