ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ದೈನಂದಿನ ಸೋಂಕಿತರ ಸಂಖ್ಯೆ ನಲವತ್ತು ಸಾವಿರ ಒಳಗೆ ಬಂದಿದೆ.
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 37,733 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, ಹಾಗೂ ಇದೇ ವೇಳೆ 21,149 ಕೊರೊನಾ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇದುವರೆಗೆ ಒಟ್ಟು 1164398 ಮಂದಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ, 421436 ಸಕ್ರಿಯ ಪ್ರಕರಣಗಳಿವೆ. ಒಂದೇ ದಿನದಲ್ಲಿ 217 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 16011 ಸೋಂಕಿತರು ಮೃತಪಟ್ಟಿದ್ದಾರೆ.
ಬಾಗಲಕೋಟೆ 691, ಬಳ್ಳಾರಿ 1156, ಬೆಳಗಾವಿ 372, ಬೆಂಗಳೂರು ಗ್ರಾಮಾಂತರ 286, ಬೆಂಗಳೂರು ನಗರ 21199, ಬೀದರ್ 584, ಚಾಮರಾಜನಗರ 271, ಚಿಕ್ಕಬಳ್ಳಾಪುರ 446, ಚಿಕ್ಕಮಗಳೂರು 166, ಚಿತ್ರದುರ್ಗ 152, ದಕ್ಷಿಣ ಕನ್ನಡ 996, ದಾವಣಗೆರೆ 317, ಧಾರವಾಡ 741, ಗದಗ 118, ಹಾಸನ 792, ಹಾವೇರಿ 157, ಕಲಬುರಗಿ 427, ಕೊಡಗು 246, ಕೋಲಾರ 282, ಕೊಪ್ಪಳ 567, ಮಂಡ್ಯ 653, ಮೈಸೂರು 2750, ರಾಯಚೂರು 445, ರಾಮನಗರ 441, ಶಿವಮೊಗ್ಗ 620, ತುಮಕೂರು 1302, ಉಡುಪಿ 413, ಉತ್ತರ ಕನ್ನಡ 538, ವಿಜಯಪುರ 303, ಯಾದಗಿರಿಯಲ್ಲಿ 302 ಪ್ರಕರಣಗಳು ಪತ್ತೆಯಾಗಿವೆ.
ನಿಮ್ಮ ಕಾಮೆಂಟ್ ಬರೆಯಿರಿ