ಹೆಲಿಕಾಪ್ಟರ್‌ನಿಂದ ನೇತಾಡಿದ್ದು ಧ್ವಜ ಸ್ಥಾಪಕ ವ್ಯಕ್ತಿ ಹೊರತು ಮೃತದೇಹವಲ್ಲ: ಅಫ್ಘಾನ್ ಪತ್ರಕರ್ತ

ಕಾಬೂಲ್: ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದ ಮೇಲೆ ಗಸ್ತು ತಿರುಗುತ್ತಿದ್ದ ಅಮೆರಿಕಾ ನಿರ್ಮಿತ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ನಲ್ಲಿ ನೇತಾಡಿದ್ದು ಧ್ವಜ ಸ್ಥಾಪಕ ವ್ಯಕ್ತಿ ಹೊರತು ಮೃತದೇಹವಲ್ಲ ಎಂದು ಅಫ್ಘಾನ್ ಪತ್ರಕರ್ತ ಸ್ಪಷ್ಟಪಡಿಸಿದ್ದಾರೆ.
ಹೆಲಿಕಾಪ್ಟರ್ ನಲ್ಲಿ ವ್ಯಕ್ತಿಯೋರ್ವ ನೇತಾಡುತ್ತಿದ್ದ ವಿಡಿಯೋ ತುಣುಕು ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ, ಆ ವ್ಯಕ್ತಿ ಸತ್ತಿದ್ದಾನೋ ಅಥವಾ ಬದುಕಿದ್ದಾನೋ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿರಲಿಲ್ಲ. ನಂತರ ಅಫ್ಘಾನಿಸ್ತಾನದ ಪೈಲಟ್ ಚಾಪರ್ ಹಾರಿಸುತ್ತಿದ್ದನೆಂದು ಸ್ಪಷ್ಟಪಡಿಸಲಾಯಿತು.
ತಾಲಿಬಾನ್ ಫೈಟರ್ ಗಾಳಿಯಲ್ಲಿ ತಾಲಿಬಾನ್ ಧ್ವಜವನ್ನು ಸ್ಥಾಪಿಸಲು ಪ್ರಯತ್ನಿಸಿದ್ದು ಆದರೆ ಅದು ಸಾಧ್ಯವಾಗಲಿಲ್ಲ ಎಂದು ಅಫ್ಘಾನ್ ಪತ್ರಕರ್ತ ಬಿಲಾಲ್ ಸರ್ವಾರಿ ಟ್ವೀಟ್ ಮಾಡಿದ್ದಾರೆ.
ಕಳೆದ ವಾರ ಸ್ಥಳೀಯ ಮಾಧ್ಯಮ ವರದಿಗಳು ತಾಲಿಬಾನ್ ಅಮೆರಿಕಾ ಸೇನೆಯ ಬಯೋಮೆಟ್ರಿಕ್ ಸಾಧನಗಳನ್ನು ತನ್ನ ಸೈನ್ಯದ ನಿರ್ಣಾಯಕ ದತ್ತಾಂಶವನ್ನು ಮತ್ತು ಇತರ ಅಮೆರಿಕಾ ಮಿಲಿಟರಿ ಉಪಕರಣಗಳೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ಹೇಳಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement