ವೀಡಿಯೊ….| ರಾಮಲೀಲಾ ನಾಟಕದಲ್ಲಿ ʼಹನುಮಂತʼನ ಪಾತ್ರಧಾರಿ ವೇದಿಕೆಯಲ್ಲೇ ಕುಸಿದುಬಿದ್ದು ಸಾವು

ಹರಿಯಾಣದ ಭಿವಾನಿಯಲ್ಲಿ ಸೋಮವಾರ ‘ರಾಮಲೀಲಾ’ ನಾಟಕದಲ್ಲಿ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ಕುದಿಬಿದ್ದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹರೀಶ ಮೆಹ್ತಾ ಎಂದು ಗುರುತಿಸಲಾದ ಹುನುಮಂತನ ಪಾತ್ರಧಾರಿ ತನ್ನ ಪ್ರದರ್ಶನದ ಸಮಯದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಭಿವಾನಿಯ ಜವಾಹರ ಚೌಕ್ ಪ್ರದೇಶದಲ್ಲಿ ಭಗವಾನ್ ರಾಮನ ಗೌರವಾರ್ಥ “ರಾಜ ತಿಲಕ” ಎಂಬ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಕಾರ್ಯಕ್ರಮವು ಹಾಡಿನ ಮೂಲಕ ಶ್ರೀರಾಮನ ಪಟ್ಟಾಭಿಷೇಕದ ಸಿದ್ಧತೆಗಳನ್ನು ಒಳಗೊಂಡಿತ್ತು. ಹಾಡಿನ ಮುಕ್ತಾಯದ ನಂತರ, ಹನುಮಂತನ ಪಾತ್ರ ನಿರ್ವಹಿಸಿದ್ದ ಹರೀಶ ಮೆಹ್ತಾ ಅವರು, ಭಗವಾನ್ ರಾಮನ ಪಾತ್ರಧಾರಿಯ ಕಾಲಿಗೆರಿಗಿ ಪ್ರಾರ್ಥನೆ ಸಲ್ಲಿಸಬೇಕಿತ್ತು.
ಹರೀಶ ಅವರು ರಾಮನ ಪಾತ್ರಧಾರಿ ಪಾದಗಳಿಗೆ ನಮಸ್ಕರಿಸುವಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದರು.

ಸ್ವಲ್ಪ ಸಮಯದವರೆಗೆ, ಪ್ರೇಕ್ಷಕರು ಹಾಗೂ ಅಕ್ಕಪಕ್ಕದಲ್ಲಿದ್ದವರು ಇದು ನಾಟಕದ ಭಾಗವೆಂದು ನಂಬಿದ್ದರು, ಆದರೆ ವೇದಿಕೆಯಿಂದ ಅವರನ್ನು ಎಬ್ಬಿಸಲು ಪ್ರಯತ್ನಿಸಿದಾಗ ಅವರು ಪ್ರತಿಕ್ರಿಯಿಸದೇ ಇದ್ದಾಗ ಗಾಬರಿಯಾದರು. ತಕ್ಷಣವೇ ಹನುಮಂತನ ವೇಷಭೂಷಣದ ಸಮೇತ ಹರೀಶ ಮೆಹ್ತಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರನ್ನು ‘ಮೃತೊಟ್ಟಿದ್ದಾರೆ’ ಎಂದು ಘೋಷಿಸಿದರು.
ಹರೀಶ ಅವರು ವಿದ್ಯುತ್ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಹುದ್ದೆಯಿಂದ ನಿವೃತ್ತರಾಗಿದ್ದರು. ಕಳೆದ 25 ವರ್ಷಗಳಿಂದ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದರು.
ಹರೀಶ ಮೆಹ್ತಾ ಅವರ ಅಕಾಲಿಕ ನಿಧನವು ಅಯೋಧ್ಯೆಯ ರಾಮಮಂದಿರದ ‘ಪ್ರಾಣ ಪ್ರತಿಷ್ಠೆ’ ಸಮಾರಂಭದ ರಾಷ್ಟ್ರವ್ಯಾಪಿ ಆಚರಣೆಯ ನಡುವೆ ಸಂಭವಿಸಿದೆ.

ಪ್ರಮುಖ ಸುದ್ದಿ :-   1950-2015ರ ಅವಧಿಯಲ್ಲಿ ಭಾರತದ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು 7.8% ಕುಸಿತ ; ಅಲ್ಪಸಂಖ್ಯಾತರ ಶೇಕಡಾವಾರು ಹೆಚ್ಚಳ : ಪಿಎಂ-ಇಎಸಿ ಅಧ್ಯಯನ

ಹಿಂದಿನ ದಿನ, ರಾಮಲಲ್ಲಾನ ವಿಗ್ರಹದ ಬಹು ನಿರೀಕ್ಷಿತ ‘ಪ್ರಾಣ ಪ್ರತಿಷ್ಠೆ’ ಸಮಾರಂಭವನ್ನು ವೀಕ್ಷಿಸಲು ಅಯೋಧ್ಯೆಯಲ್ಲಿದ್ದ 65 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ಒಳಗಾದರು. ತಕ್ಷಣವೇ ಕ್ಷಿಪ್ರ ಪ್ರತಿಕ್ರಿಯೆ ತಂಡವು ಅವರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಿತು. ಅವರ ಸ್ಥಿತಿ ಸ್ಥಿರವಾದ ನಂತರ, ಶ್ರೀವಾಸ್ತವ ಅವರನ್ನು ವಿಶೇಷ ಆರೈಕೆಗಾಗಿ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು.
ದೇಶದ ವಿವಿಧ ಭಾಗಗಳಲ್ಲಿ ದೊಡ್ಡ ಮಟ್ಟದ ಆಚರಣೆಗಳು ನಡೆದವು. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಭವ್ಯ ರಾಮ ಮಂದಿರ ಉದ್ಘಾಟಿಸಿದರು, ಇದನ್ನು ಲಕ್ಷಾಂತರ ಜನರು ದೂರದರ್ಶನ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಮನೆಗಳಲ್ಲಿ ವೀಕ್ಷಿಸಿದರು.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಆರೋಪ: ಜನಸಾಮಾನ್ಯರಿಗೆ ರಾಜಭವನದ ಸಿಸಿಟಿವಿ ದೃಶ್ಯಾವಳಿ ತೋರಿಸಿದ ಪಶ್ಚಿಮ ಬಂಗಾಳದ ರಾಜ್ಯಪಾಲ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement