ಸೆಲ್ಫಿ ಹುಚ್ಚಿಗೆ ಮೃಗಾಲಯದ ಸಿಂಹದ ಆವರಣಕ್ಕೆ ನುಗ್ಗಿದ ವ್ಯಕ್ತಿ : ಸಿಂಹದ ದಾಳಿಯಿಂದ ದುರಂತ ಅಂತ್ಯ…

ಹೈದರಾಬಾದ್‌ : ದುರಂತ ಘಟನೆಯೊಂದರಲ್ಲಿ, ಗುರುವಾರ ಮಧ್ಯಾಹ್ನ ಆಂಧ್ರಪ್ರದೇಶದ ತಿರುಪತಿಯ ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್‌ನಲ್ಲಿ ವ್ಯಕ್ತಿಯೊಬ್ಬ ಮಾಡಿಕೊಂಡ ಯಡವಟ್ಟಿನಿಂದ ಗಂಡು ಸಿಂಹವು ದಾಳಿ ಮಾಡಿ ಆತನನ್ನು ಕೊಂದ ಘಟನೆ ವರದಿಯಾಗಿದೆ.
ಅಮಲೇರಿದ ಸ್ಥಿತಿಯಲ್ಲಿದ್ದ ಮೃತ ರಾಜಸ್ಥಾನದ ಪ್ರಹ್ಲಾದ ಗುಲ್ಜಾರ್ ಎಂಬ ವ್ಯಕ್ತಿ ಸಿಂಹಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮೃಗಾಲಯದ ನಿಷೇಧಿತ ಆವರಣವನ್ನು ಪ್ರವೇಶಿಸಿದ್ದಾರೆ. ಈ ಆವರಣಗಳು ಮೃಗಾಲಯದ ಅಧಿಕಾರಿಗಳು ಪ್ರಾಣಿಗಳಿಗೆ ಆಹಾರವನ್ನು ಒದಗಿಸುವ ಸ್ಥಳಗಳಾಗಿವೆ. ಕಾಡು ಪ್ರಾಣಿ ಇದ್ದಲ್ಲಿಗೆ ತಲುಪಲು ಎಚ್ಚರಿಕೆ ನೀಡುತ್ತಿದ್ದರೂ ಲಕ್ಷಿಸಿದೆ ಗುಲ್ಜಾರ್ ಕೊನೆಯ ಗೇಟ್ ಅನ್ನು ದಾಟಿದ್ದಾರೆ. ಆಗ ಗಂಡು ಸಿಂಹವು ದಾಳಿ ಮಾಡಲು ಪ್ರಯತ್ನಿಸಿತು ಎಂದು ವರದಿಯಾಗಿದೆ.

ಪ್ರಹ್ಲಾದ, ಪ್ರಾಣ ಉಳಿಸಿಕೊಳ್ಳಲು ಪಕ್ಕದಲ್ಲಿದ್ದ ಮರಕ್ಕೆ ಹತ್ತಿದರು. ಆದರೆ ಭಯದಲ್ಲಿ ಮರದಿಂದ ಬಿದ್ದಿದ್ದು, ಕೆಲವೇ ನಿಮಿಷಗಳಲ್ಲಿ ಸಿಂಹ ದಾಳಿ ಮಾಡಿತು. ಸಿಂಹ ಆತನ ಶರ್ಟ್ ಮತ್ತು ಪ್ಯಾಂಟ್ ಹಿಡಿದು ಮೇಲಕ್ಕೆಳೆದು ಕುತ್ತಿಗೆಗೆ ಕಚ್ಚಿದೆ.
ಘಟನೆಯನ್ನು ನೋಡಿದ ನಂತರ ಮೃಗಾಲಯದಲ್ಲಿದ್ದ ಸಂದರ್ಶಕರು ಭಯಭೀತರಾದರು ಮತ್ತು ಸಿಂಹವನ್ನು ಸ್ಥಳಾಂತರಿಸುವಂತೆ ಸೂಚಿಸಲಾಯಿತು. ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದುರಂತದ ಸಂದರ್ಭಗಳನ್ನು ಅರ್ಥಮಾಡಿಕೊಳ್ಳಲು ತನಿಖೆಗಳು ನಡೆಯುತ್ತಿವೆ.
ಉದ್ಯಾನದ ಅಧಿಕಾರಿಗಳ ಪ್ರಕಾರ, ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಸಿಂಹಗಳು ಮತ್ತು ಹುಲಿಗಳು ಸೇರಿದಂತೆ ಕಾಡು ಪ್ರಾಣಿಗಳಿಗೆ ಪ್ರತ್ಯೇಕ ಆವರಣಗಳಿವೆ. ರಾಜಸ್ಥಾನದ ಅಲ್ವಾರ್‌ನ 38 ವರ್ಷದ ಪ್ರಹ್ಲಾದ ಗುಜ್ಜರ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ, ಸಾರ್ವಜನಿಕರಿಗೆ ನಿಷೇಧವಿದ್ದ ವಿಭಾಗಕ್ಕೆ ಪ್ರವೇಶಿಸಿದ ನಂತರ ಸಿಂಹ ಇರುವ ಆವರಣವನ್ನು ಪ್ರವೇಶಿಸಿದ್ದಾರೆ. ಹಿಂದಕ್ಕೆ ಬರುವಂತೆ ಕೇರ್‌ಟೇಕರ್‌ ಎಷ್ಟೇ ಎಚ್ಚರಿಕೆ ನೀಡಿದರೂ ನಿರ್ಲಕ್ಷಿಸಿ, 25 ಅಡಿ ಎತ್ತರದ ಬೇಲಿಯನ್ನು ಹತ್ತಿ ಆವರಣಕ್ಕೆ ಜಿಗಿದಿದ್ದಾರೆ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಎಎಪಿ ನಾಯಕಿ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ವಿವಾದ ; ಮಲಿವಾಲ್‌ ಬೆಂಬಲಕ್ಕೆ ನಿಂತ ಪ್ರಿಯಾಂಕಾ ಗಾಂಧಿ, ಪ್ರಶ್ನೆಗೆ ಉತ್ತರಿಸದೆ ಮೈಕ್‌ ಮತ್ತೊಬ್ಬರಿಗೆ ಕೊಟ್ಟ ಕೇಜ್ರಿವಾಲ್

ಆದರೆ ಸಿಂಹದೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಉತ್ಸಾಹದಿಂದ ಪ್ರಹ್ಲಾದ ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳನ್ನು ಧಿಕ್ಕರಿಸಿ ಅದರ ಆವರಣವನ್ನು ಪ್ರವೇಶಿಸಿ ದುರಂತ ಅಂತ್ಯವನ್ನು ಕಂಡರು ಎಂದು ಸ್ಥಳೀಯರು ಹೇಳಿದ್ದಾರೆ.
ಡೊಂಗಲ್‌ಪುರ ಎಂಬ ಹೆಸರಿನ ಸಿಂಹವು ಗುಜ್ಜರ್‌ನನ್ನು ಕೊಂದು ಹಾಕಿತು. ಪೊಲೀಸ್ ಕೇಸ್ ದಾಖಲಾಗಿದೆ. ಗುಜ್ಜರ್ ಏಕಾಂಗಿಯಾಗಿ ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದು, ಅಧಿಕಾರಿಗಳು ಅವರ ಕುಟುಂಬವನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೃಗಾಲಯದ ಕ್ಯುರೇಟರ್ ಸಿ ಸೆಲ್ವಂ ಹೇಳಿದ್ದಾರೆ.
ಮೃಗಾಲಯದಲ್ಲಿ ಮೂರು ಸಿಂಹಗಳಿವೆ – ಕುಮಾರ್, ಸುಂದರಿ ಮತ್ತು ಡೊಂಗಲ್ಪುರ್ – ಮತ್ತು ಅವುಗಳಲ್ಲಿ ಕೊನೆಯದನ್ನು ಗುರುವಾರ ಪ್ರದರ್ಶಿಸಲಾಯಿತು. ಡೊಂಗಲ್‌ಪುರ ಸಿಂಹವನ್ನು ಈಗ ಪಂಜರಕ್ಕೆ ಸ್ಥಳಾಂತರಿಸಲಾಗಿದ್ದು, ನಿಗಾದಲ್ಲಿ ಇರಿಸಲಾಗುವುದು.

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement