
ಬೆಂಗಳೂರು: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಹಿನ್ನೆಲೆ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವುದಿಲ್ಲ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅಧಿಕೃತವಾಗಿ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾವೈರಸ್ ಹಾವಳಿ ನಡುವೆ ಪರೀಕ್ಷೆ ನಡೆಸಬೇಕೋ ಬೇಡವೋ ಎಂಬುದರ ಕುರಿತು ರಾಜ್ಯದ ಶಿಕ್ಷಣ ತಜ್ಞರು, ಸಚಿವರು, ಹಿರಿಯ ಪತ್ರಕರ್ತರು, ಪೋಷಕರು ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ.
ರಾಜ್ಯದಲ್ಲಿ ಒಂದು ವರ್ಗವು ಪರೀಕ್ಷೆ ಬೇಡ ಎನ್ನುತ್ತಿದ್ದರೆ, ಇನ್ನೊಂದು ವರ್ಗವು ಪರೀಕ್ಷೆ ನಡೆಸಬೇಕು ಎನ್ನುತ್ತಿದೆ. ಪ್ರತಿಯೊಂದು ನಿರ್ಧಾರದ ಬಗ್ಗೆ ಪರ-ವಿರೋಧಗಳು ವ್ಯಕ್ತವಾಗುವುದು ಸರ್ವೇ ಸಾಮಾನ್ಯವಾಗಿದೆ. ವಿದ್ಯಾರ್ಥಿಗಳ ಆರೋಗ್ಯ ಮತ್ತು ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ರದ್ದು ಪಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ರಾಜ್ಯದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಳಿಸುವ ನಿರ್ಧಾರದಿಂದ ಕುಗ್ಗಬಾರದು. ಐಐಟಿ ವ್ಯಾಸಂಗ ಮಾಡುವ ಗುರಿ ಹೊಂದಿವರಿದ್ದಾರೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಪರೀಕ್ಷೆಗಳನ್ನು ನಡೆಸುವುದು ಸೂಕ್ತವಲ್ಲ ಎಂದರು.
ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದಕ್ಕೆ ಕನಿಷ್ಠ 12 ದಿನಗಳೇ ಬೇಕಾಗಿರುತ್ತದೆ. ಕೊವಿಡ್-19 ಸಂದಿಗ್ಧ ಸ್ಥಿತಿಯಲ್ಲಿ ಪರೀಕ್ಷೆಗಳನ್ನು ನಡೆಸುವ ತೊಂದರೆ ತೆಗೆದುಕೊಳ್ಳುವುದಿಲ್ಲ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಆದರೆ ನಮ್ಮ ರಾಜ್ಯದಲ್ಲಿ ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಆ ಎಲ್ಲಾ ಮಕ್ಕಳಿಗೆ ಕಳೆದ ವರ್ಷ ಮೊದಲ ವರ್ಷದ ಪಿಯುಸಿಯನ್ನು ಡಿಸ್ಟ್ರಿಕ್ಟ್ ಲೆವೆಲ್‌ನಲ್ಲಿ ಎದುರಿಸಿದ್ದರು. ಅದರ ಆಧಾರದ ಮೇಲೆ ಗ್ರೇಡಿಂಗ್ ಕೊಡುತ್ತೇವೆ. ಈ ಗ್ರೇಡೇಷನ್ ನಮಗೆ ಸಮಾಧಾನ ಇಲ್ಲ, ತುಂಬಾ ಓದಿದ್ದೇನೆ. ತುಂಬಾ ಪರಿಶ್ರಮ ಪಟ್ಟಿದ್ದೇನೆ ಎನ್ನುವ ಮಕ್ಕಳ ಸಂಖ್ಯೆಯೂ ಇದೆ. ಈ ರೀತಿ ಮಕ್ಕಳಿಗೆ ಕೋವಿಡ್ ಮುಗಿದ ಮೇಲೆ ಪರೀಕ್ಷೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತೇವೆ. ಈಗ ದ್ವಿತೀಯ ಪಿಯುಸಿ ಮಕ್ಕಳು ಪ್ರಮೋಟೆಡ್ ಎಂದು ಮಾಡಿದ್ದೇವೆ. ಬೇರೆ ಬೇರೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡವರು ಚಿಂತಿಸುವ ಅಗತ್ಯವಿಲ್ಲ ಎಂದಿದ್ದಾರೆ.

ಜುಲೈನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ..
ರಾಜ್ಯದಲ್ಲಿ 8.75 ಲಕ್ಷ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದೆ. ಸಿಬಿಎಸ್‌ಇ ಪರೀಕ್ಷೆ ರದ್ದು ಮಾಡಲಾಗಿದೆ. ಆದರೆ, ರಾಜ್ಯದಲ್ಲಿ ಎಸ್‌ಎಸ್‌ಎಲ್ಸಿ ಪರೀಕ್ಷೆ ನಡೆಯಲಿದೆ.
ಗಣಿತ, ವಿಜ್ಞಾನ, ಸಮಾಜ ವಿಜ್ಞಾನಗಳ ಕೋರ್ ಸಬ್ಜೆಕ್ಟ್ ಪರೀಕ್ಷೆ. ಮಲ್ಟಿ ಚಾಯ್ಸ್ ಪ್ರಶ್ನೆಗಳ ಮಾದರಿಯಲ್ಲಿ ಸರಳವಾಗಿ ಪರೀಕ್ಷೆ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಪ್ರಶ್ನೆಗಳು ಸರಳವಾಗಿರುತ್ತವೆ. ಇನ್ನೊಂದು ಪತ್ರಿಕೆ ಭಾಷೆ ಪರೀಕ್ಷೆ ನಡೆಯಲಿದೆ. ಮಕ್ಕಳನ್ನು ಫೇಲ್ ಮಾಡಲು ಪರೀಕ್ಷೆ ಮಾಡುತ್ತಿಲ್ಲ. ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಠಿಯಿಂದ ಪರೀಕ್ಷೆ ಮಾಡಲಾಗುವುದು. ಯಾರನ್ನೂ ಫೇಲ್ ಮಾಡಲ್ಲ. ಗ್ರೇಡ್ ಆಧಾರದಲ್ಲಿ ಪಾಸ್ ಮಾಡಲಾಗುವುದು. ಪ್ರೌಢಶಿಕ್ಷಣ ಮಂಡಳಿ ಮಾರ್ಗಸೂಚಿ ನೀಡಲಿದೆ ಎಂದು ಹೇಳಿದ್ದಾರೆ.
ಜುಲೈ ಮೂರನೇ ವಾರ ನಡೆಸುವ ಎಸ್‌ಎಸ್‌ಎಲ್ಸಿ ಪರೀಕ್ಷೆ ನಡೆಯಲಿದೆ. 10 ದಿನಗಳ ಮೊದಲು ದಿನಾಂಕ ಪ್ರಕಟಿಸಲಾಗುವುದು. ಕೋವಿಡ್ ಕಾರಣದಿಂದ ಪರೀಕ್ಷೆ ಬರೆಯಲು ಸಾಧ್ಯವಾಗದವರಿಗೆ ಮತ್ತೊಮ್ಮೆ ಫ್ರೆಷರ್ಸ್ ರೀತಿಯಲ್ಲಿ ಪರೀಕ್ಷೆ ನಡೆಯಲಿದೆ. 6 ಸಾವಿರ ಪರೀಕ್ಷಾ ಕೇಂದ್ರಗಳಲ್ಲಿ 1 ಡೆಸ್ಕ್ ಗೆ ಒಬ್ಬ ವಿದ್ಯಾರ್ಥಿ ಕೂರಿಸಿ ಪರೀಕ್ಷೆ ನಡೆಸಲಾಗುವುದು. ಎಲ್ಲಾ ವಿದ್ಯಾರ್ಥಿಗಳಿಗೆ ಎನ್ 95 ಮಾಸ್ಕ್ ನೀಡಲಾಗುವುದು. ಸರಳ ಪ್ರಶ್ನೆಗಳೊಂದಿಗೆ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ