ಸ್ವರ್ವಣಲ್ಲೀ ಗಂಗಾಧರೇಂದ್ರ ಶ್ರೀಗಳ ೩೧ನೇ ಚಾತುರ್ಮಾಸ್ಯ ಆರಂಭ

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ೩೧ನೇ ಚಾತುರ್ಮಾಸ್ಯ ವ್ರತಕ್ಕೆ ಶನಿವಾರ ಸಂಕಲ್ಪ ಮಾಡಿದರು.
ಬಳಿಕ ಆಶೀರ್ವವಚನ ನೀಡಿದ ಶ್ರೀಗಳು, ಇಂದು ಸಾಮೂಹಿಕ ಆಚರಣೆಯಿಂದ ದೂರ ಸರಿದ ಪರಿಣಾಮ ಮನಸ್ಸುಗಳು ವಿಕೃತಗೊಳ್ಳುತ್ತಿವೆ. ಸಣ್ಣ ಸಣ್ಣ ಸಂಗತಿಗಳಿಗೂ ಬೇಸರ ಆಗುತ್ತಿದೆ. ಹಳ್ಳಿಗಳಲ್ಲಿ ಸಾಮೂಹಿಕ ಆಚರಣೆ ಬಿಟ್ಟು ಹೋಗಿದ್ದು ಇದಕ್ಕೆ ಕಾರಣ. ಜನರಲ್ಲಿ ಐಕ್ಯ ಭಾವ ದೂರವಾಗುತ್ತಿದೆ ಎಂದರು.
ಯುವ ಜನತೆ ವಿಕೃತ ಮನಸ್ಥಿತಿಗೆ ಈಡಾಗುತ್ತಿದೆ. ಮನೆಯ ಆತ್ಮೀಯ ವ್ಯಕ್ತಿಗಳಲ್ಲೂ ಜಗಳ ಆಗುತ್ತಿದೆ ಎಂದು ಆತಂಕಿಸಿದರು.
ವ್ಯಾಸ ಎಂದರೆ ವಿಸ್ತಾರ ಎಂದರ್ಥ. ಯತಿಗಳಿಗೆ ವ್ಯಾಸ ಪೂರ್ಣಿಮೆಯಂದು ಚಾತುರ್ಮಾಸ ಸಂಕಲ್ಪ ಮಾಡುತ್ತಾರೆ. ಒಂದು ವಿಷಯವನ್ನು ವಿಸ್ತಾರವಾಗಿ, ಸಂಕ್ಷೇಪವಾಗಿ ಹೇಳುವುದೇ ಪಾಂಡಿತ್ಯ. ಅಂಥ ಪಾಂಡಿತ್ಯ ವಾಸ್ಯರಲ್ಲಿ ಇತ್ತು. ಸನ್ಯಾಸಿಗಳಿಗೆ ವಿಶೇಷ ವ್ರತ ಇದು. ಸನ್ಯಾಸಿಗಳು ಚಾತುರ್ಮಾಸ್ಯ ವ್ರತ ತಪ್ಪದೇ ಮಾಡಬೇಕು. ಚಾತುರ್ಮಾಸ್ಯ ವ್ರತ ಅಚರಣೆ ಮಾಡಿದರೆ ಯಶಸ್ಸಿಗೆ ವೇಗ ಸಿಗುತ್ತದೆ. ಇವತ್ತಿನ ವಾತಾವರಣದಲ್ಲಿ ಸಮಾಜದಲ್ಲಿ ಧರ್ಮ ಪರಂಪರೆ ಬಿಡುವ ಕಡೆ ಹೋಗಿದ್ದಾರೆ. ಧರ್ಮ ಸಂಪ್ರದಾಯ ಬಿಡುವ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಾರೆ. ಹತ್ತನೇ ತರಗತಿ ಮುಗಿಯುತ್ತಿದ್ದಂತೆ ವಿದ್ಯಾಭ್ಯಾಸದ ಹೆಸರಿನಲ್ಲಿ ದೂರದ ಊರಿಗೆ ಕಳಿಸುತ್ತಾರೆ.ಹೀಗಾದರೆ ಮಕ್ಕಳಿಗೆ ಧರ್ಮ ಪರಂಪರೆ ಗೊತ್ತಾಗದು. ಹಿರಿಯರಿಗೆ ಗೊತ್ತಿದ್ದರೂ ಕಲಿಸುತ್ತಿಲ್ಲ. ಧರ್ಮ ಪರಂಪರೆ ಬಿಟ್ಟು ಹೋಗಿದ್ದರಿಂದ ಸಮಾಜದಲ್ಲಿ ಅನೇಕ ಅನರ್ಥಗಳಾಗುತ್ತಿವೆ ಎಂದರು.
ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ, ಅಭಿವೃದ್ಧಿ ಮಂಡಳಿ ನಿರ್ದೇಶಕ ಎಸ್.ಎಂ.ಹೆಗಡೆ ಬಣಗಿ ಇದ್ದರು.
ಇದೇ ವೇಳೆ ಹಿರಿಯ ವಿದ್ವಾಂಸ ವಿಶ್ವೇಶ್ವರ ಭಟ್ಟ ಕೆರೇಕೈ, ನಿವೃತ್ತ ಪ್ರಾಧ್ಯಾಪಕ ಆರ್.ಎಸ್.ಹೆಗಡೆ ಭೈರುಂಬೆ ಅವರನ್ನು ಶ್ರೀಗಳು ಸಮ್ಮಾನಿಸಿದರು. ರಾಮಾನುಭವ ತಾಳಮದ್ದಳೆ ಸಪ್ತಾಹದ ಧ್ವನಿಮುದ್ರಿಕೆ ಬಿಡುಗಡೆಗೊಳಿಸಲಾಯಿತು. ಈ ಕುರಿತು ಯಕ್ಷಶಾಲ್ಮಲಾದ ಕಾರ್ಯದರ್ಶಿ ನಾಗರಾಜ್ ಜೋಶಿ ಸೋಂದಾ ಮಾಹಿತಿ ನೀಡಿದರು. ಆರ್.ಎನ್.ಭಟ್ ವಂದಿಸಿದರು. ಶಂಕರ ಭಟ್ಟ ಉಂಚಳ್ಳಿ ನಿರ್ವಹಿದರು.ಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ಸ್ವಾಗತಿಸಿದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement