ಉದ್ಯಮಿ ಆನಂದ ಮಹಿಂದ್ರಾ ಗಮನ ಸೆಳೆದ ಅಂಕೋಲಾ ಬಸ್‌ ನಿಲ್ದಾಣದಲ್ಲಿನ ಹಾಲಕ್ಕಿ ಮಹಿಳೆಯ ಸ್ವಚ್ಛತೆ | ವೀಕ್ಷಿಸಿ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ಸಿನಿಂದ ಹೊರಚೆಲ್ಲಿದ ಕಸ ಆರಿಸಿ ಕಸದ ಬುಟ್ಟಿಗೆ ಹಾಕುತ್ತಿರುವ ಹಾಲಕ್ಕಿ ಮಹಿಳೆಯ ಸ್ವಚ್ಛತಾ ಕಳಕಳಿಯ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು ಈ ಮಹಿಳೆಯ ಕೆಲಸಕ್ಕೆ ಹಲವಾರು ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬೇಸಿಗೆ ಸಮಯದಲ್ಲಿ ಸಿಗುವ ಕಾಡು ಹಣ್ಣುಗಳನ್ನು ಸಂಗ್ರಹಿಸಿ ಈ ಬಡ ಹಾಲಕ್ಕಿ ಮಹಿಳೆಯರು ಮರದ ಎಲೆಯ ಕೊಟ್ಟೆಯಲ್ಲಿ ಹಾಕಿ ಬಸ್‌ ನಿಲ್ದಣದಲ್ಲಿ ಮಾರಾಟ ಮಾಡುತ್ತಾರೆ.
ನೇರಳೆ ಹಣ್ಣು, ಹಸೆಮಡ್ಲಹಣ್ಣು, ಸಂಪಿಗೆ ಹಣ್ಣು ಮೊದಲಾದ ಬಗೆಯ ಅಪರೂಪದ ಪ್ರಾಕೃತಿಕವಾಗಿ ಕೆಲವೇ ದಿನಗಳ ಕಾಲ ದೊರಕುವ ಹಣ್ಣುಗಳನ್ನು ಕಾಡು ಮೇಡುಗಳಲ್ಲಿ ಆರಿಸಿ ತಂದು ಮಾರಾಟ ಮಾಡಿ ತಮ್ಮ ದಿನದ ಬದುಕು ನಿರ್ವಹಿಸುತ್ತಾರೆ.

ಹೀಗೆ ಅಂಕೋಲಾ ಬಸ್ ನಿಲ್ದಾಣದಲ್ಲಿ ಹಣ್ಣು ಮಾರುವ ಹಾಲಕ್ಕಿ ಮಹಿಳೆಯೋರ್ವರು ಹಣ್ಣು ಮಾರಾಟ ಮಾಡುವ ಜೊತೆಗೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಎಸೆದ ಕಸ ತಂದು ಕಸದ ಬುಟ್ಟಿಗೆ ತುಂಬುವ ವೀಡಿಯೋ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುವ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿತ್ತು ಇದೀಗ ಖ್ಯಾತ ಉದ್ಯಮಿ ಮಹಿಂದ್ರಾ ಮತ್ತು ಮಹಿಂದ್ರಾ ಸಂಸ್ಥೆಯ ಅಧ್ಯಕ್ಷ ಆನಂದ ಮಹಿಂದ್ರಾ ಅವರು ಟ್ವೀಟ್ ಮಾಡಿ ಇದು ನಿಜವಾದ ಸ್ವಚ್ಛ ಭಾರತ, ಇವರು ನಿಜವಾದ ಹೀರೋಗಳು ಇವರನ್ನು ಗುರುತಿಸದಿರುವುದು ವಿಪರ್ಯಾಸ ಇದು ಯಾವ ಪ್ರದೇಶ ಅವರನ್ನು ಭೇಟಿ ಮಾಡಬಹುದೇ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಏಪ್ರಿಲ್‌ 30 ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಆದರ್ಶ ಹೆಗಡೆ ಎನ್ನುವ ಟ್ವೀಟರ್ ಬಳಕೆದಾರರು ಅಂಕೋಲೆಯ ಹಾಲಕ್ಕಿ ಮಹಿಳೆ ಕುರಿತು ಮಾಹಿತಿ ನೀಡಿದ್ದಾರೆ.
ಬಡ ಹಾಲಕ್ಕಿ ಮಹಿಳೆಯ ಪರಿಸರ ಕಾಳಜಿ ವಿಶ್ವದ ಗಮನ ಸೆಳೆದಿದೆ.

4.1 / 5. 7

ನಿಮ್ಮ ಕಾಮೆಂಟ್ ಬರೆಯಿರಿ

advertisement