ಏಕಾಏಕಿ ಬೈಕ್ ಶೋರೂಂ ಒಳಗೆ ನುಗ್ಗಿದ ಕಾಡುಕೋಣ ; ಬೈಕುಗಳು ಜಖಂ, ಗಾಜುಗಳು ಪುಡಿ ಪುಡಿ | ವೀಡಿಯೊ ವೈರಲ್

ಕಣ್ಣೂರು : ಕೇರಳದ ಕಣ್ಣೂರು ಜಿಲ್ಲೆಯ ಕೂತುಪರಂಬದಲ್ಲಿ ಭಾನುವಾರ ಬೆಳಿಗ್ಗೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಜನನಿಬಿಡ ಪ್ರದೇಶದ ಹೀರೋ ಹೋಂಡಾ ಬೈಕ್ ಶೋರೂಮ್‌ಗೆ ಕಾಡುಕೋಣವೊಂದು ಏಕಾಏಕಿ ನುಗ್ಗಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಫೆಬ್ರವರಿ 1ರ ಭಾನುವಾರ ಬೆಳಿಗ್ಗೆ ಸುಮಾರು 8:10ಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಹತ್ತಿರದ ಕಣ್ಣವಂ ಅರಣ್ಯದಿಂದ ನಾಡಿಗೆ ಬಂದಿದ್ದ ಕಾಡುಕೋಣ, ಶೋರೂಮ್‌ನ ಮುಂಭಾಗದ ಗಾಜಿನ ಚೌಕಟ್ಟಿಗೆ ಅಪ್ಪಳಿಸಿ ಒಳಗೆ ನುಗ್ಗಿದೆ.

ಗಾಜನ್ನು ಪುಡಿಪುಡಿ ಮಾಡಿ ಒಳಬಂದ ಕಾಡುಕೋನವು ನಿಯಂತ್ರಣ ತಪ್ಪಿ ನೆಲದ ಮೇಲೆ ಜಾರಿ, ನಂತರ ಕಾಂಕ್ರೀಟ್ ಗೋಡೆಗೆ ಬಡಿದಿದೆ. ತಕ್ಷಣವೇ ಚೇತರಿಸಿಕೊಂಡ ಅದು ಹೊರಹೋಗುವ ದಾರಿಯನ್ನು ಕಂಡುಕೊಂಡು ಅಲ್ಲಿಂದ ಕಾಲ್ಕಿತ್ತಿದೆ. ಆದರೆ ವರದಿಗಳ ಪ್ರಕಾರ, ಅದು ಯಾವ ದಿಕ್ಕಿನಲ್ಲಿ ಅಲ್ಲಿಂದ ಹೋಗಿದೆ ಎಂಬುದು ಸ್ಪಷ್ಟವಾಗಿಲ್ಲ
ಘಟನೆಯ ನಂತರದ ದೃಶ್ಯಗಳಲ್ಲಿ ಶೋರೂಮ್‌ನ ಪೀಠೋಪಕರಣಗಳು ಧ್ವಂಸಗೊಂಡಿರುವುದು ಮತ್ತು ಪ್ರದರ್ಶನಕ್ಕೆ ಇಟ್ಟಿದ್ದ ಹೊಚ್ಚ ಹೊಸ ಬೈಕ್‌ಗಳು ಜಖಂಗೊಂಡಿರುವುದು ಕಂಡುಬಂದಿದೆ.

ಅರಣ್ಯ ಇಲಾಖೆ ಕಾರ್ಯಾಚರಣೆ
ಪ್ರಸ್ತುತ ಕಾಡುಕೋಣ ಎತ್ತ ಸಾಗಿದೆ ಎಂಬುದು ಅಸ್ಪಷ್ಟವಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಗತ್ಯವಿದ್ದರೆ ಪ್ರಾಣಿಗೆ ಅರಿವಳಿಕೆ ನೀಡಿ ಸೆರೆಹಿಡಿಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement