2024ರ ಲೋಕಸಭೆ ಚುನಾವಣೆ-ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ : ನರೇಂದ್ರ ಮೋದಿ Vs ರಾಹುಲ್‌ ಗಾಂಧಿ ; ಸಾಮಾನ್ಯ ವರ್ಗ, ಮುಸ್ಲಿಮರ ಒಲವು ಯಾರತ್ತ..?

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಮುನ್ನ ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆಯಲ್ಲಿ ಪ್ರಧಾನಿ ಸ್ಥಾನಕ್ಕೆ ರಾಹುಲ್ ಗಾಂಧಿ ಮುಸ್ಲಿಮರ ಮೊದಲ ಆಯ್ಕೆಯಾಗಿದ್ದಾರೆ. ಹಾಗೂ ಮುಂದುವರಿದ ವರ್ಗಗಳ ಮತದಾರರಲ್ಲಿ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಮೊದಲ ಆದ್ಯತೆಯ ಆಯ್ಕೆಯಾಗಿದ್ದಾರೆ ಎಂದು ಕಂಡುಬಂದಿದೆ.
ಸಮೀಕ್ಷೆಯ ಪ್ರಕಾರ, 70 %ರಷ್ಟು ಮುಂದುವರಿದ ಅಥವಾ ಸಾಮಾನ್ಯ ವರ್ಗಗಳ ಮತದಾರರು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಬಯಸುತ್ತಾರೆ ಮತ್ತು ಅವರಲ್ಲಿ ಶೇಕಡಾ 12 ರಷ್ಟು ಜನರು ಮಾತ್ರ ರಾಹುಲ್ ಗಾಂಧಿಯನ್ನು ತಮ್ಮ ನಾಯಕನನ್ನಾಗಿ ನೋಡಲು ಬಯಸುತ್ತಾರೆ.
ಇತರ ನಾಯಕರ ಬಗ್ಗೆ ಹೇಳುವುದಾದರೆ, ಅವರಲ್ಲಿ ಶೇಕಡಾ 6 ರಷ್ಟು ಜನರು ಅರವಿಂದ ಕೇಜ್ರಿವಾಲ್ ಅವರನ್ನು ಮುಂದಿನ ಪ್ರಧಾನಿಯನ್ನಾಗಿ ನೋಡಲು ಬಯಸುತ್ತಾರೆ, ಶೇಕಡಾ 4 ರಷ್ಟು ಜನರು ಮಮತಾ ಬ್ಯಾನರ್ಜಿಯನ್ನು ಆಯ್ಕೆ ಮಾಡಬಹುದು ಮತ್ತು ನಿತೀಶಕುಮಾರ ಅವರನ್ನು ಬೆಂಬಲಿಸುವವರು
ಕೇವಲ 1% ಮಾತ್ರ.
ಮುಸ್ಲಿಂ ಮತದಾರರಲ್ಲಿ, ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 52 ರಷ್ಟು ರಾಹುಲ್ ಗಾಂಧಿ ಅವರು ತಮ್ಮ ಮೊದಲ ಆಯ್ಕೆ ಎಂದು ಹೇಳಿದ್ದಾರೆ, ಅವರಲ್ಲಿ ಶೇಕಡಾ 14 ರಷ್ಟು ಜನರು ಅರವಿಂದ್ ಕೇಜ್ರಿವಾಲ ಅವರನ್ನು ತಮ್ಮ ಮುಂದಿನ ಪ್ರಧಾನಿಯನ್ನಾಗಿ ನೋಡಲು ಬಯಸುತ್ತಾರೆ, 8 ಶೇಕಡಾ ಜನರು ಅಖಿಲೇಶ ಯಾದವ್ ಅವರನ್ನು ಆಯ್ಕೆ ಮಾಡಿದ್ದಾರೆ, ಶೇಕಡಾ 5 ರಷ್ಟು ಜನರು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರನ್ನು ಬೆಂಬಲಿಸಿದ್ದಾರೆ ಇಂಡಿಯಾ ಟಿವಿ-ಸಿಎನ್‌ಎಕ್ಸ್ ಅಭಿಪ್ರಾಯ ಸಂಗ್ರಹದ ಪ್ರಕಾರ ಕೇವಲ 3 ಪ್ರತಿಶತ ಜನರು ನರೇಂದ್ರ ಮೋದಿಯನ್ನು ನಾಯಕನಾಗಿ ನೋಡಲು ಬಯಸಿದ್ದಾರೆ.

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

ನಾಯಕರು                                          ಸಾಮಾನ್ಯ ವರ್ಗಗಳು                                  ಮುಸಲ್ಮಾನರು
ನರೇಂದ್ರ ಮೋದಿ                                 70%                                                           03%
ರಾಹುಲ್ ಗಾಂಧಿ                                  12%                                                           52%
ಮಮತಾ ಬ್ಯಾನರ್ಜಿ                              04%                                                          08%
ಅರವಿಂದ್ ಕೇಜ್ರಿವಾಲ್                         06%                                                          14%
ನಿತೀಶಕುಮಾರ                                     01%                                                           06%
ಅಖಿಲೇಶ್ ಯಾದವ್                              –                                                                08%
ಅಸಾದುದ್ದೀನ್ ಓವೈಸಿ                            –                                                                05%

ಪ್ರಮುಖ ಸುದ್ದಿ :-   ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ

ದೇಶ ಒಟ್ಟಾರೆ ಮತದಾರರಲ್ಲಿ ಶೇ.61ರಷ್ಟು ಮತದಾರರು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಬಯಸುತ್ತಿದ್ದಾರೆ ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ. 21%ರಷ್ಟು ಜನರು ರಾಹುಲ್ ಗಾಂಧಿಯನ್ನು ಬಯಸುತ್ತಾರೆ, ತಲಾ 3%ರಷ್ಟು ಜನರು ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಅವರನ್ನು ಬಯಸುತ್ತಾರೆ, ಅವರಲ್ಲಿ 2 %ರಷ್ಟು ಜನರು ನಿತೀಶಕುಮಾರ ಮತ್ತು ಮಾಯಾವತಿಯನ್ನು ಬೆಂಬಲಿಸಿದ್ದಾರೆ ಮತ್ತು 6 ಪ್ರತಿಶತದಷ್ಟು ಇನ್ಯಾರಾದರೂ ಮುಂದಿನ ಪ್ರಧಾನಿಯಾಗಲು ಬಯಸಿದ್ದಾರೆ.
ಬಿಹಾರದ ಜಾತಿ ಗಣತಿಯ ನಂತರ ದೇಶದ 12 ರಾಜ್ಯಗಳ 48 ಲೋಕಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.

4.3 / 5. 7

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement