ಮಹಾರಾಷ್ಟ್ರದಲ್ಲಿ 37 ಸಾವಿರಕ್ಕೆ ಕುಸಿದ ದೈನಂದಿನ ಕೊರೊನಾ ಪ್ರಕರಣ, ಮುಂಬೈನಲ್ಲಿ 1.8 ಸಾವಿರಕ್ಕಿಂತ ಕಡಿಮೆ..!

ಮುಂಬೈ: ಕಳೆದ 24 ಗಂಟೆಗಳಲ್ಲಿ 37,236 ಹೊಸ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಸೋಮವಾರ ವರದಿಯಾಗಿದ್ದು, ಕೋವಿಡ್ -19 ಪ್ರಕರಣಗಳಲ್ಲಿ ಸ್ವಲ್ಪ ಕುಸಿತ ಕಂಡಿದೆ.
ಭಾನುವಾರ, ಮಹಾರಾಷ್ಟ್ರದಲ್ಲಿ 48,401 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿತ್ತು. ರಾಜ್ಯವು ಸೋಮವಾರ ದೈನಂದಿನ ಸಾವುಗಳ ಕುಸಿತವನ್ನೂ ವರದಿ ಮಾಡಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ, ಮಹಾರಾಷ್ಟ್ರದಲ್ಲಿ 549ಕೊರೊನಾ ಸಾವುಗಳು ಸಂಭವಿಸಿವೆ, ಭಾನುವಾರ 572 ರಷ್ಟಿತ್ತು.
ಕಳೆದ 24 ಗಂಟೆಗಳಲ್ಲಿ 61,607 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ, ಮಹಾರಾಷ್ಟ್ರದ ಕೊರೊನಾ ವೈರಸ್‌ ಒಟ್ಟು ಪ್ರಕರಣ 51,38,973ಕ್ಕೆ ಏರಿದೆ.
ಮಹಾರಾಷ್ಟ್ರದ ರಾಜಧಾನಿ ಮುಂಬೈ ಕೂಡ ತನ್ನ ದೈನಂದಿನ ಕೊರೊನಾ ಪ್ರಕರಣಗಳಲ್ಲಿ ಕುಸಿತ ಕಂಡಿದೆ.. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಂಕಿಅಂಶಗಳ ಪ್ರಕಾರ, ಮುಂಬೈನಲ್ಲಿ 24 ಗಂಟೆಗಳ ಅವಧಿಯಲ್ಲಿ ಕೇವಲ 1,794 ಪ್ರಕರಣಗಳು ಮತ್ತು 74 ಸಾವುಗಳು ಸಂಭವಿಸಿವೆ. ಇತ್ತೀಚಿನ ದಿನಗಳಲ್ಲಿ ಇದು ಅತಿ ಕಡಿಮೆ ಪ್ರಕರಣಗಳಾಗಿವೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement