ನಟಿ ಸೋಭಿತಾ ಧೂಳಿಪಾಲ ಜೊತೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡ ನಟ ನಾಗಚೈತನ್ಯ

ಹೈದರಾಬಾದ್‌: ತೆಲುಗು ನಟ ನಾಗ ಚೈತನ್ಯ ಅವರು ನಟಿ ಸೋಭಿತಾ ಧೂಳಿಪಾಲ ಅವರೊಂದಿಗೆ ಇಂದು ಗುರುವಾರ (ಆಗಸ್ಟ್ 8) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥ ಸಮಾರಂಭದ ನಂತರ ಹಿರಿಯ ನಟ ಮತ್ತು ನಾಗಚೈತನ್ಯ ಅವರ ತಂದೆ ತೆಲುಗು ನಟ ನಾಗಾರ್ಜುನ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.
ನಾಚಚೈತನ್ಯ ಮತ್ತು ಸೋಭಿತಾ ಆಗಸ್ಟ್ 8 ರಂದು ಹೈದರಾಬಾದ್‌ನ ನಾಗಾರ್ಜುನ ಅವರ ನಿವಾಸದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ದಂಪತಿಯ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಸಮಾರಂಭ ನಡೆಯಿತು.
ನಾಗ ಚೈತನ್ಯ ಈ ಹಿಂದೆ ನಟಿ ಸಮಂತಾ ರುತ್ ಪ್ರಭು ಅವರನ್ನು ಮದುವೆಯಾಗಿದ್ದರು. ನಂತರ ಅವರಿಬ್ಬರು 2021ರ ಅಕ್ಟೋಬರ್ 2 ರಂದು ವಿಚ್ಛೇದನ ಪಡೆದಿದ್ದರು.
ಇಂದು ಬೆಳಿಗ್ಗೆ 9:42 ಕ್ಕೆ ನಡೆದ ಸೋಭಿತಾ ಧೂಳಿಪಾಲ ಅವರೊಂದಿಗೆ ನಮ್ಮ ಮಗ ನಾಗ ಚೈತನ್ಯ ಅವರ ನಿಶ್ಚಿತಾರ್ಥ ಆಗಿದ್ದನ್ನು ಪ್ರಕಟಿಸಲು ನಾವು ಸಂತೋಷಪಡುತ್ತೇವೆ!! ಅವಳನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ನಾವು ತುಂಬಾ ಸಂತೋಷಪಡುತ್ತೇವೆ. ಸಂತೋಷದ ದಂಪತಿಗೆ ಅಭಿನಂದನೆಗಳು!
ಅವರಿಗೆ ಜೀವನಪೂರ್ತಿ ಪ್ರೀತಿ ಮತ್ತು ಸಂತೋಷವನ್ನು ಹಾರೈಸುತ್ತೇನೆ. ದೇವರು ಆಶೀರ್ವದಿಸಲಿ ಎಂದು ನಾಗಾರ್ಜುನ ಎಕ್ಸ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡು ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಎನ್‌ಡಿಎಗೆ ಎನ್‌ಸಿಪಿ ಬೆಂಬಲದ ವದಂತಿಗಳ ನಡುವೆ ಪ್ರಧಾನಿ ಮೋದಿ ಭೇಟಿ ಮಾಡಿದ ಶರದ್ ಪವಾರ್–ಸುಪ್ರಿಯಾ ಸುಳೆ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement