10 ವರ್ಷಗಳಲ್ಲಿ ದೇಶದ ಆರ್ಥಿಕತೆ ನಿಷ್ಕ್ರಿಯಗೊಳಿಸಿದ ಯುಪಿಎ ಸರ್ಕಾರ : ಮೋದಿ ಸರ್ಕಾರದ ಶ್ವೇತಪತ್ರ

ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರ್ಮನ್ ಅವರು ಗುರುವಾರ (ಫೆಬ್ರವರಿ 8) ಲೋಕಸಭೆಯಲ್ಲಿ ‘ಭಾರತೀಯ ಆರ್ಥಿಕತೆಯ ಶ್ವೇತಪತ್ರ’ದ ಪ್ರತಿಯನ್ನು ಮಂಡಿಸಿದ್ದಾರೆ. ಯುಪಿಎ ಅವಧಿಯ 10 ವರ್ಷಗಳಲ್ಲಿ ಇದ್ದ ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಮೋದಿ ಸರ್ಕಾರ ಬಂದ ನಂತರ ಈವರೆಗಿನ 10 ವರ್ಷಗಳಲ್ಲಿನ ದೇಶದ ಆರ್ಥಿಕ ಪರಿಸ್ಥಿತಿಯ ವಿಶ್ಲೇಷಣಾ ವರದಿಯೊಂದನ್ನು ಕೇಂದ್ರ ಸರ್ಕಾರ ಶ್ವೇತಪತ್ರದ ರೂಪದಲ್ಲಿ ದೇಶದ ಸಂಸತ್ತಿನ ಮುಂದಿಟ್ಟಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯ 10 ವರ್ಷಗಳ ಆರ್ಥಿಕ ಸ್ಥಿತಿಗತಿ ಜೊತೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ 10 ವರ್ಷಗಳ ಆರ್ಥಿಕ ಸಾಧನೆಯನ್ನು ಹೋಲಿಕೆ ಮಾಡಿ ‘ಶ್ವೇತಪತ್ರ’ ಹೊರತರುವುದಾಗಿ ಫೆಬ್ರವರಿ 1 ರಂದು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಸರ್ಕಾರ ಘೋಷಿಸಿತ್ತು.
ಗುರುವಾರ (ಫೆ. 8) ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ರಾಜ್ಯಸಭೆಯಲ್ಲಿ ಶ್ವೇತಪತ್ರವನ್ನು ಮಂಡಿಸಿದರು. ಈ ಶ್ವೇತಪತ್ರದಲ್ಲಿ ಯುಪಿಎ ಸರ್ಕಾರ ಅವಧಿಯಲ್ಲಿ ಆಗಿರುವ ಹಣದುಬ್ಬರ, ವಿತ್ತೀಯ ಕೊರತೆಗಳ ಬಗ್ಗೆ ಉಲ್ಲೇಖಿಸಲಾಗಿದೆ. ಅಲ್ಲದೆ, ದೇಶದ ಆರ್ಥಿಕತೆ ಬೆಳೆಯಲು ಕಾಂಗ್ರೆಸ್ ಸರ್ಕಾರ ಹೇಗೆ ಕಾರಣವಾಗಿತ್ತೋ ಅದೇ ರೀತಿ ಆರ್ಥಿಕತೆ ದುರ್ಬಲವಾಗಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೇ ಕಾರಣ ಎಂದು ಹೇಳಿದೆ.

ಯುಪಿಎ ಸರ್ಕಾರವು “ಆರೋಗ್ಯಕರ ಆರ್ಥಿಕತೆಯನ್ನು 10 ವರ್ಷಗಳಲ್ಲಿ ನಿಷ್ಕ್ರಿಯಗೊಳಿಸಿದೆ” ಎಂದು ಹೇಳಿದ ಕೇಂದ್ರ ಸರ್ಕಾರವು ಇದನ್ನು “ಕಳೆದುಹೋದ ದಶಕ” ಎಂದು ಕರೆದಿದೆ. ಯುಪಿಎ, ಆರ್ಥಿಕ ದುರುಪಯೋಗದ ಜಾಡು ಬಿಟ್ಟಿದೆ ಮತ್ತು “ಸಾರ್ವಜನಿಕ ಹಣಕಾಸಿನ ನಿರ್ವಹಣೆಯಲ್ಲಿ ದೂರದೃಷ್ಟಿಯ ಕೊರತೆ… ಮತ್ತು ಸ್ಥೂಲ ಆರ್ಥಿಕ ಅಡಿಪಾಯಗಳನ್ನು ದುರ್ಬಲಗೊಳಿಸಿದೆ” ಎಂದು ಹೇಳಿದೆ.
ಆರ್ಥಿಕ ಉದಾರೀಕರಣವನ್ನು ತಂದರೂ ತತ್ವಗಳನ್ನು ಸರ್ಕಾರ ಕೈಬಿಟ್ಟಿತು. ಆರ್ಥಿಕ ದುರುಪಯೋಗ ಮತ್ತು ಆರ್ಥಿಕ ಅಶಿಸ್ತು ಇತ್ತು ಮತ್ತು ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಕೇಂದ್ರವು ಮನಮೋಹನ್ ಸಿಂಗ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಹೊರದೇಶಗಳಿಂದ ಅಪಾರ ಪ್ರಮಾಣದಲ್ಲಿ ಸಾಲ ಮಾಡಲಾಯಿತು, ಸಾಲದ ಹಣವನ್ನು ಸರಿಯಾಗಿ ಖರ್ಚು ಮಾಡಲಿಲ್ಲ ಹಾಗೂ ದೇಶದ ಹಣದುಬ್ಬರದ ನಿಯಂತ್ರಣಕ್ಕೆ ಸಮರ್ಪಕ ಕ್ರಮ ಕೈಗೊಳ್ಳಲಿಲ್ಲ ಎಂದು ಯುಪಿಎ ಸರ್ಕಾರದಲ್ಲಿ ಪ್ರಧಾನಿಯಾಗಿದ್ದ ಯುಪಿಎ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಲಾಗಿದೆ.

ಪ್ರಮುಖ ಸುದ್ದಿ :-   ಪೌರತ್ವ (ತಿದ್ದುಪಡಿ) ಕಾಯ್ದೆ ಅಡಿ ಮೊದಲ ಬಾರಿಗೆ 14 ಜನರಿಗೆ ಪೌರತ್ವ ಪ್ರಮಾಣಪತ್ರ ನೀಡಿದ ಕೇಂದ್ರ ಸರ್ಕಾರ

ವಿಪರ್ಯಾಸವೆಂದರೆ, 1991 ರ ಸುಧಾರಣೆಗಳ ಕ್ರೆಡಿಟ್ ತೆಗೆದುಕೊಂಡ ಯುಪಿಎ (UPA) ನಾಯಕತ್ವವು 2004ರಲ್ಲಿ ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ಕೈಬಿಟ್ಟಿತು. 2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಯಾವುದೇ ವಿಧಾನದಿಂದ ಹೆಚ್ಚಿನ ಆರ್ಥಿಕ ಬೆಳವಣಿಗೆಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಯಿತು. ಬ್ಯಾಂಕಿಂಗ್ ಬಿಕ್ಕಟ್ಟು ಯುಪಿಎ ಸರ್ಕಾರದ ಪ್ರಮುಖ ಮತ್ತು ಕುಖ್ಯಾತ ಪರಂಪರೆಗಳಲ್ಲಿ ಒಂದಾಗಿದೆ. 2014 ರಲ್ಲಿ ಬ್ಯಾಂಕಿಂಗ್ ಬಿಕ್ಕಟ್ಟು ಬೃಹತ್ ಪ್ರಮಾಣದಲ್ಲಿತ್ತು.
ಬಂಡವಾಳದ ಹರಿವು ಪ್ರಾಬಲ್ಯ ಹೊಂದಿರುವ ಯುಗದಲ್ಲಿ, ಬಾಹ್ಯ ವಾಣಿಜ್ಯ ಸಾಲಗಳ (ECB) ಮೇಲೆ ಅತಿಯಾದ ಅವಲಂಬನೆಯಿಂದಾಗಿ ಭಾರತದ ಬಾಹ್ಯ ದುರ್ಬಲತೆ ಹೆಚ್ಚಾಯಿತು ಎಂದು ಶ್ವೇತಪತ್ರ ಹೇಳಿದೆ.
ಸರ್ಕಾರದ ಶ್ವೇತಪತ್ರದ ಪ್ರಕಾರ, 2014 ರಲ್ಲಿ ಭಾರತೀಯ ಆರ್ಥಿಕತೆಯು “ಬಿಕ್ಕಟ್ಟಿನಲ್ಲಿತ್ತು. ಆ ಸಮಯದಲ್ಲಿ ಶ್ವೇತಪತ್ರವನ್ನು ಬಿಡುಗಡೆ ಮಾಡಿದ್ದರೆ “ನಕಾರಾತ್ಮಕ ನಿರೂಪಣೆ” ಮತ್ತು “ಹೂಡಿಕೆದಾರರ ವಿಶ್ವಾಸಕ್ಕೆ ಧಕ್ಕೆಯಾಗುತ್ತಿತ್ತು. ಎನ್ ಡಿಎ ಸರ್ಕಾರ ರಾಜಕೀಯ ಸ್ಥಿರತೆಯ ಲಾಭ ಪಡೆದುಕೊಂಡು ಹೆಚ್ಚಿನ ಆರ್ಥಿಕ ಒಳಿತು ಸಾಧಿಸುವ ಗುರಿಯೊಂದಿಗೆ “ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿತು. ಯುಪಿಎ ಸರ್ಕಾರ ಆರ್ಥಿಕ ಚಟುವಟಿಕೆಗಳನ್ನು ಸುಗಮಗೊಳಿಸಲು “ದಯನೀಯವಾಗಿ ವಿಫಲವಾಗಿತ್ತು ಎಂದು ಶ್ವೇತಪತ್ರ ಹೇಳಿದೆ.
ಎನ್ ಡಿಎ ಸರ್ಕಾರದ ಉತ್ತಮ ಆಡಳಿತ ಹಾಗೂ ಆರ್ಥಿಕ ನಿರ್ವಹಣೆಯಿಂದಾಗಿ 2014ರ ಹಿಂದಿನ ಯುಗದಲ್ಲಿನ ಎಲ್ಲಾ ಸವಾಲುಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಲ್ಲಲಾಗಿದೆ. 2047ರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕಾಗಿರುವುದಿಂದ ಅನೇಕ ಕ್ರಮ ಕೈಗೊಳ್ಳಲಾಗಿದೆ ಎಂದು ಶ್ವೇತಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖ ಸುದ್ದಿ :-   "ಬಂಧನ ಅನೂರ್ಜಿತ" : ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪುರಕಾಯಸ್ಥ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement