ಮುಂಬೈ: ಸುಶಾಂತ್ ಸಿಂಗ್ ರಜಪೂತ್ ರೂಮ್ಮೇಟ್ ಸಿದ್ಧಾರ್ಥ್ ಪಿಥಾನಿಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಬಂಧಿಸಿದೆ, ಮುಂಬೈನಲ್ಲಿ ನಟನ ಮರಣದ ಸುಮಾರು ಒಂದು ವರ್ಷದ ನಂತರ, ಈಗ ಡ್ರಗ್ಸ್ ಪ್ರಕರಣದಲ್ಲಿ ಪಿಥಾನಿ ಬಂಧಿಸಲಾಗಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಮುಗಿಯದ ಕಥೆಯಾಗಿದೆ. ಸುಶಾಂತ್ ಮೃತಪಟ್ಟು ವರ್ಷ ಕಳೆಯುತ್ತಿದೆ. ಇದುವರೆಗೂ ನಿಖರವಾದ ಕಾರಣ ಭೇದಿಸುವಲ್ಲಿ ಪೊಲೀಸರು, ಸಿಬಿಐ ಯಶಸ್ವಿಯಾಗಿಲ್ಲ.
ಇದೀಗ ಎನ್ಸಿಬಿ ಪೊಲೀಸರು ಸುಶಾಂತ್ ಸಿಂಗ್ ಸ್ನೇಹಿತ ಹಾಗೂ ಫ್ಯ್ಲಾಟ್ ಸಹಪಾಠಿ ಆಗಿದ್ದ ಸಿದ್ಧಾರ್ಥ್ ಪಿಥಾನಿಯನ್ನು ಬಂಧಿಸಿದ್ದಾರೆ. ಇದು ಪ್ರಕರಣ ಬಗ್ಗೆ ಮತ್ತೆ ಕುತೂಹಲ ಹೆಚ್ಚಿಸಿದೆ.
ಸುಶಾಂತ್ ಸಿಂಗ್ ಸಾವಿಗೂ ಮುನ್ನ ಫ್ಲ್ಯಾಟ್ನಲ್ಲಿ ನಾಲ್ಕು ಜನರು ಇದ್ದರು ಎಂಬ ಮಾಹಿತಿ ಇದೆ. ಅದರಲ್ಲಿ ಒಬ್ಬರಾಗಿದ್ದ ಸಿದ್ಧಾರ್ಥ್ ಪಿಥಾನಿಯನ್ನು ಹೈದರಾಬಾದ್ನಲ್ಲಿ ಎನ್ಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಇದಕ್ಕೂ ಮೊದಲು ಮುಂಬೈ ಪೊಲೀಸರು, ಸಿಬಿಐ ಅಧಿಕಾರಿಗಳು ಸಿದ್ದಾರ್ಥ್ ಪಿಥಾಣಿ ವಿಚಾರಣೆ ಹಲವು ಬಾರಿ ನಡೆಸಿದ್ದರು. ವರ್ಷದ ಬಳಿಕ ಸಿದ್ಧಾರ್ಥ್ ಅರೆಸ್ಟ್ ಮಾಡುತ್ತಿರುವುದು ಪ್ರಕರಣದ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದೆ.
ಜೂನ್ 14, 2020ರಲ್ಲಿ ಮುಂಬೈನ ಫ್ಲ್ಯಾಟ್ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ಶವ ಪತ್ತೆಯಾಗಿತ್ತು. ಅನುಮಾನಸ್ಪಾದ ಸಾವು ಎಂಬ ಕಾರಣಕ್ಕೆ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಸ್ನೇಹಿತರು, ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದರು. ಬಳಿಕ, ಈ ಕೇಸ್ ಸಿಬಿಐಗೆ ವರ್ಗಾವಣೆ ಆಗಿತ್ತು.
ಡ್ರಗ್ಸ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ, ಸಹೋದರರ ಶೌವಿಕ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಈಗ ಇದೇ ಪ್ರಕರಣದಲ್ಲಿ ಸಿದ್ಧಾರ್ಥ್ ಪಿಥಾನಿಯನ್ನು ಬಂಧಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ