ಹಾವೇರಿ | ನೀರು ಹಾಯಿಸಲು ಹೋದ ಸಹೋದರರ ಮೇಲೆ ಚಿರತೆ ದಾಳಿ ; ಓರ್ವ ಸಾವು

ಹಾವೇರಿ: ಜಮೀನಿಗೆ ರಾತ್ರಿ ವೇಳೆ ನೀರು ಹಾಯಿಸಲು ತೆರಳಿದ್ದ ಸಹೋದರರ ಮೇಲೆ ಚಿರತೆ ದಾಳಿ ನಡೆಸಿದ್ದು, ಓರ್ವ ಮೃತಪಟ್ಟು, ಇನ್ನೊಬ್ಬ ಗಾಯಗೊಂಡ ಘಟನೆ ರಟ್ಟಿಹಳ್ಳಿ ತಾಲೂಕು ಕಣವಿಶಿದ್ಗೇರಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಚಿರತೆ ದಾಳಿಯಿಂದ ಬೀರಪ್ಪ ಹನುಮಂತಪ್ಪ ಬಳಗಾವಿ(30) ಎಂಬವರು ಮೃತಟ್ಟಿದ್ದಾರೆ ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ಸಹೋದರ ಗಣೇಶ ಬಳಗಾವಿ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಶುಕ್ರವಾರ ರಾತ್ರಿ ಮೆಕ್ಕೆಜೋಳಕ್ಕೆ ನೀರು ಹಾಯಿಸಲು ಹೋಗಿದ್ದಾಗ ಏಕಾಏಕಿ ಚಿರತೆ ದಾಳಿ ನಡೆಸಿದೆ ಎನ್ನಲಾಗಿದೆ. ಬೀರಪ್ಪ ಎಂಬುವರು ಮೃತಪಟ್ಟಿದ್ದಾರೆ. ಇನ್ನೊಬ್ಬ ಸಹೋದರ ಗಣೇಶ ಎಂಬವರು ಗಂಭೀರ ಗಾಯಗೊಂಡಿದ್ದು ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿದ್ದಾರೆ. ರಟ್ಟೀಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

ನಿಮ್ಮ ಕಾಮೆಂಟ್ ಬರೆಯಿರಿ

advertisement