ಹಿಂದಿ ಹೇರಿದರೆ ರಕ್ತಪಾತವಾದೀತು: ಸಿದ್ದರಾಮಯ್ಯ ಅಬ್ಬರ

ಮಂಡ್ಯ: ಹಿಂದಿ ರಾಷ್ಟ್ರೀಯ ಭಾಷೆಯಲ್ಲ, ಅದನ್ನು ಬಲವಂತವಾಗಿ ರಾಜ್ಯದ ಜನರ ಮೇಲೆ ಹೇರಿದರೆ ರಕ್ತಪಾತ ಉಂಟಾಗುವ ಸಾಧ್ಯತೆಯಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಬ್ಬರಿಸಿದ್ದಾರೆ.
ಉತ್ತರ ಭಾರತದ ಐದಾರು ರಾಜ್ಯಗಳನ್ನು ಹೊರತುಪಡಿಸಿದರೆ ಪಂಜಾಬ್‌, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಿಂದಿ ಮಾತಾಡುವವರೇ ಇಲ್ಲ. ಇದರಿಂದಾಗಿ ಹಿಂದಿ ರಾಷ್ಟ್ರ ಭಾಷೆಯಾಗಲು ಸಾಧ್ಯವಿಲ್ಲ. ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ ಎಂದರು.
ಕರ್ನಾಟಕದಲ್ಲಿ ಕನ್ನಡವನ್ನು ಹಿಂದಕ್ಕೆ ತಳ್ಳಿ, ಹಿಂದಿ ಮುನ್ನಲೆಗೆ ಬರಲು ಸಾಧ್ಯವಿಲ್ಲ. ಕನ್ನಡಿಗರು ಅಭಿಮಾನ್ಯಶೂನ್ಯರಲ್ಲ, ಆದರೆ ಅವರಿಗೆ ಅಭಿಮಾನದ ಕೊರತೆಯಿದೆ. ನಾವು ಮೊದಲು ಕನ್ನಡಿಗರು ನಂತರ ಭಾರತೀಯರು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕನ್ನಡದ ಬಗ್ಗೆ ಕನ್ನಡಿಗರಲ್ಲಿಯೇ ಅಭಿಮಾನ ಇರಬೇಕು. ಅದು ಜೀವನದ ಪ್ರತಿಯೊಂದು ಸ್ತರದಲ್ಲಿಯೂ ಪ್ರತಿಫಲಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement