ಬೆಂಗಳೂರು: ಚುನಾವಣಾ ಸುಧಾರಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸುವ ವಿಚಾರವಾಗಿ ಮಾತನಾಡುತ್ತಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗಳ ಮುಂದೆ ಭಾವುಕರಾದ ವಿದ್ಯಮಾನ ನಡೆದಿದೆ.
ನಾವು ಸೀಮಿತವಾದ ಚೌಕಟ್ಟಿನಲ್ಲಿ ನಮ್ಮನ್ನು ಕಟ್ಟಿ ಹಾಕಿಕೊಂಡಿದ್ದೇವೆ. ಬ್ರಿಟಿಷ್ ಶಿಕ್ಷಣ ಪದ್ಧತಿಯಿಂದಾಗಿ ಜೀವನದ ಕಲ್ಪನೆಗಳು ಇಲ್ಲದಂತಾಗಿದೆ. ಸಾರ್ಥಕತೆಯ ಭಾವವೇ ಇಲ್ಲದಂತಾಗಿದೆ .ಆ ನಂಬಿಕೆಗಳು ಹಾಗೂ ವಿಶ್ವಾಸ ಬರದೇ ಹೋದಲ್ಲಿ ವ್ಯವಸ್ಥೆ ನಡೆಸಲು ಸಾಧ್ಯವಿಲ್ಲ. ಯಾವ ವ್ಯವಸ್ಥೆಯಲ್ಲಿ ನಾವು ಇದ್ದೇವೆಯೋ ಅದನ್ನು ಸರಿಯಾಗಿ ನಡೆಸಬೇಕಾದರೆ ಜ್ಞಾನದ ವಿಸ್ತಾರ ಆಗಬೇಕು. ಆ ಪ್ರಯತ್ನ ನಡೆಯಬೇಕು ಎಂದು ಹೇಳುತ್ತ ಸ್ಪೀಕರ್ ಕಣ್ಣೀರು ಹಾಕಿದರು.
ಕೇವಲ ದೋಷಾರೋಪಣೆ ಮತ್ತು ಟೀಕೆಗಳು ಆಗಬಾರದು. ವ್ಯವಸ್ಥೆಗಳ ರೂಪಿಸಲು ನಮ್ಮ ಜವಾಬ್ದಾರಿ ಅರ್ಥ ಮಾಡಿಕೊಳ್ಳಬೇಕು. ಸೃಷ್ಟಿಯ ಸತ್ಯದ ಅರಿವನ್ನ ಮುಡಿಸಿಕೊಳ್ಳುವ ಹಂತಕ್ಕೆ ಹೋಗಬೇಕು.ಇಂಗ್ಲಿಷ್ -ಬ್ರಿಟಿಷ್ ಶಿಕ್ಷಣದ ಪದ್ಧತಿಯಿಂದ ನಮ್ಮ ಜೀವನದ ಬಗ್ಗೆ ನಂಬಿಕೆಗಳೇ ಇಲ್ಲ ಹಾಗೂ ಸಾರ್ಥಕತೆಯೇ ಇಲ್ಲದಂತಾಗಿದೆ. ನಂಬಿಕೆಗಳು ಮತ್ತು ವಿಶ್ವಾಸಗಳು ಬರದೆ ಹೋದರೆ ಈ ವ್ಯವಸ್ಥೆಯನ್ನ ಚನ್ನಾಗಿ ನಡೆಸಲು ಸಾಧ್ಯವಿಲ್ಲ. ಯಾವ ವ್ಯವಸ್ಥೆಯಲ್ಲಿ ನಾವು ಇದ್ದೇವೆ ಸರಿಯಾಗಿ ನಡೆಸಬೇಕು ಎಂದರು.
ಚುನಾವಣಾ ಸುಧಾರಣೆ ಬಹಳ ದೊಡ್ಡ ಜವಾಬ್ದಾರಿ. ಇದರ ಗಾಂಭೀರ್ಯತೆ ಗೊತ್ತಿರುವುದರಿಂದ ಸದನದಲ್ಲಿ ಚರ್ಚೆ ಮಾಡಬೇಕಿದೆ.
ಸಂವಿಧಾನದ ಬಗ್ಗೆ ಚರ್ಚೆ ಮಾಡಿದ್ದೇವೆ. ಎಷ್ಟು ಒಳ್ಳೆಯ ಚರ್ಚೆ ಮಾಡಿದ್ದೇವೆ. ಎಷ್ಟು ಸದಸ್ಯರು ಸಂತೋಷ ಪಟ್ಟರು. ಬೇರೆ ಬೇರೆ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸುವ ಸ್ವಭಾವ ನಮ್ಮದಾಗಬೇಕು. ಬಸವಣ್ಣನ ನಾಡಿನವರು ನಾವು ಅನುಭವ ಮಂಟಪದಲ್ಲಿ ಚರ್ಚೆಯಾಗಿತ್ತು. ಮುಕ್ತವಾದ ವೇದಿಕೆಗಳಲ್ಲಿ ಚರ್ಚೆಗಳು ಅಗಬೇಕು ಎಂದರು.


ನಿಮ್ಮ ಕಾಮೆಂಟ್ ಬರೆಯಿರಿ