ತಾಳಗುಪ್ಪ: 36 ವರ್ಷ ಬದುಕಿ ದಾಖಲೆ ಮಾಡಿದ ಮಲೆನಾಡು ಗಿಡ್ಡ ಜಾತಿ ಹಸು ಸಾವು

ಸಾಗರ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಮೀಪದ ಮುಸುವಳ್ಳಿ ನಾರಾಯಣ ಭಟ್ಟ ಅವರ ಗೋಶಾಲೆಯ ಬರೋಬ್ಬರಿ 36 ವರ್ಷ ಬದುಕಿದ್ದ ಹಸು ಕೌಲೆ ಸೋಮವಾರ ಮೃತಪಟ್ಟಿದೆ. ಗೋವು ಇಷ್ಟು ವರ್ಷ ಬದುಕುವುದು ವಿರಳಾತಿವಿರಳ.

ಸಾಮಾನ್ಯವಾಗಿ ಮಿಶ್ರ ತಳಿಯೂ ಸೇರಿದಂತೆ ಗೋವಿನ ಆಯಸ್ಸು 15ರಿಂದ 20 ವರ್ಷ. ದೇಸಿ ತಳಿಯಾದರೆ 20ರಿಂದ 25 ವರ್ಷ ಬದುಕುತ್ತದೆ ಎಂದು ಹೇಳುತ್ತಾರೆ. ಆದರೆ ಮಲೆನಾಡಿ ಗಿಡ್ಡ ತಳಿಯ ಈ ಹಸು ಕೌಲೆ 36 ವರ್ಷ ಬದುಕಿ ದಾಖಲೆ ಬರೆದಿದೆ ಎಂದು ಹೇಳಲಾಗಿದೆ.

 ಮಲೆನಾಡಿನಲ್ಲಿ‌ ಹೆಚ್ಚು ಜನರು ಹಸುಗಳ ಜನ್ಮ ದಿನಾಂಕ, ಅವುಗಳ ವಯಸ್ಸು, ಅವುಗಳ ಕರುಗಳ ಜನನದ ದಿನಾಂಕ ಅಷ್ಟು ನಿಖರವಾಗಿ ಬರೆದಿಡದ ಕಾರಣ ದಾಖಲೆ ಸಿಗುವುದಿಲ್ಲ. ಹಾಗಾಗಿ ಈ ಹಸುಗಳ ಆಯಸ್ಸು ಮತ್ತು ಜೀವಿತಾವಧಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆಯಾಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement