ಕರ್ನಾಟಕದಲ್ಲಿ ಬುಧವಾರ ಕೊರೊನಾ ದೈನಂದಿನ ಸೋಂಕು ಇಳಿಕೆ

ಬೆಂಗಳೂರು; ಕರ್ನಾಟಕದಲ್ಲಿ ಬುಧವಾರ ಕೊರೊನಾ ಸೋಂಕು ಸಾವು ತುಸು ಇಳಿಕೆಯಾಗಿದೆ. ರಾಜ್ಯದಲ್ಲಿ ಬುಧವಾರ ಹೊಸದಾಗಿ 2,743 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 75 ಮಂದಿ ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ 3.081 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.
ಕೊರೊನಾ ಸೋಂಕಿನ ಪಾಸಿಟಿವಿ ಪ್ರಮಾಣ ಶೇ.1.64 ಕ್ಕೆ ಕುಸಿದಿದ್ದು ರಾಜ್ಯದಲ್ಲಿ ಸೋಂಕಿನ ಮರಣ ಪ್ರಮಾಣ ಶೇ.2.73ಕ್ಕೆ ಇಳಿಕೆಯಾಗಿದೆ.
ಈಗ ರಾಜ್ಯದಲ್ಲಿ 39,603 ಕ್ಕೆ ಸಕ್ರಿಯ ಪ್ರಕರಣಗಳು ಕುಸಿದಿವೆ
ರಾಜ್ಯದಲ್ಲಿ ಇದುವರೆಗೆ ಒಟ್ಟಾರೆ ಸೋಂಕಿನ ಸಂಖ್ಯೆ 28,62,338 ಮಂದಿಗೆ ಏರಿಕೆಯಾಗಿದೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 27,87,111ಕ್ಕೆ ಹೆಚ್ಚಳವಾಗಿದೆ .ಒಟ್ಟು 35,601 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ
ಬೆಂಗಳೂರಿನಲ್ಲಿ ಇಳಿಕೆ
ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಸೋಂಕು ಸ್ವಲ್ಪ ಇಳಿಕೆಯಾಗಿದೆ. 611 ಜನರಿಗೆ ಸೋಂಕು ತಗುಲಿದ 12 ಜನರು ಸಾವನ್ನಪ್ಪಿದ್ದಾರೆ. 693 ಮಂದಿ ಚೇತರಿಸಿಕೊಂಡಿದ್ದಾರೆ.
ಜಿಲ್ಲಾವಾರು ಸಂಪೂರ್ಣ ಮಾಹಿತಿಯನ್ನು ಪಿಡಿಎಫ್‌ನಲ್ಲಿ ಕೆಳಗೆ ಕೊಡಲಾಗಿದೆ.

07-07-2021 HMB Kannada

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement