ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಮತ್ತೊಂದು ಹೆಜ್ಜೆ: ಮೊದಲ ಸ್ವದೇಶಿ ನಿರ್ಮಿತ ಯುದ್ಧ ನೌಕೆಗೆ ಐಎನ್‌ಎಸ್ ವಿಕ್ರಾಂತಕ್ಕೆ ಪ್ರಧಾನಿ ಮೋದಿ ಚಾಲನೆ

ಕೊಚ್ಚಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಭಾರತದ ಮೊದಲ ಸ್ವದೇಶಿ ವಿನ್ಯಾಸ ಮತ್ತು ನಿರ್ಮಿಸಿದ ವಿಮಾನವಾಹಕ ನೌಕೆ INS ವಿಕ್ರಾಂತಕ್ಕೆ ಚಾಲನೆ ನೀಡಿದರು. ಇದು ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಮತ್ತೊಂದು ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.
ಕೇರಳದ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಐಎನ್‌ಎಸ್ ವಿಕ್ರಾಂತಕ್ಕೆ ಚಾಲನೆ ನೀಡಿದರು. ಐಎನ್‌ಎಸ್ ವಿಕ್ರಾಂತ್ ಅನ್ನು ರಾಷ್ಟ್ರಗಳಿಗೆ ಅರ್ಪಿಸಿದ ಪ್ರಧಾನಿ ಮೋದಿ, “ಇಲ್ಲಿಯವರೆಗೆ, ಇಂತಹ ವಿಮಾನವಾಹಕ ನೌಕೆಗಳನ್ನು ಅಭಿವೃದ್ಧಿ ಹೊಂದಿದ ದೇಶಗಳು ಮಾತ್ರ ತಯಾರಿಸುತ್ತಿದ್ದವು. ಭಾರತವು ಲೀಗ್‌ನ ಭಾಗವಾಗುವುದರ ಮೂಲಕ ಅಭಿವೃದ್ಧಿ ಹೊಂದಿದ ದೇಶವಾಗುವತ್ತ ಹೆಜ್ಜೆ ಹಾಕಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಭಾರತೀಯ ನೌಕಾಪಡೆಯ ಹೊಸ ಧ್ವಜವನ್ನು ಅನಾವರಣಗೊಳಿಸಿದರು. ಹೊಸ ಧ್ವಜವು ಸೇಂಟ್ ಜಾರ್ಜ್ ಕ್ರಾಸ್ ಅನ್ನು ಒಳಗೊಂಡಿಲ್ಲ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ರಾಜಮುದ್ರೆಯನ್ನು ಒಳಗೊಂಡಿದೆ.
ಯುದ್ಧನೌಕೆ ತಯಾರಿಕೆಯಲ್ಲಿ ಉಕ್ಕು ಸೇರಿದಂತೆ ಬೃಹತ್ ಹಡಗಿನ ಹಿಂದಿನ ಸ್ವದೇಶೀಕರಣದ ಪ್ರಯತ್ನಗಳನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು.

ಐಎನ್‌ಎಸ್ ವಿಕ್ರಾಂತ್ ಕೇವಲ ಯುದ್ಧ ಯಂತ್ರವಲ್ಲ ಆದರೆ ಭಾರತದ ಕೌಶಲ್ಯ ಮತ್ತು ಪ್ರತಿಭೆಯ ಪುರಾವೆಯಾಗಿದೆ. ಇದು ವಿಶೇಷವಾಗಿದೆ, ವಿಭಿನ್ನವಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
20,000 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಐಎನ್‌ಎಸ್ ವಿಕ್ರಾಂತ್ 262 ಮೀಟರ್ ಉದ್ದ ಮತ್ತು 62.4 ಮೀಟರ್ ಅಗಲದ ಫ್ಲೈಯಿಂಗ್ ಡೆಕ್ ಅನ್ನು ಹೊಂದಿದ್ದು, ಎರಡು ಫುಟ್‌ಬಾಲ್ ಮೈದಾನಗಳನ್ನು ಇದರಲ್ಲಿ ನಿರ್ಮಿಸಬಹುದು. ಇದನ್ನು ಭಾರತದ ಪ್ರಮುಖ ಕೈಗಾರಿಕಾ ಸಂಸ್ಥೆಗಳು ಮತ್ತು 100 ಕ್ಕೂ ಹೆಚ್ಚು MSME ಗಳು ಒದಗಿಸಿದ ಸ್ಥಳೀಯ ಉಪಕರಣಗಳು ಮತ್ತು ಯಂತ್ರೋಪಕರಣಗಳನ್ನು ಬಳಸಿ ನಿರ್ಮಿಸಲಾಗಿದೆ.
‘ವಿಕ್ರಾಂತ್’ ನಿರ್ಮಾಣದೊಂದಿಗೆ, ಭಾರತವು ಅಮೆರಿಕ, ಬ್ರಿಟನ್‌, ರಷ್ಯಾ, ಚೀನಾ ಮತ್ತು ಫ್ರಾನ್ಸ್‌ನಂತಹ ಆಯ್ದ ರಾಷ್ಟ್ರಗಳ ಗುಂಪನ್ನು ಈಗ ಭಾರತ ಸೇರಿಕೊಂಡಿದೆ, ಸ್ಥಳೀಯವಾಗಿ ವಿಮಾನವಾಹಕ ನೌಕೆಯನ್ನು ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಸ್ಥಾಪಿತ ಸಾಮರ್ಥ್ಯವನ್ನು ಈಗ ಭಾರತ ಹೊಂದಿದಂತಾಗಿದೆ. ವಿಕ್ರಾಂತ್ ಕಾರ್ಯಾರಂಭದೊಂದಿಗೆ, ಭಾರತವು ಎರಡು ಕಾರ್ಯಾಚರಣೆಯ ವಿಮಾನವಾಹಕ ನೌಕೆಗಳನ್ನು ಹೊಂದಿದಂತಾಗಿದೆ. ಇದು ರಾಷ್ಟ್ರದ ಕಡಲ ಭದ್ರತೆಯನ್ನು ಹೆಚ್ಚಿಸುತ್ತದೆ.

ಪ್ರಮುಖ ಸುದ್ದಿ :-   ಒಂದೇ ಕಡೆ ಒಟ್ಟುಗೂಡಿದ 150 ಜೋಡಿ ಅವಳಿ-ತ್ರಿವಳಿಗಳು...!

ಐಎನ್‌ಎಸ್‌ ವಿಕ್ರಾಂತ ವಿಶೇಷತೆಗಳೇನು…?

ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಸುಮಾರು ಒಂದು ವರ್ಷದ ಸಮುದ್ರ ಪ್ರಯೋಗಗಳನ್ನು ಪೂರ್ಣಗೊಳಿಸಿದ ನಂತರ ಇಂದು ಔಪಚಾರಿಕವಾಗಿ ಕಾರ್ಯಾರಂಭ ಮಾಡಿತು. ₹ 20,000 ಕೋಟಿ ರೂ.ಗಳ ವೆಚ್ಚದಲ್ಲಿ 45,000 ಟನ್‌ ಯುದ್ಧನೌಕೆಯನ್ನು ನಿರ್ಮಾಣ ಮಾಡಲಾಗಿದೆ. ಮೇಡ್‌ ಇನ್‌ ಇಂಡಿಯಾ ವಿಮಾನವಾಹಕ ಯುದ್ಧ ನೌಕೆ ಐಎನ್‌ಎಸ್‌ ವಿಕ್ರಾಂತದ ವಿಶೇಷತೆಗಳೇನು ಎಂಬುದರ ಮಾಹಿತಿ ಇಲ್ಲಿದೆ.

ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ವಿಮಾನವಾಹಕ ನೌಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೌಕಾಪಡೆಗೆ ನಿಯೋಜನೆ ಮಾಡಿದ್ದರ ಜೊತೆಗೆ ಪ್ರಧಾನಿ ಮೋದಿ ಅವರು ಹೊಸ ನೌಕಾ ಧ್ವಜವನ್ನು ಸಹ ಅನಾವರಣಗೊಳಿಸಿದರು. ಈ ಹೊಸ ಧ್ವಜದಲ್ಲಿ ಸೇಂಟ್ ಜಾರ್ಜ್ ಕ್ರಾಸ್ ಇಲ್ಲ, ಬದಲಾಗಿ ಈಗ ಇದು ಛತ್ರಪತಿ ಶಿವಾಜಿ ಮಹಾರಾಜರ ರಾಜಮುದ್ರೆಯನ್ನು ಒಳಗೊಂಡಿದೆ.

ಐಎನ್‌ಎಸ್‌ ವಿಕ್ರಾಂತ ಯುದ್ಧನೌಕೆಯು 262 ಮೀಟರ್‌ ಉದ್ದದೆ ಹಾಗೂ 62 ಮೀಟರ್‌ ಅಗಲವಿದೆ. ಭಾರತದಲ್ಲಿ ಈವರೆಗೂ ನಿರ್ಮಾಣವಾಗಲಿರುವ ಅತೀದೊಡ್ಡ ಯುದ್ಧನೌಕೆ ಇದಾಗಿದೆ. ಇದರ ಮೇಲೆ 30 ಯುದ್ಧವಿಮಾನಗಳನ್ನು ನಿಲ್ಲಿಸಲು ಅವಕಾಶವಿದೆ. ಅಲ್ಲದೆ ಹೆಲಿಕಾಪ್ಟರ್‌ಗಳನ್ನು ಇರಿಸಬಹುದಾಗಿದೆ. ಸುಮಾರು 1600 ಸಿಬ್ಬಂದಿ ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.

13 ವರ್ಷಗಳ ಕಾಲ ಐಎನ್‌ಎಸ್ ವಿಕ್ರಾಂತ್‌ ನಿರ್ಮಾಣ ಮಾಡಲು ತೆಗೆದುಕೊಂಡಿರುವ ಸಮಯ. ವಿವಿಧ ಹಂತಗಳ ಸಮುದ್ರ ಟ್ರಯಲ್ಸ್‌ನಲ್ಲೂ ಐಎನ್‌ಎಸ್‌ ವಿಕ್ರಾಂತ್‌ ಭಾಗಿಯಾಗಿತ್ತು, ಆಗಸ್ಟ್‌ 21 ರಂದು ಒಂದು ವರ್ಷಗಳ ಟ್ರಯಲ್ಸ್‌ ಮುಕ್ತಾಯಗೊಂಡಿತ್ತು. ನೌಕಾಪಡೆಗೆ ವಿಕ್ರಾಂತ್‌ ನಿಯೋಜನೆ ಆದ ಬಳಿಕ ವಾಯುಪಡೆ ವಿಮಾನದಲ್ಲಿ ತನ್ನ ಪ್ರಯೋಗಗಳನ್ನು ನಡೆಸಲಿದೆ.

ಪ್ರಮುಖ ಸುದ್ದಿ :-   ಬಾಬಾ ರಾಮದೇವ ಕಂಪನಿ ತಯಾರಿಸಿದ 14 ಔಷಧಗಳ ತಯಾರಿಕಾ ಪರವಾನಗಿ ಅಮಾನತು ಮಾಡಿದ ಉತ್ತರಾಖಂಡ ಸರ್ಕಾರ

ಪ್ರಸ್ತುತ, ಭಾರತವು ಕೇವಲ ಒಂದು ವಿಮಾನವಾಹಕ ನೌಕೆ ಮಾತ್ರ ಹೊಂದಿತ್ತು. ಇದನ್ನು ರಷ್ಯಾದ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ರಕ್ಷಣಾ ಪಡೆಗಳು ಒಟ್ಟಾರೆಯಾಗಿ ಮೂರು ವಿಮಾನ ವಾಹಕಗಳಿಗೆ ಬೇಡಿಕೆ ಇಟ್ಟಿದೆ. ಈಗ ಎರಡನೇ ಯುದ್ಧ ನೌಕೆ ಹೊಂದಿದಂತಾಗಿದೆ. ಹಿಂದೂ ಮಹಾಸಾಗರ ಹಾಗೂ ಬಂಗಾಳ ಕೊಲ್ಲಿಯಲ್ಲಿ ತಲಾ ಒಂದು ವಿಮಾನವಾಹಕ ಯುದ್ಧನೌಕೆಯ ನಿಯೋಜನೆಯೊಂದಿಗೆ, ಇನ್ನೊಂದನ್ನು ವಿಶೇಷ ಬಳಕೆಗಾಗಿ ಬಳಸುವ ಯೋಜನೆ ರಕ್ಷಣಾ ಪಡೆಗಳದ್ದು.

ಐಎನ್‌ಎಸ್‌ ವಿಕ್ರಾಂತ್‌ ಎಂದು ತನ್ನ ಹಿಂದಿನ ವಿಮಾನವಾಹಕ ಯುದ್ಧನೌಕೆ ಹೆಸರನ್ನೇ ನಾಮಕಾರಣ ಮಾಡಲಾಗಿದೆ. 1971ರಲ್ಲಿ ಪಾಕಿಸ್ತಾನದ ಜೊತೆಗಿನ ಯುದ್ಧ ಹಾಗೂ ಬಾಂಗ್ಲಾದೇಶದ ವಿಮೋಚನೆಯ ಗೆಲುವಿನಲ್ಲಿ ಹಿಂದಿನ ಐಎನ್‌ಎಸ್ ವಿಕ್ರಾಂತ್‌ ಪ್ರಮುಖ ಪಾತ್ರ ವಹಿಸಿತ್ತು. ಈ ಕಾರಣಕ್ಕಾಗಿಯೂ ಈ ಹೊಸ ಯುದ್ಧ ನೌಕೆಗೂ ಅದೇ ಹೆಸರನ್ನು ಇಡಲಾಗಿದೆ.

ಸ್ವದೇಶಿ ನಿರ್ಮಿತ ಐಎನ್‌ಎಸ್‌ ವಿಕ್ರಾಂತ್‌ ಯುದ್ಧನೌಕೆಯಾಗಿ ನೌಕಾದಳಕ್ಕೆ ಸೇರ್ಪಡೆಯಾಗುವುದರೊಂದಿಗೆ ಭಾರತವು ಅಮೆರಿಕ, ಇಂಗ್ಲೆಂಡ್‌, ರಷ್ಯಾ, ಚೀನಾ ಮತ್ತು ಫ್ರಾನ್ಸ್‌ನಂತಹ ಆಯ್ದ ರಾಷ್ಟ್ರಗಳ ಗುಂಪನ್ನು ಸೇರಿದಂತಾಗಿದೆ. ಈ ದೇಶಗಳು ತಮ್ಮದೇ ಆದ ವಿಮಾನವಾಹಕ ನೌಕೆಗಳನ್ನು ವಿನ್ಯಾಸ ಮಾಡಿದ್ದಲ್ಲದೆ, ಅವುಗಳ ನಿರ್ಮಾಣವನ್ನು ಅವರವರ ದೇಶದಲ್ಲಿಯೇ ಮಾಡುತ್ತವೆ.

ಹೊಸ ಯುದ್ಧನೌಕೆ ಸೇರ್ಪಡೆಯೊಂದಿಗೆ ಭಾರತವು ಈಗ ತನ್ನ ಪೂರ್ವ ಮತ್ತು ಪಶ್ಚಿಮ ಸಮುದ್ರ ತೀರಗಳಲ್ಲಿ ತಲಾ ಒಂದು ವಿಮಾನವಾಹಕ ನೌಕೆಯನ್ನು ನಿಯೋಜನೆ ಮಾಡುವುದರೊಂದಿಗೆ ಕಡಲ ಕಣ್ಗಾವಲನ್ನು ಇನ್ನಷ್ಟು ವಿಸ್ತರಿಸಬಹುದು.

ಭಾರತ ನೌಕಾಪಡೆಯ ಅಸ್ತಿತ್ವದಲ್ಲಿರುವ ಫ್ಲೀಟ್ ಒಂದು ವಿಮಾನವಾಹಕ ನೌಕೆ, 10 ವಿಧ್ವಂಸಕ, 12 ಫ್ರಿಗೇಟ್‌ಗಳು ಮತ್ತು 20 ಕಾರ್ವೆಟ್‌ಗಳನ್ನು ಒಳಗೊಂಡಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement