ಹೊಸದಿಲ್ಲಿ: ಖ್ಯಾತ ಸಾಮಾಜಿಕ ಮಾಧ್ಯಮ ಕಂಪೆನಿ ಟ್ವಿಟರ್ ಭಾರತದಲ್ಲಿನ ಕೋವಿಡ್-19 ಬಿಕ್ಕಟ್ಟು ಪರಿಹಾರಕ್ಕಾಗಿ 15 ಮಿಲಿಯನ್ ಡಾಲರ್(ಸುಮಾರು 110 ಕೋಟಿ ರೂ.ಗಳು) ನೆರವು ನೀಡಿದೆ.
ಭಾರತವು ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯ ಉಲ್ಬಣವನ್ನು ಎದುರಿಸುತ್ತಿದೆ. ಈ ಮೊತ್ತವನ್ನು ಕೇರ್, ಸೇವಾ ಇಂಟರ್ ನ್ಯಾಶನಲ್ ಯುಎಸ್‌ಎ ಹಾಗೂ ಏಡ್ ಇಂಡಿಯಾ ಎಂಬ ಮೂರು ಸರಕಾರೇತರ ಸಂಸ್ಥೆಗಳಿಗೆ ನೀಡಲಾಗಿದೆ ಎಂದು ಟ್ವಿಟರ್ ಸಿಇಒ ಜಾಕ್ ಡಾರ್ಸೆ ಸೋಮವಾರ ಟ್ವೀಟ್ ಮಾಡಿದ್ದಾರೆ.
10 ಮಿಲಿಯನ್ ಡಾಲರ್ ಅನ್ನು ಕೇರ್‌ಗೆ ಏಡ್ ಇಂಡಿಯಾ ಹಾಗೂ ಸೇವಾ ಇಂಟರ್ ನ್ಯಾಶನಲ್ ಯುಎಸ್‌ಎಗೆ ತಲಾ 2.5 ಮಿಲಿಯನ್ ಡಾಲರ್ ನೀಡಲಾಗಿದೆ.
ಸೇವಾ ಇಂಟರ್ ನ್ಯಾಶನಲ್ ಸಂಸ್ಥೆಯು ಹಿಂದೂ ನಂಬಿಕೆ ಆಧಾರಿತ, ಲಾಭೋದ್ದೇಶವಿಲ್ಲದ ಸೇವಾ ಸಂಸ್ಥೆಯಾಗಿದೆ. ಈ ನೆರವನ್ನು ಜೀವ ಉಳಿಸುವ ಸಾಧನಗಳಾದ ಆಮ್ಲಜನಕ ಸಾಂದ್ರಕಗಳು, ವೆಂಟಿಲೇಟರ್‌ಗಳು ಹಾಗೂ ಸಿಪಿಎಪಿ ಯಂತ್ರಗಳು ಇತ್ಯಾದಿ ಖರೀದಿಗೆ ನೀಡಲಾಗಿದೆ” ಎಂದು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಕಂಪೆನಿಯು ಹೇಳಿಕೆ ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ