ಹುಬ್ಬಳ್ಳಿ:ರಾಜಧಾನಿ ಕಾಲೋನಿಯ ನಿವಾಸಿ ಹಾಗೂ ರಾಷ್ಟ್ರಸೇವಿಕಾ ಸಮಿತಿ ಪ್ರಾಂತೀಯ ಸಹ ಬೌದ್ಧಿಕ ಪ್ರಮುಖರಾಗಿದ್ದ ಸುನಿತಾ ನಾರಾಯಣ ಜಾಧವ (60 ವರ್ಷ) ಭಾನುವಾರ ತೀವ್ರ ಹೃದಯಾಘಾತದಿಂದ ನಿಧನರಾದರು.
ಬೆಳಿಗ್ಗೆ ಆರೋಗ್ಯವಾಗಿದ್ದ ಅವರು ಮನೆಯ ಮಾಳಿಗೆಯಲ್ಲಿ ಬಟ್ಟೆ ಹರವಲು ಹೋದಾಗ ತೀವ್ರ ಹೃದಯಾಘಾತವಾಗಿ ಅಲ್ಲಿಯೇ ಕುಸಿದು ಬಿದ್ದರು. ಅನಂತರ ಅವರು ಮೃತಪಟ್ಟಿದ್ದಾರೆ. . ಅವರ ಪತಿ ನಾರಾಯಣ ಜಾಧವ ವ್ಯಾಪಾರಸ್ಥರು. ಅವರು ಪತಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವರನ್ನುಅಗಲಿದ್ದಾರೆ.
ಕನ್ನಡ, ಹಿಂದಿ, ಮರಾಠಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಅಪಾರ ಹಿಡಿತವಿದ್ದ ಸುನಿತಾ ಜಾಧವ (ಸುನಿತಕ್ಕ) ರಾಷ್ಟ್ರ ಸೇವಿಕಾ ಸಮಿತಿಯ ಒಬ್ಬ ಸಮರ್ಪಿತ ಕಾರ್ಯಕರ್ತೆಯಾಗಿದ್ದರು. ತಮ್ಮ ಬೌದ್ಧಿಕ ಪ್ರತಿಭೆ ಹಾಗೂ ಸಂಘಟನಾ ಚಾತುರ್ಯದಿಂದಾಗಿ ಅವರು ಸಮಿತಿ ಅಮೂಲ್ಯ ಆಸ್ತಿಯಾಗಿದ್ದರು. ಭಜನೆ, ಧಾರ್ಮಿಕ ಹಾಗೂ ರಾಷ್ಟ್ರೀಯ ಪ್ರವಚನಗಳ ಮೂಲಕ ಹೆಸರುವಾಸಿಯಾಗಿದ್ದರು.
ತಮ್ಮ ಬಡಾವಣೆ ಹಾಗೂ ಸಂಘಪರಿವಾರದವರಿಗೆ ಆತ್ಮೀಯ ಅಕ್ಕ ಆಗಿದ್ದ ಅವರು ರಾಷ್ಟ್ರ ಸೇವಿಕಾ ಸಮಿತಿಯ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಅವರು ತಮ್ಮ ಅರವತ್ತನೆಯ ವಯಸ್ಸಿನಲ್ಲಿ ತನ್ನ ಜೀವನಯಾತ್ರೆ ಮುಗಿಸುವಂಥ ಪ್ರಸಂಗ ದೌರ್ಭಾಗ್ಯದ ಹಾಗೂ ದುಃಖದ ಸಂಗತಿ ಆರೆಸ್ಸೆಸ್ನ ಹಿರಿಯ ಪ್ರಚಾರ ಸು.ರಾಮಣ್ಣ ಕಂಬನಿ ಮಿಡಿದಿದ್ದಾರೆ.


GANESHD DHUMMAWAD
Heartfelt condolences on the sad and untimely demise of Sunitakka, may the almighty rest the departed soul in eternal peace, and give courage and strength to the bereaved family to bear the situation OM SHANTI