ಭಾರ್ಗವಿ ಎಲ್‌ಎಲ್‌ಬಿ’ ಖ್ಯಾತಿಯ ರಾಧಾ ಭಗವತಿ – ನಟ ರಾಣವ್ ಗೌಡ ಎಂಗೇಜ್‌ಮೆಂಟ್‌….

ಬೆಂಗಳೂರು : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಭಾರ್ಗವಿ ಎಲ್‌ಎಲ್‌ಬಿ’ ಧಾರಾವಾಹಿಯ ಕಥಾನಾಯಕಿ ಭಾರ್ಗವಿ ಪಾತ್ರದ ನಟಿ ರಾಧಾ ಭಗವತಿ ಹಾಗೂ ಹಾಗೂ ಅಮೃತಧಾರೆ’ ಖ್ಯಾತಿಯ ಕಿರುತೆರೆ ನಟ ರಾಣವ್ ಗೌಡ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
‘ಅಮೃತಧಾರೆ’ ಸೀರಿಯಲ್‌ನಲ್ಲಿ ಜೆಡಿ ಪಾತ್ರದಲ್ಲಿ ರಾಣವ ಗೌಡ ಅನಟಿಸಿದ್ದಾರೆ.. ಈ ಹಿಂದೆ ‘ಅಮೃತಧಾರೆ’ ಸೀರಿಯಲ್‌ನಲ್ಲಿ ಜೆಡಿ ಪತ್ನಿ ಮಲ್ಲಿಯಾಗಿ ರಾಧಾ ಭಗವತಿ ನಟಿಸಿದ್ದರು. ಆಗಲೇ ಇಬ್ಬರ ನಡುವೆ ಪ್ರೀತಿ ಬೆಳೆದಿದೆ ಎನ್ನಲಾಗಿದೆ. ಈಗ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಇಬ್ಬರೂ ಉಂಗುರ ಬದಲಿಸಿಕೊಂಡಿದ್ದಾರೆ. ರಾಣವ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಹಾರ ಹಾಕಿ ನಿಂತ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ಅವರು ‘ಫೈನಲಿ’ ಎಂಬ ಕ್ಯಾಪ್ಶನ್ ಬರೆದಿದ್ದಾರೆ. ಆದರೆ ಮದುವೆ ದಿನಾಂಕದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

To enable full Instagram embedding experience, please add your access token by navigating to: Dashboard > EmbedPress > Settings > Sources > Instagram

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement