ಸಿಕ್ಕಿಂನಲ್ಲಿ ಮೇಘಸ್ಫೋಟ, ಹಠಾತ್ ಪ್ರವಾಹ : 14 ಜನರು ಸಾವು, 23ಯೋಧರ ಸಹಿತ 102 ಮಂದಿ ನಾಪತ್ತೆ

ಗ್ಯಾಂಗ್ಟಕ್‌: ಸಿಕ್ಕಿಂನಲ್ಲಿ ಬುಧವಾರ ಸಂಭವಿಸಿದ ಹಠಾತ್ ಪ್ರವಾಹದ ನಂತರ 14 ಜನರು ಸಾವಿಗೀಡಾಗಿದ್ದಾರೆ ಮತ್ತು 23 ಸೇನಾ ಸಿಬ್ಬಂದಿ ಸೇರಿದಂತೆ 120 ಜನರು ನಾಪತ್ತೆಯಾಗಿದ್ದಾರೆ.
ಅಧಿಕಾರಿಗಳ ಪ್ರಕಾರ, ಲ್ಹೋನಕ್ ಸರೋವರದ ಮೇಲೆ ಸಂಭವಿಸಿದ ಮೇಘಸ್ಫೋಟವು ತೀಸ್ತಾ ನದಿಯ ಜಲಾನಯನ ಪ್ರದೇಶದಲ್ಲಿ ಹಠಾತ್ ಪ್ರವಾಹಕ್ಕೆ ಕಾರಣವಾಯಿತು, ಇದು ಅಂತಿಮವಾಗಿ ಮಾರಣಾಂತಿಕ ಪ್ರಹಾವಾಗಿ ಮಾರ್ಪಟ್ಟಿತು. ಸಿಕ್ಕಿಂನಲ್ಲಿ ಮಂಗಳವಾರ ತಡರಾತ್ರಿ 1:30ಕ್ಕೆ ಸುಮಾರಿಗೆ ಉಂಟದ ದಿಢೀರ್‌ ಪ್ರವಾಹದಿಂದಾಗಿ ಚುಂಗ್ತಾಂಗ್ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಬೇಕಾಯಿತು. ಇದರಿಂದ ಪ್ರವಾಹ ಉಲ್ಬಣಗೊಂಡಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಸೇನಾ ಯೋಧ ಸೇರಿದಂತೆ ಸುಮಾರು 200 ಜನರನ್ನು ಇದುವರೆಗೆ ರಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ರಾತ್ರಿ ಬೆಳಗಾಗುವುದರೊಳಗೆ ಸೇತುವೆಗಳು, ವಾಹನಗಳು, ಮನೆ- ಕಟ್ಟಡಗಳು ಕೊಚ್ಚಿ ಹೋಗಿವೆ. ಈ ದುರಂತವನ್ನು ಸಿಕ್ಕಿಂ ಸರ್ಕಾರ ‘ವಿಪತ್ತು’ ಎಂದು ಘೋಷಿಸಿದೆ.

ರಕ್ಷಣಾ ಸಂಸ್ಥೆಗಳು, ಸೇತುವೆಗಳು ಬಾಧಿತ
ಚುಂಗ್‌ತಾಂಗ್ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಿದ್ದರಿಂದ ಕೆಳಭಾಗದಲ್ಲಿನ 15-20 ಅಡಿ ಎತ್ತರದವರೆಗೆ ನೀರಿನ ಮಟ್ಟವು ಹಠಾತ್ ಏರಿಕೆಗೆ ಕಾರಣವಾಯಿತು. ಏತನ್ಮಧ್ಯೆ, ಕಣಿವೆಯ ಉದ್ದಕ್ಕೂ ಇರುವ ರಕ್ಷಣಾ ಸಂಸ್ಥೆಗಳ ಮೇಲೆ ಇದು ಪರಿಣಾಮ ಬೀರಿವೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಮುಂಜಾನೆ, ಗ್ಯಾಂಗ್ಟಾಕ್ ಜಿಲ್ಲೆಯ ಇಂದ್ರೇನಿ ಸೇತುವೆ ಎಂದೂ ಕರೆಯಲ್ಪಡುವ ಸಿಂಗ್ಟಮ್‌ನಲ್ಲಿರುವ ಉಕ್ಕಿನ ಸೇತುವೆ ತೀಸ್ತಾ ನದಿ ನೀರಿನಿಂದ ಸಂಪೂರ್ಣವಾಗಿ ಕೊಚ್ಚಿಹೋಗಿದೆ. 120-ಮೀಟರ್-ಕೇಬಲ್ ತೂಗು ಸೇತುವೆ ತೀಸ್ತಾ ನದಿಯ ಮೇಲೆ ಬಹಳ ಮುಖ್ಯವಾದ ಮಾರ್ಗವಾಗಿದೆ.
ಲ್ಯಾಂಕೋ ಹೈಡೆಲ್‌ ಪವರ್‌ ಪ್ರಾಜೆಕ್ಟ್ ಸಮೀಪ ವಿರುವ ಸೇತುವೆ ಸಹಿತ ಒಟ್ಟು 8 ಸೇತುವೆಗಳೂ ಕೊಚ್ಚಿ ಹೋಗಿವೆ. ಸಿಂಗ್ಟಂ, ರಾಂಗ್‌ಪೋ ಸಹಿತ ಹಲವಾರು ಪಟ್ಟಣಗಳು ಜಲಾವೃತವಾಗಿವೆ. ಸಿಕ್ಕಿಂ ಜತೆಗೆ ದೇಶದ ಇತರ ಭಾಗಗಳನ್ನು ಸಂಪರ್ಕಿಸುವ ರಾ. ಹೆದ್ದಾರಿ-10ರ ಭಾಗವೂ ನೀರುಪಾಲಾಗಿದೆ.

ಪ್ರಮುಖ ಸುದ್ದಿ :-   ಸಿಖ್‌ ಪವಿತ್ರ ಗ್ರಂಥದ ಕೆಲ ಪುಟ ಹರಿದು ಹಾಕಿದ ಆರೋಪ : ಯುವಕನನ್ನು ಬಡಿದುಕೊಂದ ಭಕ್ತರು

ಮುಂದಿನ ಎರಡು ದಿನ ಭಾರೀ ಮಳೆ ಮುಂದುವರಿಯಲಿದ್ದು, ಗ್ಯಾಂಗ್ಟಕ್‌, ಗ್ಯಾಲ್ಶಿಂಗ್, ಪಕ್ಯಾಂಗ್‌ ಮತ್ತು ಸೊರೆಂಗ್‌ ಜಿಲ್ಲೆಗಳಿಗೆ ಆರೆಂಜ್‌ ಹಾಗೂ ಮಂಗಾನ್‌ ಮತ್ತು ನಾಮಚಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ತೀಸ್ತಾ ನದಿ ಪ್ರವಾಹದ ಕಾರಣ ಪಶ್ಚಿಮ ಬಂಗಾಲ ಮತ್ತು ಬಾಂಗ್ಲಾ ದೇಶಕ್ಕೂ ಎಚ್ಚರಿಕೆ ರವಾನಿಸಲಾಗಿದೆ. ಪಶ್ಚಿಮ ಬಂಗಾಲದ ಜಲ್‌ಪಾಯಿಗುರಿ ಆಡಳಿತವು ತಗ್ಗುಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸುತ್ತಿದ್ದು, ಈವರೆಗೆ ಸುಮಾರು 15 ಸಾವಿರ ಮಂದಿಯನ್ನು ಸ್ಥಳಾಂತರಿಸಲಾಗಿದೆ.
ಸಿಕ್ಕಿಂ ಸಿಎಂ ಜತೆ ಮೋದಿ ಮಾತುಕತೆ
ಬುಧವಾರ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಾಂಗ್‌ ಗೋಲೆ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಹಾಗೂ ರಾಜಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ | ಜನವರಿಯಲ್ಲಿ ಉದ್ಘಾಟನೆಯಾದ ನಂತರ ಅಯೋಧ್ಯೆ ರಾಮಮಂದಿರದಲ್ಲಿ ಇದೇ ಮೊದಲ ಬಾರಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement