ರೈತರೊಂದಿಗೆ ಮಾತುಕತೆ ಪುನರಾರಂಭಿಸಲು ಸರ್ಕಾರ ಸಿದ್ಧ: ಗೋಯಲ್‌

ನವ ದೆಹಲಿ: ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ಪುನರಾರಂಭಿಸಲು ಸರ್ಕಾರ ಸಿದ್ಧವಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಭಾನುವಾರ ಹೇಳಿದ್ದಾರೆ.
ಆದರೆ ಪದೇ ಪದೇ ಪ್ರಸ್ತಾಪಗಳಿದ್ದರೂ ಪ್ರತಿಭಟನಾಕಾರರು ಈವರೆಗೆ ಯಾವುದೇ ಸ್ಪಷ್ಟ ಹಾಗೂ ಪರಿನಾಮಕಾರಿ ಸಲಹೆ ನೀಡಿಲ್ಲ ಎಂದು ಪ್ರತಿಪಾದಿಸಿದರು.
ರೈತ ಸಂಘಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಮನವಿಯನ್ನು ಪುನರುಚ್ಚರಿಸುತ್ತ ಸರ್ಕಾರವು ಎದ್ದಿರುವ ಯಾವುದೇ ವಿಷಯಗಳ ಬಗ್ಗೆ ಚರ್ಚಿಸಲು ಕೇವಲ ದೂರವಾಣಿ ಕರೆಯಷ್ಟು ದೂರದಲ್ಲಿದೆ. ಅದಕ್ಕಾಗಿ ಯಾರಾದರೂ ಕನಿಷ್ಠ ಕರೆ ಮಾಡಿದರೆ ಮಾತುಕತೆ ನಡೆಸಲಾಗುವುದು. ಸರ್ಕಾರವು ರೈತರ ಸಮಸ್ಯೆಗಳ ಬಗ್ಗೆ ಸೂಕ್ಷ್ಮವಾಗಿದೆ. ಸರ್ಕಾರ ಅವರೊಂದಿಗೆ ಚರ್ಚಿಸಲು ಸಿದ್ಧವಾಗಿದೆ ಎಂದರು.

ಕೆಲವು ವಿಷಯಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆ ಮತ್ತು ಕೆಲವರು ಗೊಂದಲಕ್ಕೀಡು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನಾವು ಪದಗಳನ್ನು ಬದಲಾಯಿಸುವ ಮೂಲಕ ಕಾನೂನುಗಳನ್ನು ಕಠಿಣಗೊಳಿಸಲು ಪ್ರಸ್ತಾಪಿಸಿದ್ದೇವೆ, ನಾವು 18 ತಿಂಗಳುಗಳ ಕಾಲ ಕಾನೂನುಗಳನ್ನು ಅಮಾನತುಗೊಳಿಸಲು ಪ್ರಸ್ತಾಪಿಸಿದ್ದೇವೆ. ನಾವು ‘ತಾರೀಖ್ ಪಾರ್ ತಾರೀಖ್’ (ದಿನಾಂಕದ ನಂತರದ ದಿನಾಂಕ) ಸುದ್ದಿಗಳಲ್ಲಿ ಓದುತ್ತಲೇ ಇರುತ್ತೇವೆ ಆದರೆ ಅದು ‘ಪ್ರಸ್ತಾವ್‌ ಪರ್ ಪ್ರಸ್ತಾವ್‌ ಆಗಿರಬೇಕು ( ಪ್ರಸ್ತಾವನೆಯ ನಂತರ ಪ್ರಸ್ತಾವನೆ ) ಎಂದು ರೈಲ್ವೆ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿರುವ ಗೋಯಲ್ ಹೇಳಿದರು.
ರೈತ ಮುಖಂಡರೊಂದಿಗೆ ಸರ್ಕಾರ 11 ಸುತ್ತಿನ ಮಾತುಕತೆ ನಡೆಸಿದ್ದು, ಕೊನೆಯದಾಗಿ ಜನವರಿ 22 ರಂದು ಟ್ರಾಕ್ಟರ್ ಪೆರೇಡ್‌ಗೆ ಮುಂಚಿತವಾಗಿ ನಡೆಯಿತು. ಜನವರಿ 26 ರಂದು ನಡೆದ ಪ್ರತಿಭಟನೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಹಿಂಸಾತ್ಮಕ ಘರ್ಷಣೆಯಲ್ಲಿ ಕೊನೆಗೊಂಡಿತು.
ಗಣರಾಜ್ಯೋತ್ಸವದಂದು ಟ್ರಾಕ್ಟರ್ ಪೆರೇಡ್ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ಧಾರ್ಮಿಕ ಧ್ವಜವನ್ನು ಹಾರಿಸುವುದನ್ನು “ದುರದೃಷ್ಟಕರ” ಎಂದು ಸಚಿವರು ಖಂಡಿಸಿದರು, ಆದರೆ ಸರ್ಕಾರವು ಅದನ್ನು ದಾಟಿ ಸಂವಾದದ ಮೂಲಕ ಪರಿಹಾರವನ್ನು ಕಂಡುಕೊಳ್ಳಲು ಸಿದ್ಧವಾಗಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   100 ವರ್ಷಗಳಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮೊದಲ ಮಹಿಳಾ ಉಪಕುಲಪತಿ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement