ಮಹಿಳೆಯ ಮೇಲೆ ಕಾರು ಚಲಾಯಿಸಿದ ಆರೋಪ: ಹಿರಿಯ ಅಧಿಕಾರಿಯ ಪುತ್ರನ ಬಂಧನ

ಮುಂಬೈ: ಈ ವಾರದ ಆರಂಭದಲ್ಲಿ ಥಾಣೆಯಲ್ಲಿ ಸಾಮಾಜಿಕ ಮಾಧ್ಯಮದ ಪ್ರಭಾವಿ ಮಹಿಳೆಯನ್ನು ಗಾಯಗೊಳಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಹಿರಿಯ ಅಧಿಕಾರಿಯೊಬ್ಬರ ಮಗ ಸೇರಿದಂತೆ ಮೂವರನ್ನು ಭಾನುವಾರ ತಡರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನಿಲ ಗಾಯಕ್ವಾಡ್ ಅವರ ಪುತ್ರ ಅಶ್ವಜಿತ್ ಗಾಯಕ್ವಾಡ್ ಮತ್ತು ರೊಮಿಲ್ ಪಟೇಲ್ ಮತ್ತು ಸಾಗರ ಶೆಡ್ಜ್ ಬಂಧಿತರು.
“ಮೂವರನ್ನು ರಾತ್ರಿ 8:50 ಕ್ಕೆ ಬಂಧಿಸಲಾಗಿದೆ. ಘಟನೆಯಲ್ಲಿ ಬಳಸಲಾಗಿದೆ ಎನ್ನಲಾದ ಮಹೀಂದ್ರಾ ಸ್ಕಾರ್ಪಿಯೋ ಮತ್ತು ಲ್ಯಾಂಡ್‌ರೋವರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಕಾಸರವಾಡವಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ” ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಪಶ್ಚಿಮ) ಮಹೇಶ ಪಾಟೀಲ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಡಿಸೆಂಬರ್ 11 ರಂದು ಸಂಜೆ ಘೋಡ್‌ಬಂದರ್ ರಸ್ತೆಯ ಹೋಟೆಲ್ ಬಳಿ ಆರೋಪಿಗಳ ಕಾರು ಡಿಕ್ಕಿ ಹೊಡೆದು ಪ್ರಿಯಾ ಸಿಂಗ್ (26) ಗಂಭೀರವಾಗಿ ಗಾಯಗೊಂಡಿದ್ದರು.

ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಅವಳು ತನ್ನ ಗೆಳೆಯ ಅಶ್ವಜಿತ್‌ ಗಾಯಕ್ವಾಡ್‌ನನ್ನು ಹೋಟೆಲ್‌ಗೆ ಭೇಟಿಯಾಗಲು ಹೋಗಿದ್ದಳು ಆದರೆ ಇಬ್ಬರ ನಡುವೆ ಜಗಳವಾಯಿತು.
ತನ್ನ ಸಾಮಾನುಗಳನ್ನು ಪಡೆದುಕೊಳ್ಳಲು ಗಾಯಕ್ವಾಡ್ ಅವರ ಕಾರನ್ನು ತಲುಪಿದಾಗ, ಆತ ತನ್ನ ಚಾಲಕನಿಗೆ ತನ್ನ ಮೇಲೆ ಕಾರು ಓಡಿಸುವಂತೆ ಸೂಚಿಸಿದ್ದಾನೆ ಎಂದು ಅವಳು ಆರೋಪಿಸಿದ್ದಾಳೆ.
“ನನ್ನ ಬಲಗಾಲಿನಲ್ಲಿ ಮೂರು ಮೂಳೆಗಳು ಮುರಿದಿವೆ, ಶಸ್ತ್ರಚಿಕಿತ್ಸೆ ಮಾಡಲಾಗಿದೆ ಮತ್ತು ಕಾಲಿಗೆ ರಾಡ್ ಅನ್ನು ಅಳವಡಿಸಲಾಗಿದೆ, ನನ್ನ ದೇಹದ ಎಡಭಾಗದಲ್ಲಿ, ನನ್ನ ಭುಜದಿಂದ ನನ್ನ ಸೊಂಟದವರೆಗೆ ಆಳವಾದ ಗಾಯಗಳಾಗಿವೆ, ನನಗೆ ನನ್ನ ಚಲಿಸಲು ಸಾಧ್ಯವಾಗುತ್ತಿಲ್ಲ. ಘಟನೆ ನಡೆದ ದಿನವೇ ನಾನು ದೂರು ದಾಖಲಿಸಿದ್ದೆ ಮತ್ತು ಈಗ ಪ್ರಕರಣ ದಾಖಲಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.
‘ನ್ಯಾಯ’ಕ್ಕಾಗಿ ಆಗ್ರಹಿಸಿ ಮಹಿಳೆಯು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರಿಗೆ ಮನವಿ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಘಾಟ್‌ಕೋಪರ್‌ ಹೋರ್ಡಿಂಗ್ ಕುಸಿತ ದುರಂತ : ಉದಯಪುರದಲ್ಲಿ ಜಾಹೀರಾತು ಫಲಕದ ಮಾಲೀಕನ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement