ಬೆಡ್‌ ಬ್ಲಾಕಿಂಗ್‌ ದಂಧೆ ಬಯಲು.. ಬೆಂಗಳೂರಿನ ಆಸ್ಪತ್ರೆಗಳಲ್ಲಿ 3.21 ಸಾವಿರಕ್ಕೂ ಹೆಚ್ಚು ಬೆಡ್‌ಗಳು ಈಗ ಖಾಲಿ..!

ಬೆಂಗಳೂರು : ಬೆಂಗಳೂರಿನಲ್ಲಿ ಕೋವಿಡ್‌ ಆಸ್ಪತ್ರೆಗಳ ಬೆಡ್ ಬ್ಲಾಕಿಂಗ್ ಹಗರಣ ಬಯಲಾಗುತ್ತಿದ್ದಂತೆಯೇ ಬುಧವಾರ ಬೆಂಗಳೂರಿನಲ್ಲಿ 3 ಸಾವಿರಕ್ಕಿಂತ ಅಧಿಕ ಬೆಡ್​ಗಳು ಖಾಲಿ ಇರುವುದಾಗಿ ವೆಬ್​ಸೈಟ್​ ತೋರಿಸುತ್ತಿದೆ…!
ಮಂಗಳವಾರದ ನಗರದ ಆಸ್ಪತ್ರೆಗಳಲ್ಲಿ ಬೆಡ್​ ಲಭ್ಯತೆಯ ಬಗ್ಗೆ ವೆಬ್​ಸೈಟ್​ಗಳಲ್ಲಿ ಕೆಲವೇ ಸಂಖ್ಯೆ ತೋರಿಸುತ್ತಿತ್ತು ಎಂದು ವರದಿಯಾಗಿತ್ತು. ಯಾವಾಗ ಆಸ್ಪತ್ರೆಗಳಲ್ಲಿನ ಬೆಡ್‌ಗಳನ್ನು ಆನ್‌ಲೈನ್‌ನಲ್ಲಿ ಬ್ಲಾಕ್‌ ಮಾಡಿ ಹಣ ಕೇಳಿದಷ್ಟು ಹಣ ಕೊಟ್ಟವರಿಗೆ ಬೆಡ್‌ ನೀಡುವ ದಂಧೆ ಬಯಲಾಗಿ ಕೆಲವರ ಬಂಧನವಾಯಿತೋ ಈಗ ಒಂದೇ ಸಮನೆ ಆಸ್ಪತ್ರೆಗಳಲ್ಲಿ ಬೆಡ್​ಗಳ ಲಭ್ಯತೆ ಸಂಖ್ಯೆ ಏರಿಕೆಯಾಗಿದೆ. ಬರೋಬ್ಬರಿ 3,210 ಬೆಡ್​ಗಳು ಖಾಲಿ ಇದೆ ಎಂದು ಈ ಸಂಜೆ ವರದಿ ಮಾಡಿದೆ.

ಬೆಂಗಳೂರು  ನಗರದ ದಕ್ಷಿಣ ವಲಯದ ಕೋವಿಡ್​ ವಾರ್ ರೂಂನಿಂದ ವಿವಿಧ ವಲಯಗಳ ಕೋವಿಡ್​ ಸೋಂಕಿತರಿಗೆ ಅರಿವಿಲ್ಲದಂತೆಯೇ ಬೆಡ್ ಬುಕಿಂಗ್ ಮಾಡಿ ದಂಧೆ ನಡೆಸುತ್ತಿದ್ದ ಹಗರಣವನ್ನು ಸಂಸದ ತೇಜಸ್ವಿ ಸೂರ್ಯ , ಶಾಸಕರಾದ ಸತೀಶ ರೆಡ್ಡಿ, ರವಿ ಸುಬ್ರಹಣ್ಯ ಅವರು ಮಂಗಳವಾರ ಬಯಲು ಮಾಡಿದ್ದರು. ಬಳಿಕ ವಾರ್ ರೂಂ 17 ಮಂದಿ ಗುತ್ತಿಗೆ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.
ಈ ಸಂಜೆ ವರದಿ ಪ್ರಕಾರ, ಮಂಗಳವಾರದ ವರೆಗೂ 12,736 ಸರ್ಕಾರಿ ಕೋಟಾದ ಬೆಡ್​ಗಳ ಪೈಕಿ ಐಸಿಯು, ವೆಂಟಿಲೇಟರ್​​ ಇರುವ ಕೇವಲ ಬೆರಳೆಣಿಕೆಯಷ್ಟು ಮಾತ್ರ ಬೆಡ್​ಗಳು ಖಾಲಿ ತೋರಿಸುತ್ತಿದ್ದ ಲೈವ್ ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್​ಮೆಂಟ್ ವೆಬ್​ಸೈಟ್, ಬುಧವಾರ ಬರೋಬ್ಬರಿ 3,210 ಬೆಡ್​ಗಳು ಖಾಲಿ ಎಂದು ತೋರಿಸುತ್ತಿದೆ.
ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ 12, ಸರ್ಕಾರಿ ಆಸ್ಪತ್ರೆಯಲ್ಲಿ 67, ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ 1,197, ಖಾಸಗಿ ಆಸ್ಪತ್ರೆಯಲ್ಲಿ 402, ಸೇರಿ ಒಟ್ಟು 1,693 ಬೆಡ್​ಗಳು ಖಾಲಿ ಇವೆ.ಅಲ್ಲದೆ ಶೇ.10 ರಷ್ಟು ಆಕ್ಸಿಜನ್ ಲಭ್ಯವಿರುವ ಕೋವಿಡ್ ಕೇರ್ ಸೆಂಟರ್​ಗಳಲ್ಲೂ 1,517 ಬೆಡ್​ಗಳು ಖಾಲಿ ಇವೆ. 127 ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದ 29 ಐಸಿಯು, 13 ವೆಂಟಿಲೇಟರ್​ ಬೆಡ್​ಗಳು ಖಾಲಿ ಇವೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

4.4 / 5. 8

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement