ಮುಂಬೈ: ಬಾಲಿವುಡ್ ನಟ ಸೋನು ಸೂದ್ ಅವರ ಪತ್ನಿ ಸೋನಾಲಿ ಸೂದ್ ಮುಂಬೈ-ನಾಗ್ಪುರ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಸೋಮವಾರ ಅಪಘಾತ ಸಂಭವಿಸಿದೆ ಎಂದು ನಟನ ಆಪ್ತ ಮೂಲಗಳು ತಿಳಿಸಿವೆ. ವರದಿಗಳು ಪ್ರಕಾರ, ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಾಗ ಕಾರಿನಲ್ಲಿದ್ದ ಸೋನಾಲಿ ಸೂದ್, ಅವರ ಸಹೋದರಿಯ ಮಗ ಮತ್ತು ಮತ್ತೊಬ್ಬ ಸಹೋದರಿ ಎಂದು ಹೇಳಲಾಗಿದೆ.
ಸೋನಾಲಿ ಮತ್ತು ಆಕೆಯ ಸಹೋದರಿಯ ಮಗ ನಾಗ್ಪುರದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. ಸೋನಾಲಿ ಸಹೋದರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಮಾಹಿತಿ ದೊರೆತ ತಕ್ಷಣ ಸೋನು ಸೂದ್ ನಾಗ್ಪುರ ತಲುಪಿದ್ದಾರೆ.
ಸೋನು ಸೂದ್ ಹಾಗೂ ಸೋನಾಲಿ 1996 ರಲ್ಲಿ ವಿವಾಹವಾಗಿದ್ದಾರೆ. ಸೋನಾಲಿ ಮೂಲತಃ ಆಂಧ್ರಪ್ರದೇಶದವರು. ಈ ದಂಪತಿಗೆ ಅಯಾನ್ ಮತ್ತು ಇಶಾಂತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಸೋನಾಲಿ ನಾಗ್ಪುರ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದು, ಈಗ ಚಲನಚಿತ್ರ ನಿರ್ಮಾಪಕಿಯಾಗಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ