ಬೆಳಗಾವಿ ಪಾಲಿಕೆ ಚುನಾವಣೆ ಫಲಿತಾಂಶ: ಬಿಜೆಪಿ ಅಧಿಕಾರಕ್ಕೆ, ಎಂಇಎಸ್‌ಗೆ ಹೀನಾಯ ಸೋಲು

ಬೆಳಗಾವಿ:ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿ ಮಹಾನಗರ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, 58 ವಾರ್ಡ್‌ಗಳ ಫಲಿತಾಂಶದಲ್ಲಿ ಬಿಜೆಪಿ ಈಗಾಗಲೇ 36 ವಾರ್ಡ್ ಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.
ಹಾಗೂ ಕಳೆದ ಮೂರು ದಶಕಗಳಿಂದ ಅಧಿಪತ್ಯ ಸಾಧಿಸಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ ಹೀನಾಯವಾಗಿ ಸೋಲುಂಡಿದೆ. ಬಿಜೆಪಿ ಇದೇ ಮೊದಲ ಬಾರಿಗೆ ಬಿಜೆಪಿ ಪಕ್ಷದ ಚಿಹ್ನೆಯಡಿ ಸ್ಪರ್ಧಸಿತ್ತು ಹಾಗೂ ಅದರಲ್ಲಿ ಯಶಸ್ಸು ಕಂಡಿದೆ.
ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್‌ಗಳಿಗೆ ಬಿಜೆಪಿಯಿಂದ 55 ಅಭ್ಯರ್ಥಿಗಳು ಕಾಂಗ್ರೆಸ್‌ನಿಂದ 45, ಜೆಡಿಎಸ್‌ನಿಂದ 11 ಹಾಗೂ ಎಂಇಎಸ್‌ನಿಂದ 21 ಮಂದಿ ಸ್ಪರ್ಧಿಸಿದ್ದಾರೆ . ಆಪ್‌, ಪಕ್ಷೇತರರು ಸೇರಿದಂತೆ ಒಟ್ಟು 217 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್ ಗಳ ಪೈಕಿ ಪ್ರಕಟವಾದ ಫಲಿತಾಂಶಗಳಲ್ಲಿ ಬಿಜೆಪಿ ಸದ್ಯ 35 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ 9, ಪಕ್ಷೇತರರು ಹಾಗೂ ಇತರರು 13 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಮೇಯರ್ ಸ್ಥಾನದ ಮ್ಯಾಜಿಕ್ ನಂಬರ್ ದಾಟಿದೆ. ಪೂರ್ಣ ಫಲಿತಾಂಶದ ನಂತರ ಸಂಪೂರ್ನ ಮಾಹಿತಿ ಬರಬೇಕಿದೆ.

ಪ್ರಮುಖ ಸುದ್ದಿ :-   41.8 ಡಿಗ್ರಿ ತಲುಪಿದ ಬೆಂಗಳೂರು ತಾಪಮಾನ ; ರಾಜ್ಯದ ಈ ಜಿಲ್ಲೆಗಳಲ್ಲಿ ನಾಲ್ಕೈದು ದಿನ ಬಿಸಿಗಾಳಿ ಮುನ್ನೆಚ್ಚರಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement