ನೇಣು ಬಿಗಿದುಕೊಂಡು ಕಾಂಗ್ರೆಸ್‌ ಶಾಸಕನ ಪತ್ನಿ ಆತ್ಮಹತ್ಯೆ…!?

ಕರೀಂನಗರ: ಕಾಂಗ್ರೆಸ್ ಶಾಸಕ ಮೇಡಿಪಲ್ಲಿ ಸತ್ಯಂ ಅವರ ಪತ್ನಿ ರೂಪಾ ದೇವಿ ಅವರು ಜೂನ್ 20 ಶುಕ್ರವಾರ ತಡರಾತ್ರಿ ಅಲ್ವಾಲ್‌ನ ಪಂಚಶೀಲ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದಾಗ ಸತ್ಯಂ ಅವರು ಹಿಂದಿನ ಕರೀಂನಗರ ಜಿಲ್ಲೆಯ ಚೊಪ್ಪದಂಡಿ ಕ್ಷೇತ್ರದಲ್ಲಿದ್ದರು. ಮೂಲಗಳ ಪ್ರಕಾರ ರೂಪಾ ದೇವಿ ಅವರು ತಮ್ಮ ಪತಿಗೆ ವೀಡಿಯೊ ಕಾಲ್ ಮಾಡಿ, ತನ್ನ ಜೀವನವನ್ನು ಕೊನೆಗೊಳಿಸುತ್ತಿರುವುದಾಗಿ ಹೇಳಿದ್ದಾರೆ. ತಕ್ಷಣವೇ ಶಾಸಕರು ಮನೆಗೆ ಧಾವಿಸಿದರೂ ಅದು ತಡವಾಗಿದೆ. ಅಷ್ಟರಲ್ಲಾಗಲೇ ರೂಪಾ ದೇವಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಾಗ ಆಕೆಯ ತಾಯಿ ಮತ್ತು ಮಕ್ಕಳು ಮನೆಯಲ್ಲಿದ್ದರು ಎಂದು ಹೇಳಲಾಗಿದೆ. ಕುಟುಂಬಸ್ಥರು ಅಕ್ಕಪಕ್ಕದವರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಶಾಸಕ ಆಸ್ಪತ್ರೆಗೆ ದಾಖಲು
ಪತ್ನಿ ಮೃತಪಟ್ಟಿರುವುದನ್ನು ನೋಡಿ ಶಾಸಕ ಸತ್ಯಂ ಪ್ರಜ್ಞೆ ಅವರು ತಪ್ಪಿ ಬಿದ್ದಿದ್ದಾರೆ. ಕಡಿಮೆ ರಕ್ತದೊತ್ತಡದಿಂದ ಅವರು ಕೆಳಕ್ಕೆ ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರೂಪಾದೇವಿ ಮತ್ತು ಸತ್ಯಂ ಸುಮಾರು 12 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಆದರೆ, ಇತ್ತೀಚೆಗೆ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂಬ ವರದಿಯಿದೆ. ಶಿಕ್ಷಕಿಯಾಗಿದ್ದ ರೂಪಾ ದೇವಿ ಎಂಬ ಶಿಕ್ಷಕಿ ಕಳೆದ ಎರಡು ದಿನಗಳಿಂದ ಶಾಲೆಗೆ ಹಾಜರಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿಗೆ ಮಗ ಯೋಹಿತ್, 11, ಮತ್ತು ಮಗಳು ರಿಷಿಕಾ ಶ್ರೀ 9 ಇಬ್ಬರು ಮಕ್ಕಳಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ರೂಪಾದೇವಿ ಅವರು ಎಂಎಲ್ಎ ಕ್ವಾರ್ಟರ್ಸ್‌ ಗೆ ಬರಲು ನಿರಾಕರಿಸಿದ್ದರು ಮತ್ತು ಪತಿಯ ಇಚ್ಛೆಗೆ ವಿರುದ್ಧವಾಗಿ ಅಲ್ವಾಲ್‌ ನಲ್ಲಿಯೇ ಉಳಿಯಲು ನಿರ್ಧರಿಸಿದ್ದರು ಎನ್ನಲಾಗಿದೆ.
ಮೀಸಲು ಕ್ಷೇತ್ರವಾದ ಚೊಪ್ಪದಂಡಿ ಕ್ಷೇತ್ರದಿಂದ ಈ ಹಿಂದೆ ಎರಡು ಬಾರಿ ಸ್ಪರ್ಧಿಸಿ ವಿಫಲರಾಗಿದ್ದ ಸತ್ಯಂ ಅವರು ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸರ್ಧಿಸಿ ಜಯಗಳಿಸಿದ್ದರು.

ಪ್ರಮುಖ ಸುದ್ದಿ :-   ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ : ಕ್ಷಮೆಯಾಚಿಸಿದ ಮಧ್ಯಪ್ರದೇಶದ ಸಚಿವ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement