ಸಿಎಂ ಉದ್ಧವ್ ಠಾಕ್ರೆ ಸಭೆಗೆ ಶಿವಸೇನೆ 55 ಶಾಸಕರಲ್ಲಿ 13 ಶಾಸಕರು ಮಾತ್ರ ಹಾಜರು : 24 ತಾಸಿನಲ್ಲಿ ಹಿಂತಿರುಗಿ, ಮೈತ್ರಿ ತೊರೆಯುವುದನ್ನು ಪರಿಗಣಿಸ್ತೇವೆ ಎಂದ ಶಿವಸೇನೆ

ಮುಂಬೈ: ಉದ್ಧವ್ ಠಾಕ್ರೆ ಬಾಳ್ ಠಾಕ್ರೆ ಅವರು ಸ್ಥಾಪಿಸಿದ ಶಿವಸೇನೆ ಪಕ್ಷದಲ್ಲಿ ಈಗ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರೇ ಅಲ್ಪಮತಕ್ಕೆ ಕುಸಿದಿದ್ದಾರೆ…! ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಇಂದು ಗುರುವಾರ ಮಧ್ಯಾಹ್ನ ಕರೆದಿದ್ದ ಸಭೆಯಲ್ಲಿ ಕೇವಲ 13 ಶಾಸಕರು ಮಾತ್ರ ಹಾಜರಿದ್ದರು ಎಂದು ಮೂಲಗಳು ತಿಳಿಸಿವೆ ಎಂದು ವರದಿಗಳು ತಿಳಿಸಿವೆ.
ಈ ಮಧ್ಯೆ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿರುವ ಏಕನಾಥ್ ಶಿಂಧೆ ಮತ್ತು ಇತರ ಬಂಡಾಯ ಶಾಸಕರಿಗೆ 24 ಗಂಟೆಗಳಲ್ಲಿ ಹಿಂತಿರುಗುವಂತೆ ಶಿವಸೇನೆ ಕೇಳಿಕೊಂಡಿದ್ದು, ಆಡಳಿತಾರೂಢ ಮೈತ್ರಿಕೂಟದಿಂದ ಹೊರಬರುವ ತಮ್ಮ ಬೇಡಿಕೆಯನ್ನು ಪರಿಗಣಿಸುವುದಾಗಿ ಭರವಸೆ ನೀಡಿದೆ.
24 ಗಂಟೆಗಳಲ್ಲಿ ಬಂಡಾಯ ಶಾಸಕರು ಮುಂಬೈಗೆ ಹಿಂತಿರುಗಿದರೆ ಎಂವಿಎ ಮೈತ್ರಿ ಭಾಗವಾಗುವುದು ಬೇಡ ಎಂಬ ಬಂಡಾಯ ಶಾಸಕರ ಬೇಡಿಕೆಯನ್ನು ಶಿವಸೇನೆ ಪರಿಗಣಿಸುತ್ತದೆ ಎಂದು ಸಂಜಯ್ ರಾವುತ್ ಹೇಳಿದ್ದಾರೆ. ನಿಮ್ಮ ಎಲ್ಲಾ ಬೇಡಿಕೆಗಳನ್ನು ಪರಿಗಣಿಸಲಾಗುವುದು ಎಂದು ಅವರು ಹೇಳಿದರು.

ಇದೇವೇಳೆ ಪಕ್ಷದ ಬಂಡಾಯ ನಾಯಕ ಏಕನಾಥ ಶಿಂಧೆ ಅವರ ಜೊತೆ ಮಹಾರಾಷ್ಟ್ರದ 42 ಬಂಡಾಯ ಶಾಸಕರಿದ್ದಾರೆ. – 35 ಶಿವಸೇನೆ ಮತ್ತು 7 ಸ್ವತಂತ್ರ ಶಾಸಕರು ಎಂದು ಹೇಳಲಾಗಿದ್ದು ಗುರುವಾರ ಮಧ್ಯಾಹ್ನ ಗುವಾಹತಿಯ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿಗಳು ಶಿವಸೇನೆಯವರಿಗೇ ತಮ್ಮ ಬಾಗಿಲುಗಳನ್ನು ಮುಚ್ಚಿದ್ದಾರೆ ಮತ್ತು ಗಂಟೆಗಳ ಕಾಲ ತಮ್ಮೆಲ್ಲರನ್ನು ಕಾಯುಸುತ್ತಿದ್ದರು ಎಂದು ಆರೋಪಿಸಿ ಏಕನಾಥ್ ಶಿಂಧೆ ತಮ್ಮ ಬಹಿರಂಗ ಪತ್ರವನ್ನು ಟ್ವೀಟ್ ಮಾಡಿದ್ದಾರೆ. ”
ನಮಗೆ 2.5 ವರ್ಷಗಳ ಕಾಲ ಮುಖ್ಯಮಂತ್ರಿಗಳ ಮನೆಗೆ ಪ್ರವೇಶವನ್ನು ನಿರಾಕರಿಸಲಾಗಿದೆ” ಎಂದು ಗುವಾಹತಿಯಲ್ಲಿರುವ ಶಾಸಕರಲ್ಲಿ ಒಬ್ಬರಾದ ಸಂಜಯ್ ಶಿರ್ಸಾಟ್‌ ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಲಾಲು ಕುಟುಂಬದಲ್ಲಿ ಬಿರುಗಾಳಿ ; ಹಿರಿಯ ಮಗನನ್ನು ಆರ್‌ ಜೆಡಿ ಪಕ್ಷ, ಕುಟುಂಬದಿಂದ ಹೊರಹಾಕಿದ ಲಾಲು ಪ್ರಸಾದ ಯಾದವ್‌...!

ಬಂಡಾಯ ಶಾಸಕ ಏಕನಾಥ್ ಶಿಂಧೆ ಬದಲಿಗೆ ಅಜಯ್ ಚೌಧರಿ ಅವರನ್ನು ಸದನದಲ್ಲಿ ಶಿವಸೇನೆಯ ಗುಂಪಿನ ನಾಯಕರನ್ನಾಗಿ ನೇಮಿಸಲು ಅನುಮೋದನೆ ನೀಡಿರುವುದಾಗಿ ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ ನರಹರಿ ಜಿರ್ವಾಲ್ ಗುರುವಾರ ಹೇಳಿದ್ದಾರೆ.
ಈ ಮಧ್ಯೆ ಎನ್‌ಡಿಟಿವಿ ಜೊತೆ ಮಾತನಾಡಿದ ಬೀನ್ನರ ಗುಂಪಿನ ಶಾಸಕರಾದ ಕೇಸಕರ್ ಅವರು, ನಿನ್ನೆಯ ಹೊತ್ತಿಗೆ (ಏಕನಾಥ್) ಶಿಂಧೆ ಜೊತೆಗೆ ಶಿವಸೇನೆಯ 37 ಶಾಸಕರಿದ್ದರು. ಇಂದು, ಗುರುವಾರ ನಾನು ಶಿವಸೇನೆಯ ಇತರ ಮೂವರು ಮತ್ತು ಒಬ್ಬ ಸ್ವತಂತ್ರ ಶಾಸಕರೊಂದಿಗೆ ಇಲ್ಲಿಗೆ ತಲುಪಿದ್ದಾರೆ. ಮುಂದಿನ ಕೆಲವು ಗಂಟೆಗಳಲ್ಲಿ ಇಬ್ಬರಿಂದ ಮೂವರು ತಲುಪುವ ನಿರೀಕ್ಷೆಯಿದೆ” ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶಿವಸೇನಾ ಶಾಸಕರೊಂದಿಗಿನ ಸಭೆಯನ್ನು 11:30 ಕ್ಕೆ ರದ್ದುಗೊಳಿಸಿದ್ದಾರೆ.
.ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಉಪ ಮುಖ್ಯಮಂತ್ರಿ ಅಜಿತ್ ಪವಾರ್, ರಾಜ್ಯ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್, ಸಚಿವರಾದ ಜಯಂತ್ ಪಾಟೀಲ್ ಮತ್ತು ಜಿತೇಂದ್ರ ಅವ್ಹಾದ್ ಮತ್ತು ಪಕ್ಷದ ನಾಯಕ ಸುನೀಲ್ ತಾಟ್ಕರೆ ಅವರು ರಾಜಕೀಯ ಬಿಕ್ಕಟ್ಟಿನ ಕುರಿತು ಸಭೆ ನಡೆಸುತ್ತಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ನಿವಾಸದಲ್ಲಿ ಸಭೆ ನಡೆಯುತ್ತಿದೆ.
ಬುಧವಾರ ರಾತ್ರಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಕುಟುಂಬದೊಂದಿಗೆ ಬಾಂದ್ರಾದಲ್ಲಿರುವ ತಮ್ಮ ಖಾಸಗಿ ಮನೆ ‘ಮಾತೋಶ್ರೀ’ಗೆ ಮರಳಲು ಮಲಬಾರ್ ಹಿಲ್‌ನಲ್ಲಿರುವ ತಮ್ಮ ಅಧಿಕೃತ ನಿವಾಸ ‘ವರ್ಷ’ವನ್ನು ಖಾಲಿ ಮಾಡಿದರು. ಸಚಿವ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಶಾಸಕರ ಬಂಡಾಯ ಗುಂಪಿಗೆ ಅವರು (ಠಾಕ್ರೆ) ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷ ಸ್ಥಾನವನ್ನು ತ್ಯಜಿಸಲು ಸಿದ್ಧರಿರುವುದಾಗಿ ಭಾವನಾತ್ಮಕ ಮನವಿ ಮಾಡಿದ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ.

ಪ್ರಮುಖ ಸುದ್ದಿ :-   ಮದುಮಗನನ್ನು ಮದುವೆ ಮಂಟಪದಿಂದಲೇ ಅಪಹರಿಸಿದ ನೃತ್ಯಗಾರರ ತಂಡ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement