ಕೊವಿಡ್‌ ಡೋಸ್‌ ಪಡೆಯಲು ಸಮಯ ಮಿತಿ ತೆಗೆದ ಕೇಂದ್ರ

ನವದೆಹಲಿ: ಕೋವಿಡ್-19 ಲಸಿಕೆ ಪಡೆಯಲು ಈವರೆಗೆ ಇದ್ದ ಸಮಯ ಮಿತಿಯನ್ನು ಕೇಂದ್ರ ಸರ್ಕಾರ ತೆಗೆದುಹಾಕಿದ್ದು, ಜನರಿಗೆ ಅನುಕೂಲವಾಗಲು ದಿನದ ಯಾವ ಸಮಯದಲ್ಲಾದರೂ ಲಿಸಿಕೆ ಪಡೆಯಬಹುದು ಎಂದು ಹೇಳಿದೆ.
ಈ ಕುರಿತು ಬುಧವಾರ ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್, ಸಾರ್ವಜನಿಕರು ಇನ್ನು ಮುಂದೆ ತಮಗೆ ಅನುಕೂಲವಾಗುವ ಸಮಯದಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದು. ಪ್ರಧಾನಿ ಮೋದಿಯವರು ಜನರ ಆರೋಗ್ಯ ಮತ್ತು ಸಮಯಕ್ಕೆ ಬೆಲೆ ನೀಡುತ್ತಾರೆ ಎಂದಿದ್ದಾರೆ.
ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಿಸಲು ಇದುವರೆಗೆ ಇದ್ದ ಸಮಯ ಮಿತಿ ತೆಗೆದುಹಾಕಲಾಗಿದೆ. ದಿನದ 24 ಗಂಟೆಯಲ್ಲಿ ಯಾವಾಗ ಬೇಕಾದರೂ ಜನರು ಬಂದು ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಹರ್ಷವರ್ಧನ್ ಟ್ವೀಟ್ ಮಾಡಿದ್ದಾರೆ.

2 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಅಂತ್ಯಸಂಸ್ಕಾರ ನಡೆದು 15 ದಿನಗಳ ಬಳಿಕ ‘ನಿಮ್ಮ ಮಗ ಜೀವಂತವಾಗಿದ್ದಾನೆ’ ಎಂದು ಪೊಲೀಸರಿಂದ ಬಂತು ಫೋನ್‌ ಕಾಲ್‌...!

ನಿಮ್ಮ ಕಾಮೆಂಟ್ ಬರೆಯಿರಿ

advertisement