ದೂರು ಹಿಂಪಡೆದಿದ್ದಕ್ಕೆ ಕಾರಣ ನೀಡಿದ ದಿನೇಶ ಕಲ್ಹಳ್ಳಿ

ಬೆಂಗಳೂರು: ರಮೇಶ್ ಜಾರಕಿಹೊಳಿ ವಿರುದ್ಧ ರಾಸಲೀಲೆ ಸಿಡಿ ಬಿಡುಗಡೆ ಮಾಡಿ  ಬೆಂಗಳೂರಿನ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಹಳ್ಳಿ ಕೇಸ್ ಹಿಂಪಡೆದಿದ್ದು, ಅದಕ್ಕೆ ಕಾರಣವನ್ನು ಅವರು ಬಹಿರಂಗ ಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಕಲ್ಹಳ್ಳಿ, ನಾನು ನ್ಯಾಯಕ್ಕಾಗಿ ಹೋರಾಟ ಮಾಡಿದ್ದೆ. ಆದರೆ ನನ್ನ ಈ ನ್ಯಾಯಯುತ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಏನೇನೋ ಹೇಳಿದ್ದಾರೆ. ಕುಮಾರಸ್ವಾಮಿಯವರು ಈ ಪ್ರಕರಣದಲ್ಲಿ ನಾನು 5 ಕೋಟಿ ರೂ. ಡೀಲ್ನಲ್ಲಿ ಭಾಗಿಯಾಗಿದ್ದೇನೆ ಎಂದು ಆರೋಪ ಮಾಡಿದ್ದಾರೆ. ಇದರಿಂದಾಗಿ ಸಾರ್ವಜನಿಕರು ಹಾಗೂ ನನ್ನ ಕುಟುಂಬದವರು, ಹಿತೈಷಿಗಳು ನನ್ನನ್ನು ಅನುಮಾನದಿಂದ ನೋಡುವಂತಾಗಿದೆ. ಇದರಿಂದ ನನಗೆ ಬೇಸರವಾಗಿದ್ದು, ಈ ಕಾರಣದಿಂದಾಗಿ ನಾನು ದಾಖಲಿಸಿದ ಪ್ರಕರಣ ಹಿಂಪಡೆಯುತ್ತಿದ್ದೇನೆ ಎಂದು ಹೇಳಿದರು.
ಸಂತ್ರಸ್ತ ಯುವತಿಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ಅವಳ ಪರವಾಗಿ ದೂರು ಕೊಟ್ಟ ನನ್ನನ್ನೇ ತಪ್ಪಿತಸ್ಥನನ್ನಾಗಿ ಮಾಡುವ ಪ್ರಯತ್ನ ನಡೆದಿದೆ. ನಾನು ಹಣ ಪಡೆದಿದ್ದೇನೆ ಎಂದು ಆರೋಪಿಸಲಾಗುತ್ತಿದೆ. ಕುಮಾರಸ್ವಾಮಿ ಅವರ ಆರೋಪ ಆಧಾರ ರಹಿತವಾಗಿದೆ. ಈ ರೀತಿ ನನ್ನನ್ನೇ ತಪ್ಪಿತಸ್ಥನೆಂದು ಬಿಂಬಿಸಲು ಯತ್ನಿಸುತ್ತಿರುವುದನ್ನು ನೋಡಿ ಬೇಸರಗೊಂಡು ದೂರನ್ನು ಹಿಂಪಡೆಯುತ್ತಿದ್ದೇನೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಸಾವು

2.3 / 5. 3

ಶೇರ್ ಮಾಡಿ :

  1. K p uthappa Uthappa

    Such people should be put behind the bar with out any enquiry/pending enquiry.

ನಿಮ್ಮ ಕಾಮೆಂಟ್ ಬರೆಯಿರಿ

advertisement