ನಾರಾಯಣಮೂರ್ತಿ ಹೇಳಿದಂತೆ 70 ಗಂಟೆಗಳಲ್ಲ… ಆದ್ರೆ ಭಾರತೀಯರು ತುಂಬಾ ಕಷ್ಟಪಟ್ಟು ಕೆಲಸ ಮಾಡ್ತಾರೆ ಎಂದ ಐಎಲ್‌ ಒ ಡೇಟಾ

ಕೆಲಸದ ಉತ್ಪಾದಕತೆ ಮತ್ತು ದೀರ್ಘ ಕೆಲಸದ ಸಮಯದ ಕುರಿತು ಇನ್ಫೋಸಿಸ್ ಸಹ-ಸಂಸ್ಥಾಪಕರಾದ ನಾರಾಯಣ ಮೂರ್ತಿ ಅವರ ಇತ್ತೀಚಿನ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದೆ. ಇದು ನಮ್ಮ ವೇಗದ ಜಗತ್ತಿನಲ್ಲಿ ಅನೇಕರಿಗೆ ಪ್ರತಿಧ್ವನಿಸುವ ವಿಷಯವಾಗಿದೆ. ಭಾರತದ ಯುವ ಸಮೂಹ ವಾರಕ್ಕೆ 70-ಗಂಟೆಗಳ ಕೆಲಸ ಮಾಡಬೇಕು ಎಂಬ ನಾರಾಯಣಮೂರ್ತಿಯವರ ಹೇಳಿಕೆಗೆ ಪ್ರಶಂಸೆ ಮತ್ತು ಟೀಕೆ ಎರಡೂ ವ್ಯಕ್ತವಾಗಿದೆ.
ಆದರೆ, ಆಶ್ಚರ್ಯಕರವಾಗಿ, ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO) ಮಾಹಿತಿಯು ಭಾರತೀಯರು ಈಗಾಗಲೇ ಜಾಗತಿಕವಾಗಿ ಕಷ್ಟಪಟ್ಟು ಕೆಲಸ ಮಾಡುವವರಾಗಿದ್ದಾರೆ ಎಂದು ತಿಳಿಸುತ್ತದೆ, 2023ರ ನವೀಕರಣದಂತೆ ಭಾರತದ ಪ್ರತಿ ಉದ್ಯೋಗಿ ವಾರಕ್ಕೆ ಸರಾಸರಿ 47.7 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ.
ಇದಕ್ಕಿಂತ ಹೆಚ್ಚಾಗಿ, ವಿಶ್ವದಾದ್ಯಂತ ಹತ್ತು ದೊಡ್ಡ ಆರ್ಥಿಕತೆಗಳ ಜನರಿಗೆ ಇದನ್ನು ಹೋಲಿಸಿದರೆ, ಭಾರತವು ವಾರದಲ್ಲಿ ದೀರ್ಘಾವಧಿಯ ಸರಾಸರಿ ಕೆಲಸ ಮಾಡುವ ಉದ್ಯೋಗಿಗಳು ಅಥವಾ ಕೆಲಸಗಾರರಲ್ಲಿ ಮುಂದಿದಿದೆ. ವಾರದಲ್ಲಿ ದೀರ್ಘಾವಧಿ ಕೆಲಸ ಮಾಡುವುದರಲ್ಲಿ ಜಾಗತಿಕವಾಗಿ, ಭಾರತವು ಏಳನೇ ಸ್ಥಾನ ಪಡೆದುಕೊಂಡಿದೆ, ಕತಾರ್, ಕಾಂಗೋ, ಲೆಸೊಥೋ, ಭೂತಾನ್, ಗ್ಯಾಂಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರಗಳು ಭಾರತೀಯ ಕೆಲಸದ ನೀತಿಯನ್ನು ಮೀರಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ...| "ನಮಗೆ ಪ್ರತಿಕ್ರಿಯಿಸಲು 30-45 ಸೆಕೆಂಡುಗಳು ಮಾತ್ರ ಸಮಯ ಇತ್ತು": ಭಾರತದ ಬ್ರಹ್ಮೋಸ್ ಕ್ಷಿಪಣಿ ದಾಳಿ ಬಗ್ಗೆ ಪಾಕ್ ಪ್ರಧಾನಿ ಸಲಹೆಗಾರ

ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಇತ್ತೀಚೆಗೆ ಯುವಕರಿಗೆ ವಾರದಲ್ಲಿ 70 ಗಂಟೆಗಳ ಕೆಲಸ ಮಾಡುವುದನ್ನು ಪ್ರತಿಪಾದಿಸಿ, ಹೀಗಾದರೆ ಭಾರತವು ಕಳೆದ ಎರಡು ಮೂರು ದಶಕಗಳಲ್ಲಿ ಪ್ರಗತಿ ಸಾಧಿಸಿದ ಆರ್ಥಿಕತೆಗಳೊಂದಿಗೆ ಸ್ಪರ್ಧಿಸಬಹುದು ಎಂದು ಹೇಳಿದ್ದರು.
“ಭಾರತದ ಕೆಲಸದ ಉತ್ಪಾದಕತೆಯು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ” ಎಂದು ಮೂರ್ತಿ ಅವರು ಇನ್ಫೋಸಿಸ್ ಮಾಜಿ CFO ಮೋಹನ್‌ದಾಸ್ ಪೈ ಅವರೊಂದಿಗೆ ಪಾಡ್‌ಕ್ಯಾಸ್ಟ್, ದಿ ರೆಕಾರ್ಡ್‌ ಗೆ ಮಾತನಾಡುವಾಗ ಹೇಳಿದ್ದರು. “ಆದ್ದರಿಂದ, ನಮ್ಮ ಯುವಕರು ‘ಇದು ನನ್ನ ದೇಶ’ ಕ್ಕಾಗಿ ನಾನು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಬಯಸುತ್ತೇನೆ” ಎಂದು ಹೇಳಬೇಕು ಎಂದು ನಾರಾಯಣಮೂರ್ತಿ ಹೇಳಿದ್ದರು. ಎರಡನೆಯ ಮಹಾಯುದ್ಧದ ನಂತರ ಜರ್ಮನ್ನರು ಮತ್ತು ಜಪಾನಿಯರು ಇದನ್ನೇ ಮಾಡಿದರು. “ಪ್ರತಿ ಜರ್ಮನ್ ನಿರ್ದಿಷ್ಟ ಸಂಖ್ಯೆಯ ವರ್ಷಗಳವರೆಗೆ ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡುವಂತೆ ಅವರು ನೋಡಿಕೊಂಡರು ಎಂದು ಹೇಳಿದ್ದರು.
ಜೆಡಬ್ಲ್ಯುಎಸ್‌ (JSW ) ಗ್ರೂಪ್ ಸಿಎಂಡಿ ಸಜ್ಜನ್ ಜಿಂದಾಲ್, ಓಲಾ (Ola) ಕ್ಯಾಬ್ಸ್ ಸಹ-ಸಂಸ್ಥಾಪಕ ಭವಿಶ್ ಅಗರ್ವಾಲ್ ಮತ್ತು ಮೋಹನದಾಸ ಪೈ ಅವರಂತಹ ಹಲವಾರು ಉದ್ಯಮದ ನಾಯಕರು ಅವರ ಅಭಿಪ್ರಾಯಗಳನ್ನು ಬೆಂಬಲಿಸಿದರೂ, ಅವರ ಹೇಳಿಕೆಗಳು ಅನೇಕರಿಂದ ವಿಮರ್ಶಾತ್ಮಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡವು.

ಪ್ರಮುಖ ಸುದ್ದಿ :-   ಕೋವಿಡ್ ಲಸಿಕೆಗಳಿಗೂ ಹೃದಯಾಘಾತದ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ; ತಳ್ಳಿಹಾಕಿದ ಏಮ್ಸ್ ವೈದ್ಯರು

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement