2-18 ವಯಸ್ಸಿನವರ ಮೇಲೆ ಕೋವಾಕ್ಸಿನ್ ಕ್ಲಿನಿಕಲ್‌ ಟ್ರಯಲ್‌ ವಿರುದ್ಧ ಪಿಐಎಲ್ :ಕೇಂದ್ರ, ಭಾರತ ಬಯೋಟೆಕ್‌ಗೆ ನೋಟಿಸ್‌

ನವ ದೆಹಲಿ: 2-18 ವಯೋಮಾನದವರ ಮೇಲೆ ಕೋವಾಕ್ಸಿನ್ ಕೋವಿಡ್ -19 ಲಸಿಕೆ ಹಂತ 2 ಮತ್ತು 3 ಕ್ಲಿನಿಕಲ್ ಟ್ರಯಲ್ ನಡೆಸುವ ವಿರುದ್ಧ ಸಲ್ಲಿಸಿದ ಮನವಿಯ ಮೇಲೆ ದೆಹಲಿ ಹೈಕೋರ್ಟ್ ಕೇಂದ್ರ ಮತ್ತು ಭಾರತ್ ಬಯೋಟೆಕ್‌ಗೆ ನೋಟಿಸ್ ನೀಡಿದೆ.
2-18 ವಯೋಮಾನದವರ ಮೇಲೆ ತನ್ನ ಕೋವಾಕ್ಸಿನ್ ಕೋವಿಡ್ -19 ಲಸಿಕೆಯ ಹಂತ II / III ಕ್ಲಿನಿಕಲ್ ಪ್ರಯೋಗವನ್ನು ನಡೆಸಲು ಭಾರತ್ ಬಯೋಟೆಕ್‌ಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ನೀಡಿದ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟಿನಲ್ಲಿ ಪಿಐಎಲ್ ಸಲ್ಲಿಸಲಾಗಿದೆ.
ಅರ್ಜಿಯ ಕುರಿತು ಜುಲೈ 15 ರೊಳಗೆ ತಮ್ಮ ನಿಲುವನ್ನು ಕೋರಿ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ನ್ಯಾಯಪೀಠ ಕೇಂದ್ರ ಸರ್ಕಾರ ಮತ್ತು ಭಾರತ್ ಬಯೋಟೆಕ್ ಗೆ ನೋಟಿಸ್ ನೀಡಿದೆ.
ಅರ್ಜಿದಾರರಾದ ಸಂಜೀವ್ ಕುಮಾರ್ ಕೋರಿದಂತೆ ಕ್ಲಿನಿಕಲ್ ಪ್ರಯೋಗಗಳಿಗಾಗಿ ಮೇ 12 ರಂದು ನೀಡಲಾದ ಅನುಮತಿಯನ್ನು ತಡೆಹಿಡಿಯುವ ಯಾವುದೇ ಮಧ್ಯಂತರ ಆದೇಶವನ್ನು ರವಾನಿಸಲು ನ್ಯಾಯಾಲಯ ನಿರಾಕರಿಸಿತು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement