ಕೋಳಿ ಕಾಳಗದ ವೇಳೆ ಗುಂಡಿನ ಸದ್ದು, 20 ಮಂದಿ ಸಾವು..!

ಮೆಕ್ಸಿಕೋ ಸಿಟಿ: ಮೆಕ್ಸಿಕೊದ ಝಿನಾಪೆಕ್ವಾರೊ ಪಟ್ಟಣದಲ್ಲಿ ಗೌಪ್ಯವಾಗಿ ನಡೆಯುತಿದ್ದ ಕೋಳಿ ಕಾಳಗದ ವೇಳೆ ನಡೆದ ಘರ್ಷಣೆ ವಿಕೋಪಕ್ಕೆ ತಿರುಗಿದ ನಂತರ ಬಂದೂಕುಧಾರಿಗಳು ಗುಂಡು ಹಾರಿಸಿದ ಪರಿಣಾಮ 20 ಜನರು ಸಾವಿಗೀಡಾಗಿದ್ದಾರೆ.
ಮೆಕ್ಸಿಕೋದ ಪಶ್ಚಿಮ ರಾಜ್ಯದ ಪುಟ್ಟ ಪಟ್ಟಣದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಸತ್ತವರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ.

ವ್ಯವಸ್ಥಿತವಾಗಿ ಪೂರ್ವ ಯೋಜನೆಯಂತೆ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಮತ್ತು ಆಹಾರ ಕಂಪನಿಯ ಒಡೆತನದ ಟ್ರಕ್‍ನಲ್ಲಿ ಬಂದ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಜನರ ಮೇಲೆ ಗುಂಡು ಹಾರಿಸಿದ್ದಾರೆ. ಕೆಲವರು ಓಡಿ ಜೀವ ಉಳಿಸಿಕೊಂಡಿದ್ದಾರೆ. ಅವರಲ್ಲಿ ನಾಲ್ವರು ಗಂಭಿರವಾಗಿ ಗಾಯಗೊಂಡಿದ್ದಾರೆ. ಸ್ನ್ಯಾಕ್ ಫುಡ್ ಕಂಪನಿಯ ಟ್ರಕ್ ಬಂತು, ಮತ್ತು ಅದರಲ್ಲಿ ಮುಖಕ್ಕೆ ಬಟ್ಟೆ ಮುಚ್ಚಿಕೊಂಡಿದ್ದ ಹಲವಾರು ಶಸ್ತ್ರಸಜ್ಜಿತ ಜನರು ಹೊರಬಂದರು. ನಂತರ ಕೋಳಿ ಕಾಳಗದಲ್ಲಿದ್ದ ಜನರ ಮೇಲೆ ಗುಂಡು ಹಾರಿಸಿದರು. ಎಂದು ಪ್ರಾಸಿಕ್ಯೂಟರ್ಗಳ ಹೇಳಿಕೆ ತಿಳಿಸಿದೆ.

ದುಷ್ಕೃತ್ಯದ ನಂತರ ದುಷ್ಟರು ಬ ಹೈಜಾಕ್ ಮಾಡಿ ಪರಾರಿಯಾಗಿದ್ದಾರೆ, ಫೆಡರಲ್ ತನಿಖಾಧಿಕಾರಿಗಳ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ. ಜಲಿಸ್ಕೋ ಮತ್ತು ಕಾರ್ಟೆಲ್ ನಡುವಿನ ಗ್ರಾಮೀಣ ಕ್ರೀಡೆ ಕೋಳಿ ಕಾಳಗ ಕಾನೂನುಬಾಹಿರವಾಗಿ ಅನೇಕ ಪ್ರದೇಶಗಳಲ್ಲಿ ನಡೆಯುತ್ತವೆ. ಮೆಕ್ಸಿಕೋದ ಕೆಲವು ಭಾಗಗಳಲ್ಲಿ ಜನಪ್ರಿಯ ಕಾಲಕ್ಷೇಪವಾಗಿ ಉಳಿದಿದೆ ಎಂದು ಹೇಳಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement