ಅದಿಲಾಬಾದ್ (ತೆಲಂಗಾಣ): ವಾಟ್ಸಾಪ್ ಸಂದೇಶದ ಮೂಲಕ ತನ್ನ ಪತ್ನಿಗೆ ನಿಷೇಧಿತ ತ್ರಿವಳಿ ತಲಾಖ್ ಹೇಳಿದ ವ್ಯಕ್ತಿಯನ್ನು ಆದಿಲಾಬಾದ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಅಬ್ದುಲ್ ಅತೀಕ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದಿಲಾಬಾದ್‌ನ ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಿ ಶ್ರೀನಿವಾಸ್ ಪ್ರಕಾರ, ಅತೀಕ್ 2017 ರಲ್ಲಿ ಜಾಸ್ಮಿನ್ (28) ಎಂಬ ಹುಡುಗಿಯನ್ನು ವಿವಾಹವಾಗಿದ್ದ.
“ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಎರಡು ವರ್ಷಗಳಿಂದ ಪತ್ನಿ ಮತ್ತು ಪತಿ ನಡುವೆ ಕೆಲವು ಘರ್ಷಣೆಗಳು ನಡೆಯುತ್ತಿದ್ದವು. 2023ರಲ್ಲಿ ಪತ್ನಿ ಜಾಸ್ಮಿನ್ ಪತಿ ಅಬ್ದುಲ್ ಅತೀಕ್ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿದ್ದರು. ನಂತರ ಆಕೆ ಕೋರ್ಟ್‌ಗೆ ಹೋಗಿ ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದಳು. ಪತ್ನಿಗೆ ತಿಂಗಳಿಗೆ 7,200 ರೂಪಾಯಿ ನೀಡುವಂತೆ ಕೋರ್ಟ್ ತೀರ್ಪು ನೀಡಿದೆ. ಆದರೆ, ಜಾಸ್ಮಿನ್‌ಗೆ ಹಣ ನೀಡುವುದಿಲ್ಲ ಎಂದು ಅಬ್ದುಲ್ ಅತೀಕ್ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾಸ್ಮಿನ್ ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸಿದ ನಂತರ ಅದು ಅತೀಕ್‌ಗೆ ಹಾಜರಾಗುವಂತೆ ಸಮನ್ಸ್ ನೀಡಿತು. ನಂತರ ಆಕೆಗೆ ವಾಟ್ಸಾಪ್‌ನಲ್ಲಿ ಮೂರು ಬಾರಿ ತಲಾಖ್ ಸಂದೇಶ ಕಳುಹಿಸಿದ್ದಾನೆ. ಅದರ ಮೇಲೆ ನಾವು ನಿನ್ನೆ ಅಬ್ದುಲ್ ಅತೀಕ್ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದೇವೆ ಮತ್ತು ನಾವು ಅವನನ್ನು ರಿಮಾಂಡ್ ಮಾಡಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 2019 ರಲ್ಲಿ ಸಂಸತ್ತು ಅಂಗೀಕರಿಸಿದ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯಿದೆ 2019ರ ಪ್ರಕಾರ, ಮುಸ್ಲಿಮರಲ್ಲಿ ‘ತ್ರಿವಳಿ ತಲಾಖ್’ ಮೂಲಕ ತ್ವರಿತ ವಿಚ್ಛೇದನ ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ.
ಆಗಸ್ಟ್ 22, 2017 ರಂದು, ಸುಪ್ರೀಂ ಕೋರ್ಟ್ ತ್ವರಿತ ತ್ರಿವಳಿ ತಲಾಖ್ (ತಲಾಖ್-ಎ-ಬಿದ್ದಾ) ಅಸಂವಿಧಾನಿಕ ಎಂದು ಪರಿಗಣಿಸಿತು.
ನಿಮ್ಮ ಕಾಮೆಂಟ್ ಬರೆಯಿರಿ