ಟೋಕಿಯೊ ಒಲಿಂಪಿಕ್ಸ್ ಗ್ರಾಮದಲ್ಲಿ ಇಬ್ಬರು ಅಥ್ಲೀಟುಗಳಿಗೆ ಕೊರೊನಾ ಪಾಸಿಟಿವ್..!

ಟೊಕಿಯೋ : ಟೋಕಿಯೊ ಒಲಿಂಪಿಕ್ಸ್ ಸಂಘಟಕರು ಭಾನುವಾರ ಇಬ್ಬರು ಆಥ್ಲೀಟ್‌ ಗಳು ಕೋವಿಡ್-19 ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.
ಒಲಿಂಪಿಕ್ ಹಿನ್ನೆಲೆಯಲ್ಲಿ ಕ್ರೀಡಾಗ್ರಾಮದಲ್ಲಿ ಜನಸಂಖ್ಯೆ ಹೆಚ್ಚಾಗಿರುವುದರಿಂದ ಕೊರೋನಾ ಪ್ರಕರಣವೂ ಹೆಚ್ಚುತ್ತಿದೆ. ಒಲಿಂಪಿಕ್ ವಿಲೇಜ್ ನಲ್ಲಿ ಉಳಿದಿರುವ ಇಬ್ಬರು ಕ್ರೀಡಾಪಟುಗಳಲ್ಲಿ ಕೊರೋನಾ ಸೋಂಕು ಕಂಡು ಬಂದಿದೆ. ಇನ್ನೊಬ್ಬ ಹೆಸರಿಸದ ಕ್ರೀಡಾಪಟು ಜಪಾನಿನ ರಾಜಧಾನಿ ಟೋಕಿಯೊಕ್ಕೆ ಆಗಮಿಸಿದ ನಂತರ ಪಾಸಿಟಿವ್ ಪರೀಕ್ಷಿಸಿದ್ದಾರೆ, ಆದರೆ ಅವರು ಕ್ರೀಡಾಗ್ರಾಮ ಪ್ರವೇಶಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಕ್ರೀಡಾ ಗ್ರಾಮದಲ್ಲಿ ಮೊದಲ ಸೋಂಕು ಪತ್ತೆಯಾದ ನಂತರದಲ್ಲಿ ಈಗ ಮತ್ತೊಂದು ಸೋಂಕು ಪತ್ತೆಯಾಗಿದೆ. ದಕ್ಷಿಣ ಕೊರಿಯಾದ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಸದಸ್ಯರೊಬ್ಬರು ಶನಿವಾರ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಟೋಕಿಯೊಕ್ಕೆ ಆಗಮಿಸಿದ ನಂತರ ಕೊರೊನಾ ವೈರಸ್ ಗೆ ಪಾಸಿಟಿವ್ ಪರೀಕ್ಷಿಸಿದ್ದಾರೆ ಮತ್ತು ಅವರನ್ನು ಪ್ರತ್ಯೇಕಿಸಲಾಗಿದೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement