ದ್ವಿತೀಯ ಪಿಯು ಪರೀಕ್ಷೆ : ಧಾರವಾಡ ಜೆಎಸ್‌ಎಸ್ ಎಸ್‌ ಎಂ ಪಿ ಯು ಕಲಾ-ವಾಣಿಜ್ಯ ಕಾಲೇಜ್‌ ಉತ್ತಮ ಫಲಿತಾಂಶ

ಧಾರವಾಡ: ಧಾರವಾಡ ನಗರದ ಸವದತ್ತಿ ರಸ್ತೆಯ ಮುರಘಾಮಠದ ಬಳಿಯ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಪದವಿಪೂರ್ವ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ.
ಕಾಲೇಜಿನ ಒಟ್ಟಾರೆ ಫಲಿತಾಂಶ ಶೇ. ೮೦ ಆಗಿದೆ. ವಾಣಿಜ್ಯ ವಿಭಾಗದಲ್ಲಿ ಆರತಿ ಬಾಳಗಿ ಶೇ. ೯೭.೬೬ (೫೮೬), ಅನಿಷಾಬಾನು ಪಠಾಣ ಶೇ. ೯೧.೬೬ (೫೫೦) ಮತ್ತು ಶರಣಯ್ಯ ಹಿರೇಮಠ ಶೇ. ೮೯.೧೬ (೫೩೫) ಅಂಕಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.
ಕಲಾ ವಿಭಾಗದಲ್ಲಿ ಶಿವಾನಿ ಗೊಲ್ಲರ ಶೇ. ೯೫.೩೩ (೫೭೭), ರಾಧಿಕಾ ಹೊನ್ನಳ್ಳಿ ಶೇ.೯೧.೧೬ (೫೪೭) ಮತ್ತು ಅಕ್ಷಯ ಲಮಾಣಿ ಶೇ. ೯೧ (೫೪೬) ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ವಾಣಿಜ್ಯ ವಿಭಾಗ
ಆರತಿ ಬಾಳಗಿ ಶೇ. ೯೭.೬೬
ಅನಿಷಾಬಾನು ಪಠಾಣ ಶೇ. ೯೧.೬೬
ಶರಣಯ್ಯ ಹಿರೇಮಠ ಶೇ. ೮೯.೧೬
ಕಲಾ ವಿಭಾಗ
ಶಿವಾನಿ ಗೊಲ್ಲರ ಶೇ. ೯೫.೩೩
ರಾಧಿಕಾ ಹೊನ್ನಳ್ಳಿ ಶೇ.೯೧.೧೬
ಅಕ್ಷಯ ಲಮಾಣಿ ಶೇ. ೯೧
ವಿದ್ಯಾರ್ಥಿಗಳ ಈ ಸಾಧನೆಗೆ ಜನತಾ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಡಿ ವೀರೇಂದ್ರ ಹೆಗ್ಗಡೆ, ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ, ಕಾಲೇಜಿನ ಪ್ರಾಚಾರ್ಯರಾದ ಡಾ. ಭರಮಪ್ಪ ಭಾವಿ ಮತ್ತು ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement