ಭಾರತದ ಐಸಿಸ್ ಮುಖ್ಯಸ್ಥ, ಆತನ ಸಹಚರ ಅಸ್ಸಾಂನಲ್ಲಿ ಬಂಧನ

ಗುವಾಹತಿ : ಐಸಿಸ್ ನ ಭಾರತದ ಮುಖ್ಯಸ್ಥ ಹ್ಯಾರಿಸ್ ಫಾರೂಕಿ ಮತ್ತು ಆತನ ಸಹಚರ ಅನುರಾಗ್ ಸಿಂಗ್ ಬಾಂಗ್ಲಾದೇಶದಿಂದ ಬುಧವಾರ ಭಾರತದ ಗಡಿ ದಾಟಿದ ಕೂಡಲೇ ಅಸ್ಸಾಂನ ಧುಬ್ರಿಯಲ್ಲಿ ಬಂಧಿಸಲಾಗಿದೆ.
ಇದಕ್ಕೂ ಮುನ್ನ ಇವರಿಬ್ಬರು ಬಾಂಗ್ಲಾದೇಶದಿಂದ ಅಸ್ಸಾಂಗೆ ಬರಲು ಗಡಿ ದಾಟಲಿದ್ದಾರೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ಪೊಲೀಸ್ ತಂಡವನ್ನು ನಿಯೋಜಿಸಲಾಗಿತ್ತು.
ಈ ಕುರಿತು ಹೇಳಿಕೆ ನೀಡಿರುವ ಪೊಲೀಸರು, ಬಾಂಗ್ಲಾದೇಶದಲ್ಲಿ ರಾಷ್ಟ್ರದಲ್ಲಿ ಬೀಡು ಬಿಟ್ಟಿದ್ದ ಐಸಿಸ್‌ನ ಇಬ್ಬರು ಉನ್ನತ ಮಟ್ಟದ ನಾಯಕರು ಧುಬ್ರಿ ಸೆಕ್ಟರ್‌ನಲ್ಲಿ ಭಾರತಕ್ಕೆ ಬಂದು ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲಿದ್ದಾರೆ ಎಂದು ಗುಪ್ತ ಸಂಸ್ಥೆಗಳಿಂದ ಮಾಹಿತಿ ಲಭಿಸಿತ್ತು. ಮಾಹಿತಿಯ ಆಧಾರದ ಮೇಲೆ, ರಾಷ್ಟ್ರೀಯ ತನಿಖಾ ಸಂಸ್ಥೆಗೆ ಬೇಕಾಗಿದ್ದ ಆರೋಪಿಗಳನ್ನು ಪತ್ತೆ ಹಚ್ಚಲು ಮತ್ತು ಬಂಧಿಸಲು ಐಜಿಪಿ ಪಾರ್ಥಸಾರಥಿ ಮಹಂತ ನೇತೃತ್ವದ ವಿಶೇಷ ಕಾರ್ಯಪಡೆ ತಂಡವನ್ನು ನಿಯೋಜಿಸಲಾಗಿತ್ತು.

ಆನಂತರ, ಸುಳಿವು ಸ್ವಭಾವತಃ ನಂಬಲರ್ಹವಾಗಿರುವುದರಿಂದ, ಅಪರಾಧಿಗಳನ್ನು ಹಿಡಿಯಲು ಅಂತರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಶೋಧ ಪ್ರಾರಂಭಿಸಲಾಯಿತು. ಮಾರ್ಚ್‌ 20ರ ಮುಂಜಾನೆ 4:15 ರ ಸುಮಾರಿಗೆ, ಆರೋಪಿಗಳು ಅಂತರಾಷ್ಟ್ರೀಯ ಗಡಿ ದಾಟಿ ಭಾರತಕ್ಕೆ ಪ್ರವೇಶಿಸಿದ ನಂತರ ಅವರನ್ನು ಧುಬ್ರಿಯ ಧರ್ಮಶಾಲಾ ಪ್ರದೇಶದಲ್ಲಿ ಪತ್ತೆ ಮಾಡಲಾಯಿತು ಹೇಳಿಕೆ ತಿಳಿಸಿದೆ. ಅವರ ಬಂಧನದ ನಂತರ, ಇಬ್ಬರನ್ನು ಗುವಾಹತಿಗೆ ಕರೆತರಲಾಯಿತು.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ಇಬ್ಬರ ಗುರುತು ಪತ್ತೆಯಾಗಿದ್ದು, ಆರೋಪಿ ಡೆಹ್ರಾಡೂನ್‌ನ ಹ್ಯಾರಿಸ್‌ ಫಾರೂಕಿ ಅಲಿಯಾಸ್‌ ಹರೀಶ್‌ ಅಜ್ಮಲ್‌ ಭಾರತದಲ್ಲಿ ಐಸಿಸ್‌ ಮುಖ್ಯಸ್ಥನಾಗಿದ್ದು, ಆತನ ಸಹಚರ ಪಾಣಿಪತ್‌ನ ದಿವಾನಾದ ಅನುರಾಗ್‌ ಸಿಂಗ್‌ ಅಲಿಯಾಸ್‌ ರೆಹಾನ್‌ ಎಂಬಾತ ಇಸ್ಲಾಂಗೆ ಮತಾಂತರಗೊಂಡಿದ್ದು, ಆತನ ಪತ್ನಿ ಬಾಂಗ್ಲಾದೇಶಿ ರಾಷ್ಟ್ರೀಯಳಾಗಿದ್ದಾಳೆ. ಅವರಿಬ್ಬರೂ ಭಾರತದಲ್ಲಿ ಐಸಿಸ್‌ನ ಪ್ರೇರಿತ ನಾಯಕರು/ಸದಸ್ಯರು ಎಂದು ಹೇಳಿಕೆ ತಿಳಿಸಿದೆ.
ದೆಹಲಿಯ ಎನ್‌ಐಎ(NIA , ಲಕ್ನೋ ಎಟಿಎಸ್‌, ಅಸ್ಸಾಂ ಎಸ್‌ಟಿಎಫ್‌ ಗಳಲ್ಲಿ ಅವರ ವಿರುದ್ಧ ಹಲವಾರು ಪ್ರಕರಣಗಳು ಬಾಕಿ ಇವೆ; ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲು ಎನ್‌ಐಎಗೆ ಹಸ್ತಾಂತರಿಸಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement