
ಶಿರಸಿ : ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನರಸಿಂಹ ಅಡಿ ಆಯ್ಕೆಯಾಗಿದ್ದಾರೆ.
ಅವರು ಚಲಾವಣೆಯಾದ ಮತಗಳಲ್ಲಿ 59 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿ ಪ್ರದೀಪ ರಾಮಚಂದ್ರ ಶೆಟ್ಟಿ 50 ಮತಗಳನ್ನು ಪಡೆದಿದ್ದಾರೆ. ನರಸಿಂಹ ಅಡಿ 9 ಮತಗಳಿಂದ ಜಯಗಳಿಸಿದ್ದಾರೆ.
ಮೂವರು ಉಪಾಧ್ಯಕ್ಷ ಸ್ಥಾನಗಳಿಗೆ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದು, ಇವರಲ್ಲಿ ಮಾರುತಿ ನಾಯ್ಕ ಹೊನ್ನಾವರ, ಬಸವರಾಜ ವಿ.ಪಾಟೀಲ ಮುಂಡಗೋಡ ಹಾಗೂ ಸುಮಂಗಲಾ ಹೊನ್ನೆಕೊಪ್ಪ ಶಿರಸಿ ಅವರು ಆಯ್ಕೆಯಾಗಿದ್ದಾರೆ. ಮಾರುತಿ ನಾಯ್ಕ ಹೊನ್ನಾವರ 91 ಮತಗಳನ್ನು ಪಡೆದರೆ ಬಸವರಾಜ ವಿ.ಪಾಟೀಲ ಮುಂಡಗೋಡ 78 ಹಾಗೂ ಸುಮಂಗಲಾ ಹೊನ್ನೆಕೊಪ್ಪ ಶಿರಸಿ 63 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಇನ್ನೋರ್ವ ಅಭ್ಯರ್ಥಿ ನರಸಿಂಹ ಸಾತೊಡ್ಡಿ 46 ಮತಗಳನ್ನು ಪಡೆದರು.
ಭಾನುವಾರ ಬೆಳಿಗ್ಗೆ 9ಕ್ಕೆ ಆರಂಭವಾದ ಮತದಾನದಿಂದ ಮತ ಎಣಿಕೆ ಮುಕ್ತಾಯವಾಗಿ ಅಭ್ಯರ್ಥಿಗಳ ಆಯ್ಕೆ ಘೋಷಣೆ ಮಾಡುವ ವರೆಗೂ ಚುನಾವಣಾ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.
ಪ್ರಧಾನ ಕಾರ್ಯದರ್ಶಿ, ಮೂವರು ಕಾರ್ಯದರ್ಶಿಗಳು, ಖಜಾಂಚಿ, ಹಾಗೂ ಜಿಲ್ಲಾ ಕಾರ್ಯಕಾರಿ ಸದಸ್ಯ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿವೆ.



ನಿಮ್ಮ ಕಾಮೆಂಟ್ ಬರೆಯಿರಿ