ಡಬ್ಲ್ಯುಪಿಎಲ್‌ (WPL) 2024 : ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡ ಆರ್‌ ಸಿಬಿ

ನವದೆಹಲಿ: ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ತಂಡ ಚೊಚ್ಚಲ ಮಹಿಳಾ ಐಪಿಎಲ್‌-2024 ಟ್ರೋಫಿ ಗೆದ್ದಿದೆ.
ದೆಹಲಿಯ ಅರುಣ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಸೋಲಿಸುವ ಮೂಲಕ ಕಪ್‌ ಅನ್ನು ಮುಡಿಗೇರಿಸಿಕೊಂಡಿತು.

ಮೊದಲು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 18.3 ಓವರ್‌ಗೆ ಎಲ್ಲ ವಿಕೆಟ್‌ ಕಳೆದುಕೊಂಡು 113 ರನ್‌ ಗಳಿಸಿ ಸಾಧಾರಣ ಮೊತ್ತದ ಗುರಿ ನೀಡಿತು. ಶೆಫಾಲಿ ವರ್ಮಾ 27 ಎಸೆತಗಳಲ್ಲಿ 44 ರನ್ ಹಾಗೂ ಮೆಗ್ ಲ್ಯಾನಿಂಗ್ 23 ರನ್‌ ಗಳಿಸಿದರು. ಉಳಿದವರ್ಯಾರೂ ಉತ್ತಮ ಆಟ ಪ್ರದರ್ಶಿಸಲಿಲ್ಲ. ರಾಯಲ್ ಚಾಲೆಂಜರ್ಸ್ ಬ್ಯಾಟಿಂಗ್ ಮತ್ತು ಬೌಲಿಂಗ್‌ ಎರಡಲ್ಲಿಯೂ ಉತ್ತಮ ಪ್ರದರ್ಶನ ನೀಡಿತು. ಬೌಲಿಂಗ್‌ ನಲ್ಲಿ ಶ್ರೇಯಾಂಕಾ ಪಾಟೀಲ್ 4/12, ಸೋಫಿ ಮೊಲಿನೆಕ್ಸ್ 3/20, ಶಫಾಲಿ ವರ್ಮಾ 2/44 ಉತ್ತಮ ಪ್ರದರ್ಶನ ನೀಡಿದರು.

ಸಾಧಾರಣ ಮೊತ್ತ ಬೆನ್ನಟ್ಟಿದ್ದ ಆರ್‌ಸಿಬಿ, ಕೇವಲ ಎರಡು ವಿಕೆಟ್ ಕಳೆದುಕೊಂಡು 19.3 ಓವರ್‌ಗಳಲ್ಲಿ 115 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಸ್ಮೃತಿ ಮಂದಾನಾ 31, ಸೋಫಿ ಡಿವೈನ್‌ 32, ಎಲಿಸ್‌ ಪೆರ್ರಿ ಔಟಾಗದೆ 35 ಹಾಗೂ ರೀಚಾ ಘೋಷ್‌ ಔಟಾಗದೆ 17 ರನ್‌ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಎಲಿಸ್‌ ಪೆರ್ರಿ ಅವರು ಆರೇಂಜ್‌ ಕ್ಯಾಪ್‌ ಗೌರವ ಪಡೆದರು.

ಪ್ರಮುಖ ಸುದ್ದಿ :-   ವೀಡಿಯೊ | ಜನವರಿಯಲ್ಲಿ ಉದ್ಘಾಟನೆಯಾದ ನಂತರ ಅಯೋಧ್ಯೆ ರಾಮಮಂದಿರದಲ್ಲಿ ಇದೇ ಮೊದಲ ಬಾರಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement