ಶ್ರದ್ಧಾ ಕೊಲೆ ಪ್ರಕರಣ: ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅಫ್ತಾಬ್ ಬ್ಯಾಗ್‌ನೊಂದಿಗೆ ಹೋಗುತ್ತಿರುವ ದೃಶ್ಯ ಸೆರೆ, ಶ್ರದ್ಧಾಳ ದೇಹದ ಭಾಗವಾಗಿರಬಹುದು ಎಂದು ಪೊಲೀಸರಿಗೆ ಶಂಕೆ

ನವದೆಹಲಿ: ಶ್ರದ್ಧಾ ವಾಲ್ಕರ್‌ ಅವರ ಕೊಲೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಕಳೆದ ತಿಂಗಳು ಮುಂಜಾನೆ ತನ್ನ ಮನೆಯ ಹೊರಗೆ ಬ್ಯಾಗ್ ಹಿಡಿದುಕೊಂಡು ಹೋಗುತ್ತಿದ್ದ ದೃಶ್ಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿರುವುದು ಹೊರಬಿದ್ದಿದೆ.
ಈ ಬ್ಯಾಗ್‌ನಲ್ಲಿ ಈತ ಶ್ರದ್ಧಾಳ ತುಂಡರಿಸಿದ ದೇಹದ ಭಾಗಗಳನ್ನು ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ದೃಶ್ಯಾವಳಿಗಳನ್ನು ಪರಿಶೀಲಿಸಲು ಯತ್ನಿಸುತ್ತಿದ್ದಾರೆ.
26 ವರ್ಷದ ಮಹಿಳೆ ಶ್ರದ್ಧಾ ವಾಕರ್ ಕೊಲೆ ಪ್ರಕರಣದಲ್ಲಿ ಆಕೆಯ ಲೈವ್-ಇನ್ ಪಾರ್ಟ್ನರ್‌ ಆಫ್ತಾಬ್ ಅಮೀನ್ ಪೂನಾವಾಲಾ ಕತ್ತು ಹಿಸುಕಿ ಅವಳನ್ನು ಕೊಲೆ ಮಾಡಿದ ನಂತರ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈಗ ಸಿಕ್ಕಿರುವ ೀ ವೀಡಿಯೊ ಅಕ್ಟೋಬರ್ 18ರ ವೀಡಿಯೊ ಎಂದು ಹೇಳಲಾಗಿದೆ. ಇದು ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಸಿಕ್ಕ ಮೊದಲ ದೃಶ್ಯ ಸಿಸಿಟಿವಿ ದೃಶ್ಯಾವಳಿಯಾಗಿದೆ. ಅಫ್ತಾಬ್‌ ಬ್ಯಾಗ್‌ನಲ್ಲಿ ದೇಹದ ತುಂಡುಗಳನ್ನು ಒಯ್ದಿರುವುದು ಖಚಿತಪಟ್ಟರೆ ದೆಹಲಿ ಪೊಲೀಸರಿಗೆ ತನಿಖೆಯಲ್ಲಿ ದೊಡ್ಡ ಪ್ರಗತಿ ಸಿಗಲಿದೆ.
ಕೊಲೆ ಮಾಡಿದ ನಂತರ ಹಲವಾರು ದಿನಗಳ ಅವಧಿಯಲ್ಲಿ ದೆಹಲಿಯಾದ್ಯಂತ ದೇಹದ ತುಂಡುಗಳನ್ನು ಎಸೆಯುವ ಮೊದಲು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿದ್ದ ದೇಹದ ಭಾಗಗಳನ್ನು ಎಸೆಯಲು ಆತ ಬ್ಯಾಗ್‌ನೊಂದಿಗೆ ಹೊರಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಡಾರ್ಕ್ ಮತ್ತು ಗ್ರೈನಿ ವಿಡಿಯೋ ಕ್ಲಿಪ್ ಒಬ್ಬ ವ್ಯಕ್ತಿ ತನ್ನ ತೋಳು ಹಾಗೂ ಹೆಗಲ ಮಧ್ಯೆ ರಟ್ಟಿನ ಪ್ಯಾಕೇಜ್‌ನೊಂದಿಗೆ ಬೀದಿಯಲ್ಲಿ ನಡೆಯುವುದನ್ನು ತೋರಿಸುತ್ತದೆ. ಆದರೆ ಆತನ ಮುಖ ಸ್ಪಷ್ಟವಾಗಿಲ್ಲ, ಆದರೆ ಪೊಲೀಸರು ವ್ಯಕ್ತಿಯನ್ನು ಅಫ್ತಾಬ್ ಎಂದು ಹೇಳುತ್ತಾರೆ.
ಏತನ್ಮಧ್ಯೆ ಇಂದು, ಶನಿವಾರ ಮುಂಜಾನೆ ದೆಹಲಿ ಪೊಲೀಸರು ಅಫ್ತಾಬ್ ಅಮೀನ್ ಪೂನಾವಾಲಾನ ಫ್ಲಾಟ್‌ನಿಂದ ಭಾರೀ ಮತ್ತು ಚೂಪಾದ ಕತ್ತರಿಸುವ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದನ್ನು ಆತ ಶ್ರದ್ಧಾ ವಾಕರ್ ದೇಹವನ್ನು ಕತ್ತರಿಸಲು ಬಳಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತೀವ್ರ ವಿಚಾರಣೆಯ ನಂತರ ಅಫ್ತಾಬ್ ಸತ್ಯವನ್ನು ಬಹಿರಂಗಪಡಿಸಲು ಪ್ರಾರಂಭಿಸಿದ್ದಾನೆ ಮತ್ತು ಆತನ ಛತ್ತರ್‌ಪುರದ ಫ್ಲಾಟ್‌ನಿಂದ ಪ್ರಮುಖ ಸಾಕ್ಷ್ಯವನ್ನು ಮರುಪಡೆಯಲು ಸ್ವತಃ ಪೊಲೀಸರಿಗೆ ಸಹಾಯ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ನಿನ್ನೆ ಅಫ್ತಾಬ್‌ನ ಗುರುಗ್ರಾದ ಕೆಲಸದ ಸ್ಥಳದಿಂದ ಪೊಲೀಸರು ಕಪ್ಪು ಪಾಲಿಥಿನ್ ಚೀಲವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ದಕ್ಷಿಣ ಬಂಗಾಳ ಕೊಲ್ಲಿ, ನಿಕೋಬಾರ್ ದ್ವೀಪಕ್ಕೆ ಮಾನ್ಸೂನ್‌ ಪ್ರವೇಶ ; ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ

ಶ್ರದ್ಧಾ ಮತ್ತು ಅಫ್ತಾಬ್ ಮೇನಲ್ಲಿ ಮುಂಬೈನಿಂದ ದೆಹಲಿಗೆ ತೆರಳಿದ್ದರು ಮತ್ತು ನಾಲ್ಕು ದಿನಗಳ ನಂತರ ಅವರಿಬ್ಬರಲ್ಲಿ ನಡೆದ ಜಗಳದ ಬಳಿಕ ಆತ ಅವಳನ್ನು ಕತ್ತು ಹಿಸುಕಿ ಕೊಂದು, ನಂತರ ಶವವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇರಿಸಿ 18 ದಿನಗಳ ಅವಧಿಯಲ್ಲಿ ಅವುಗಳನ್ನು ಕಾಡಿನಲ್ಲಿ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ. ಅಫ್ತಾಬ್‌ನನ್ನು ಐದು ದಿನಗಳೊಳಗೆ ನಾರ್ಕೋ ವಿಶ್ಲೇಷಣೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಏತನ್ಮಧ್ಯೆ, ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವನ್ನು ಪತ್ತೆಹಚ್ಚಲು ದೆಹಲಿ ಪೊಲೀಸರ ಮೆಹ್ರಾಲಿ ಅರಣ್ಯದಲ್ಲಿ ಸತತ ಆರನೇ ದಿನವೂ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಕೊಲೆಯಾದ ದಿನ ತಾನು ಡ್ರಗ್ಸ್‌ನ ಅಮಲಿನಲ್ಲಿದ್ದೆ ಎಂದು ಅಫ್ತಾಬ್ ಪೊಲೀಸರಿಗೆ ತಿಳಿಸಿದ್ದಾನೆ. ಪೂನಾವಾಲಾ ಗಾಂಜಾ ಸೇದುತ್ತಿದ್ದ ಮತ್ತು ವಾಕರ್ ನಿಯಮಿತವಾಗಿ ಗಾಂಜಾ ಸೇವನೆ ಮಾಡುವುದಕ್ಕಾಗಿ ಆತನನ್ನು ಕೆಣಕುತ್ತಿದ್ದಳು ಮತ್ತು ಬಹುಶಃ ಅವಳು ಕೊಲ್ಲಲ್ಪಟ್ಟ ದಿನವೂ ಅದೇ ರೀತಿ ಮಾಡಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ.
ಹತ್ಯೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ತಂಡಗಳನ್ನು ಮಹಾರಾಷ್ಟ್ರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಕ್ಕೆ ಕಳುಹಿಸಲಾಗಿದೆ. ಮುಂಬೈಯನ್ನು ತೊರೆದ ನಂತರ, ವಾಕರ್ ಮತ್ತು ಪೂನಾವಾಲಾಗೆ ಕೊಲೆ ಮಾಡಲು ಪ್ರಚೋದಿಸುವಂತಹ ಘಟನೆ ಅವರು ಈ ಪ್ರದೇಶಗಳಲ್ಲಿ ಮಾಡಿದ ಪ್ರವಾಸಗಳ ಸಂದರ್ಭದಲ್ಲಿ ಏನಾದರೂ ಸಂಭವಿಸಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಭೇಟಿ ನೀಡುತ್ತಿದ್ದಾರೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಯನ್ನು ಹೊರಹಾಕಿದ ಭಾರತ; 24 ಗಂಟೆಯೊಳಗೆ ದೇಶ ತೊರೆಯಲು ಸೂಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement